Home_Page_Advt
Home_Page_Advt
Home_Page_Advt

ಶಿಲೆಯಲ್ಲಿ ಕಲೆಯನ್ನು ಅರಳಿಸಿದ ಮೋಹನ್ ಪಾಣಾಜೆಗೆ ಶಿಲ್ಪಕಲಾ ಅಕಾಡೆಮಿ ಬಹುಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಇದರ ವತಿಯಿಂದ 2018ನೇ ಸಾಲಿನ 14ನೇ ವಾರ್ಷಿಕ ಶಿಲ್ಪ ಕಲಾ ಅಜ್ಜಹಳ್ಳಿ ಶಿಲ್ಪಶಾಸ್ತ್ರೀ ನಾಗೇಂದ್ರ ಆಚಾರ್ಯ ಸ್ಮಾರಕ ಬಹುಮಾನಕ್ಕೆ ಪಾಣಾಜೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ಶಿಲ್ಪ ಕಲಾಕೇಂದ್ರದ ಜಿ.ಎಸ್ ಮೋಹನ್ ಕುಮಾರ್ ಆಯ್ಕೆಯಾಗಿದ್ದಾರೆ.

ಪಾಣಾಜೆ ಗ್ರಾಮದ ಆರ್ಲಪದವು ಗುವೆಲ್‌ಗದ್ದೆ ಸುಂದರ ಪೂಜಾರಿ ಮತ್ತು ಲಕ್ಷ್ಮೀ ದಂಪತಿ ಪುತ್ರರಾದ ಮೋಹನ್ ಕುಮಾರ್ ಪ್ರಾಥಮಿಕ ಶಿಕ್ಷಣವನ್ನು ಪಾಣಾಜೆ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಸುಬೋಧ ಪ್ರೌಢಶಾಲೆಯಲ್ಲಿ ಪೂರೈಸಿರುತ್ತಾರೆ. ಸುಭೋದ ಪ್ರೌಢ ಶಾಲಾ ಚಿತ್ರ ಕಲಾ ಶಿಕ್ಷಕಿ ಶಾರದಾರವರ ಮಾರ್ಗದರ್ಶನದಲ್ಲಿ ಕಾರ್ಕಳದ ಸಿ.ಇ ಕಾಮತ್ ಇನ್ಸ್ಟಿಟ್ಯೂಟ್ ಫಾರ್ ಆರ್ಟಿಸಿಯನ್ಸ್ ನಲ್ಲಿ ರೇಖಾ ಚಿತ್ರ ಮರ ಮತ್ತು ಕಲ್ಲು ಕೆತ್ತನೆಯ ಶಿಕ್ಷಣ ವನ್ನು ಪಡೆದು ಬಳಿಕ ಒಂದು ವರ್ಷಕಾಲ ಮಹಾರಾಷ್ಟ್ರದಲ್ಲಿ ದೇವತಾ ವಿಗ್ರಹವನ್ನು ಕೆತ್ತನೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಇವರಲ್ಲಿ ಕಲೆಯಮೇಲಿನ ಆಸಕ್ತಿಯನ್ನು ಕಂಡ ಬಿಲಿಗಿ ವಿಶ್ವನಾಥ್ ಗುಡಿಗರ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಾಗರದ ಕಲಾ ನೈಪುಣ್ಯತೆ ಹೊಂದಿರುವ ಇಂಟರ್ ನ್ಯಾಶನಲ್ ಬ್ರೌನ್ಸ್ ಮೆಡಲಿಸ್ಟ್ ಸ್ಕಲ್ಪಟರ್ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ವಿಪಿನ್ ಭದೌರಿಯಾ ಮಾರ್ಗದರ್ಶನದಲ್ಲಿ ಎರಡು ವರ್ಷಗಳ ಕಾಲ ಹೊಯ್ಸಳ, ಚೋಳ ಹಾಗೂ ಚಾಲುಕ್ಯ ಶೈಲಿಯ ಮರ ಹಾಗೂ ಕಲ್ಲಿನ ಕೆತ್ತನೆಯ ವಿದ್ಯಾಭ್ಯಾಸ ಪಡೆದಿರುತ್ತಾರೆ.

