Home_Page_Advt
Home_Page_Advt
Home_Page_Advt

ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಗೆ ಪುತ್ತೂರು ಶಾಸಕರ ಭೇಟಿ, ಮೇಲ್ಚಾವಣಿ ನಿರ್ಮಾಣಕ್ಕೆ ಅನುದಾನದ ಭರವಸೆ 

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಗೆ ಜೂ.  26 ರಂದು  ಶಾಸಕ  ಸಂಜೀವ ಮಠಂದೂರು ಭೇಟಿ ನೀಡಿದರು. ನಂತರ ಶಾಲಾಭಿವೃದ್ದಿ ಸಮಿತಿಯ ಸಭೆ ನಡೆಸಿದ ಶಾಸಕರು ಶಾಲಾಭಿವೃದ್ದಿ ಸಮಿತಿಯಲ್ಲಿ ಖಾಲಿಯಿರುವ ಸ್ಥಾನಕ್ಕೆ ನೂತನವಾಗಿ ಸದಸ್ಯರ ಸೇರಿಸಿ ಅದರ ಅನುಮೋದನೆಯನ್ನು ಪಡೆಯಲಾಯಿತು. ನಂತರ ಮಾತನಾಡಿದ ಶಾಸಕರು ಶಾಲಾಭಿವೃದ್ದಿಗೆ ಸಮಿತಿಯ ಎಲ್ಲಾ ಸದಸ್ಯರು ಸಹಕಾರ ನೀಡಿ ಚೆನ್ನಾಗಿ ನೋಡಿಕೊಳ್ಳುವಂತೆ ಹಿತವಚನ ನೀಡಿದರು. ಶೈಕ್ಷಣಿಕ ವರ್ಷದ ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ಬರಲು ಶಾಲಾಭಿವೃದ್ದಿ ಸಮಿತಿ, ಹೆತ್ತವರು ಹಾಗೂ ಶಿಕ್ಷಕರು ಶ್ರಮಿಸುವಂತೆ ಕಿವಿ ಮಾತು ಹೇಳಿದರು.

ಶಾಲೆಯ ಮೂಲಭೂತ ಸೌಕರ್ಯಕ್ಕೆ ಅನುದಾನದ ಭರವಸೆ – ಶಾಲೆಯ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ ಶಾಸಕರಿಗೆ ಸಭೆ ಸಮಾರಂಭ ನಡೆಸಲು ಶಾಲೆಯಲ್ಲಿ ಸಭಾಭವನದ ಕೊರತೆ ಬಗ್ಗೆ ಸಭೆಯಲ್ಲಿ ಬೇಡಿಕೆ ಇಟ್ಟಾಗ ಉತ್ತರಿಸಿದ ಶಾಸಕರು ಶಾಲೆಯ ಮೇಲ್ಚಾವಣಿಯಲ್ಲಿ ಶೀಟಿನ ಮಾಡು ಮಾಡಿ ವ್ಯವಸ್ಥೆ ಮಾಡಲು ನಾನು ರೂ. 2 ಲಕ್ಷ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ಉಪಸ್ಥಿತರಿದ್ದ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರೀಶ್ ಬಿಜತ್ರೆ ಶಾಲೆಯ ಅಭಿವೃದ್ಧಿ ಬಗ್ಗೆ ಮಾತನಾಡಿ ತನ್ನ ನಿಧಿಯಿಂದಲೂ ಮೇಲ್ಚಾವಣಿ ಕಾಮಗಾರಿಗೆ ಒಂದು ಲಕ್ಷ ರೂ ಅನುದಾನ ನೀಡುವುದಾಗಿ ತಿಳಿಸಿದರು.                   

ವೇದಿಕೆಯಲ್ಲಿ ಶಾಲಾಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ನಾಯಕ್ ಬಾಳೆಗುಳಿ, ಸದಸ್ಯರಾದ ರಾಧಾಕೃಷ್ಣ ರೈ ಪಟ್ಟೆ, ಸತ್ಯನಾರಾಯಣ  ರೈ ನುಳಿಯಾಲು, ಬೆಟ್ಟಂಪಾಡಿ ಗ್ರಾ.ಪಂ.ಸದಸ್ಯ ಜಗನ್ನಾಥ ರೈ ಕೊಮ್ಮಂಡ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶ್ಯಾಮಲಾ ಎಂ ಸ್ವಾಗತಿಸಿ  ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.