ರಾಮಕುಂಜ: ಇಲ್ಲಿನ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿವಿಧ ತರಬೇತಿಗಳ ಉದ್ಘಾಟನಾ ಕಾರ್ಯಕ್ರಮ ಜೂ.23ರಂದು ನಡೆಯಿತು.
ಶಾಲಾ ಮುಖ್ಯಗುರು ಸತೀಶ್ ಭಟ್ರವರು ಅಧ್ಯಕ್ಷತೆ ವಹಿಸಿದ್ದರು. ಮ್ಯಾಕ್ರೋ ಟೆಕ್ನಾಲಜಿ ಸಂಸ್ಥೆಯ ಮಾಲೀಕ ಶ್ರೀರಾಮ್ರವರು ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಆರ್ಕೆ ಲ್ಯಾಡರ್ನ ಮಾಲೀಕ ಕೇಶವ್ರವರು ವಿಸ್ತ್ರತ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸಿಸ್ಕೋ ಇಂಡಿಯನ್ ಲಿಮಿಟೆಡ್ ಬೆಂಗಳೂರು ಇದರ ಪ್ರತಿನಿಧಿ ರಘುನಂದನ್ರವರು ಸಂದರ್ಭೋಚಿತವಾಗಿ ಮಾತನಾಡಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ಪ್ರಭಾರವರು ಅಟಲ್ ಟಿಂಕರಿಂಗ್ ಪ್ರಯೋಗಾಲಯದ ಕುರಿತು ಮಾಹಿತಿ ನೀಡಿದರು.
ಶಾಲಾ ಶಿಕ್ಷಕ ಬಾಲಚಂದ್ರ ಮುಚ್ಚಿಂತಾಯರವರು ಸ್ವಾಗತಿಸಿದರು. ಶಿಕ್ಷಕ ವೆಂಕಟೇಶ್ ದಾಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನಿಶ್ಚಿತಾ ಎಸ್.ಜಿ.ವಂದಿಸಿದರು. ಸಿಸ್ಕೋ ಸಂಭ್ರಮ ತಂಡದವರು, ಶಾಲಾ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ನ ಉಪನ್ಯಾಸಕ ದಿನೇಶ್ ಮುಚ್ಚಿಂತಾಯರವರು ಟಿಂಕರಿಂಗ್ ಲ್ಯಾಬ್ನ ಕುರಿತು ಮಾಹಿತಿ ಮತ್ತು ಬೆಂಗಳೂರಿನ ಸಿಸ್ಕೋ ಸಂಭ್ರಮ ತಂಡದವರಿಂದ ಎನ್ಟಿಎಸ್ಇ, ಎನ್ಎಂಎಂಎಸ್, ನಾಟಕ, ವೃತ್ತಿ ಮಾರ್ಗ, ಸಂವಹನ,ಕೌಶಲ್ಯ,ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್ನ ಕುರಿತು ತರಬೇತಿ ನಡೆಯಿತು.