

ಪುತ್ತೂರು: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ಪುತ್ತೂರು ವಿಭಾಗದಲ್ಲಿ ಕಿರಿಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ ಜಿ.ಸುಧಾಕರ ಶೆಟ್ಟಿ ಹಾಗೂ ನಗರ ಉಪ ವಿಭಾಗದ ಸಹಾಯಕ ಪಿ.ಮೋನಪ್ಪ ಗೌಡ ಜೂ.30ರಂದು ನಿವೃತ್ತಿ ಹೊಂದಲಿದ್ದಾರೆ.
ಸುಧಾಕರ ಶೆಟ್ಟಿ:
ಕಾಸರಗೋಡು ತಾಲೂಕು ಬಾಳೆಪುಣಿಗುತ್ತು ಮುಡಿಪುವಿನಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರೈಸಿದ್ದರು. ೧೯೮೧ರಲ್ಲಿ ಇಲಾಖೆಗೆ ನೇಮಕಗೊಂಡಿದ್ದರು. ೧೯೯೦ರಲ್ಲಿ ಪುತ್ತೂರು ಉಪ ವಿಭಾಗಕ್ಕೆ ವರ್ಗಾವಣೆಗೊಂಡು ಕಾ ಮತ್ತು ಪಾ ಶಾಖೆಯಲ್ಲಿ ನಿರ್ವಹಣಾ ಹುದ್ದೆ, ಮಪಕ ಓದುಗರಾಗಿ ಆರು ವರ್ಷ ಕರ್ತವ್ಯ ನಿರ್ವಹಿಸಿದ್ದರು. ೧೯೯೬ರಲ್ಲಿ ಸಹಾಯಕ ಉಗ್ರಾಣ ಪಾಲಕರಾಗಿ ಪುತ್ತೂರು ವಿಭಾಗಕ್ಕೆ ನಿಯುಕ್ತಿಗೊಂಡಿದ್ದರು. ೨೦೧೩ರಲ್ಲಿ ಕಿರಿಯ ಇಂಜಿನಿಯರ್ ಆಗಿ ಪದೋನ್ನತಿ ಹೊಂದಿ ಪುತ್ತೂರು ವಿಭಾಗೀಯ ಎಲ್.ಟಿ ರೇಟಿಂಗ್ ಉಪ ವಿಭಾಗಕ್ಕೆ ನಿಯುಕ್ತಿಗೊಂಡಿರುವ ಸುಧಾಕರ ಶೆಟ್ಟಿಯವರು ಒಟ್ಟು 38 ವರ್ಷಗಳ ಕಾಲ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.
ಮೋನಪ್ಪ ಗೌಡ:
ಪಡ್ನೂರು ನಿವಾಸಿಯಾಗಿರುವ ಮೋನಪ್ಪ ಗೌಡರವರು ಉಡುಪಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದರು. ೧೯೮೩ರಲ್ಲಿ ಇಲಾಖೆಗೆ ನೇಮಕಗೊಂಡು ಉಡುಪಿ ವಿಭಾಗದ ಕಾಪುವಿನಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದ್ದರು. ೧೯೯೦ರಲ್ಲಿ ಪುತ್ತೂರು ಉಪ ವಿಭಾಗಕ್ಕೆ ವರ್ಗಾವಣೆಗೊಂಡಿದ್ದರು. ೨೦೦೨ರಲ್ಲಿ ಸಹಾಯಕರಾಗಿ ಪದೋನ್ನತಿ ಹೊಂದಿಟ್ಟು ಒಟ್ಟು ೩೬ ವರ್ಷಗಳ ಕಾಲ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.