ಸಾಂಪ್ರದಾಯಿಕ ಹಾಗೂ ವಿವಿಧ ಮಾದರಿಯ ಅನೇಕ ದೇವತಾ ವಿಗ್ರಹಗಳನ್ನು ಇವರು ತಯಾರಿಸಿರುತ್ತಾರೆ. ೨೦೧೫ರಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ಗರುಡಾದ್ರಿ ಕಲಾ ಮಂದಿರ ಏರ್ಪಡಿಸಿದ್ದ ಹೊಯ್ಸಳ ಶೈಲಿಯ ಶಿಲಾ ಶಿಲ್ಪ ಕಲಾ ಶಿಬಿರದಲ್ಲಿ ಭಾಗವಹಿಸಿರುತ್ತಾರೆ. 2017ರಲ್ಲಿ ಅಕಾಡೆಮಿಯ ಸಹಯೋಗದೊಂದಿಗೆ ಹಂಪಿ ಉತ್ಸವ, ಅಂಗವಾಗಿ ಏರ್ಪಡಿಸಿದ ರಾಜ್ಯ ಮಟ್ಟದ ಜನಪರ ಶಿಲಾ ಶಿಲ್ಪಕಲಾ ಶಿಬಿರದಲ್ಲಿ ಭಾಗವಹಿಸಿರುತ್ತಾರೆ. ಕರ್ನಾಟಕ ಶಿಲ್ಪ ಕಲಾ ಅಕಾಡಮಿ 2017ರ ಶಿಲ್ಪ ಕಲಾ ಪ್ರದರ್ಶನದಲ್ಲಿ ಶೇಷ ಆಸನ ಕಲ್ಲಿನ ವಿಗ್ರಹವನ್ನು ಪ್ರದರ್ಶಿಸಿರುತ್ತಾರೆ. ಕಲ್ಲಿನ ಕೆತ್ತನೆ ಕೆಲಸಗಳನ್ನೆ ಅಧಿಕವಾಗಿ ನಡೆಸುತ್ತಿರುವ ಮೋಹನ್ ಕುಮಾರ್ ದೇವಸ್ಥಾನಗಳ ಮೂಲ ವಿಗ್ರಹಗಳನ್ನೆ ರಚಿಸಿಕೊಟ್ಟಿರುತ್ತಾರೆ. ಮೈಸೂರು, ಬಾಗಲಕೋಟೆ, ಬೆಂಗಳೂರು ಸೇರಿದಂತೆ ನಾನಾ ಕಡೆಗಳಲ್ಲಿನ ದೇವಸ್ಥಾನಗಳಿಗೆ ದೇವರ ವಿಗ್ರಹಗಳನ್ನು ರಚಿಸಿಕೊಟ್ಟಿರುತ್ತಾರೆ. ಬೆಂಗಳೂರಿನ ದೇವಸ್ಥಾನವೊಂದಕ್ಕೆ ಮರದ ವಿಗ್ರಹವನ್ನು ರಚಿಸಿಕೊಟ್ಟಿರುತ್ತಾರೆ. ಇವರ ಶಿಲ್ಪ ಕಲಾ ನಿಪುಣತೆಯನ್ನು ಗುರುತಿಸಿ ಹಂಪಿ ಲಕ್ಷ ದೀಪೋತ್ಸವ, ಗುಲ್ಬರ್ಗದ ಗರುಡಾದ್ರಿ, ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿ ನಡೆದ ಮಕ್ಕಳ ಹಬ್ಬ ಹಾಗೂ ಪಾಣಾಜೆಯ ವಿದ್ಯಾಶ್ರೀ ಚಾರಿಟಬಲ್ ಟ್ರಸ್ಟ್‌ನಿಂದ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಪಡೆದಿರುತ್ತಾರೆ. ಪ್ರಸ್ತುತ ಇವರು ಬೆಂಗಳೂರಿನ ತಾವರೆಕೆರೆ ಮಾಗಡಿ ರಸ್ತೆಯಲ್ಲಿ ಶಿಲ್ಪಕಲಾ ಕೇಂದ್ರ ಎಂಬ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.