ಪುತ್ತೂರು: ಪೆರ್ನೆ ಗ್ರಾಮದ ಮುಂಡೋವಿ ಕೋಡಿಯ ಬಟ್ಯಪ್ಪ ಶೆಟ್ಟಿ ಮತ್ತು ದೆಯ್ಯಕ್ಕುರವರ ಪುತ್ರಿ, ಕೋಡಿಂಬಾಡಿ ನಡುಮನೆ ದಿ. ರಾಮಣ್ಣ ಶೆಟ್ಟಿಯವರ ಪತ್ನಿ ಮಾನಕ್ಕ ನಡುಮನೆ(105ವ)ರವರು ಜೂ.28ರಂದು ನಿಧನರಾಗಿದ್ದಾರೆ. ಮೃತರು ಕೋಡಿಂಬಾಡಿ ಗ್ರಾ.ಪಂ.ಸದಸ್ಯರಾದ ಕಾಂಗ್ರೆಸ್ ಮುಂದಾಳು ಜಗನ್ನಾಥ ಶೆಟ್ಟಿ ಸಹಿತ ಈರ್ವರು ಪುತ್ರರು, ಆರು ಪುತ್ರಿಯರು, 31 ಮೊಮ್ಮಕ್ಕಳು, 46 ಮರಿ ಮಕ್ಕಳು ಹಾಗೂ ಒಂದು ಮರಿಮಗುವನ್ನು ಅಗಲಿದ್ದಾರೆ.
ಶತಾಯುಷಿ ಮಾನಕ್ಕ ಶೆಟ್ಟಿಯವರನ್ನು ಕಳೆದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಸನ್ಮಾನಿಸಿ ಗೌರವಿಸಲಾಗಿತ್ತು.