ಕಡಬ: ಇಲ್ಲಿಯ ಮೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಜೂ. 28ರಂದು ಜನಸಂಪರ್ಕ ಸಭೆ ನಡೆಯಿತು. ಮೆಸ್ಕಾಂ ಜಿಲ್ಲಾ ಅಧೀಕ್ಷಕ ನಂಜಪ್ಪರವರು ಅಧ್ಯಕ್ಷತೆ ವಹಿಸಿ ಮಾತನಾಡಿ 110ಕೆ.ವಿ ವಿದ್ಯುತ್ ಕಾರ್ಯಾಗಾರ ಪ್ರಾರಂಭಿಸಿದ ಬಳಿಕ ಇಲ್ಲಿಯ ಸಂಪೂರ್ಣ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ. ಇಲ್ಲಿ ನಮಗೆ 5 ಎಕ್ರೆ ಜಾಗ ಬೇಕಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್ 5 ಎಕ್ರೆ ಜಾಗದ ವ್ಯವಸ್ಥೆಯನ್ನು ಕಂದಾಯ ಇಲಾಖೆಯಿಂದ ಮಾಡಿಸಲಾಗುವುದು ಎಂದರು.
ನೆಲ್ಯಾಡಿ ಜಿ.ಪಂ ಸದಸ್ಯ ಸರ್ವೋತ್ತಮ ಗೌಡ, ಮರ್ದಾಳ ಗ್ರಾ.ಪಂ ಮಾಜಿ ಅಧ್ಯಕ್ಷ ಹರೀಶ್ ರೈ ನಡುಮಜಲು, ಹಾಜಿ ಕೆ.ಎಂ ಹನೀಫ್ ಕಡಬ, ನೂಜಿಬಾಳ್ತಿಲ ಗ್ರಾ.ಪಂ ಉಪಾಧ್ಯಕ್ಷ ತೋಮಸ್ ಕೆ.ಜೆ, ಎಪಿಎಮ್ಸಿ ಸದಸ್ಯ ಮೇದಪ್ಪ ಗೌಡ, ತೋಮ್ಸನ್ ಕೆ.ಟಿ, ಮೊದಲಾದವರು ವಿದ್ಯುತ್ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿದರು. ಕಡಬ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರ, ತಾ.ಪಂ ಸದಸ್ಯ ಗಣೇಶ್ಕೈಕುರೆ, ಫಝಲ್ ಕೋಡಿಂಬಾಳ, ಪಿ.ವೈ ಕುಸುಮ, ಉಷಾ ಅಂಚನ್, ತೇಜಸ್ವಿನಿ, ಕೆ.ಟಿ ವಲ್ಸಮ್ಮ, ತಾರಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೆಸ್ಕಾಂ ಪುತ್ತೂರು ಕಾರ್ಯನಿರ್ವಾಹಕ ಅಭಿಯಂತರ ನರಸಿಂಹರವರು ಮಾಹಿತಿ ನೀಡಿದರು, ಕಡಬ ಎಇಇ ಸಜಿಕುಮಾರ್ರವರು ಸ್ವಾಗತಿಸಿ , ಜೆಇ ಸತ್ಯನಾರಾಯಣ ವಂದಿಸಿದರು.