ಜಯರಾಮ ಶೆಟ್ಟಿಯವರ ಬದುಕು ಸಮಾಜಕ್ಕೆ ಆದರ್ಶ- ಶಿವರಾಮ ಶೆಟ್ಟಿ
ಪುತ್ತೂರು: ಜೂ. 15 ರಂದು ನಿಧನರಾದ ಕಡೇಶಿವಾಲಯ ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಮೈ ನಡ್ಯೇಲು ಜಯರಾಮ ಶೆಟ್ಟಿರವರ ಉತ್ತರಕ್ರಿಯೆಯು ಜೂ. 28 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಜರಗಿತು. ಶ್ರದ್ಧಾಂಜಲಿ ಸಭೆಯಲ್ಲಿ ಪ್ರಗತಿಪರ ಕೃಷಿಕ ಶಿವರಾಮ ಶೆಟ್ಟಿ ಅಮೈರವರು ಮಾತನಾಡಿ ಅಮೈ ನಡ್ಯೇಲು ಜಯರಾಮ ಶೆಟ್ಟಿರವರು ಕಡೇಶಿವಾಲಯ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ತಮ್ಮ ಸೇವಾವಧಿಯಲ್ಲಿ ದಕ್ಷ ಪ್ರಾಮಾಣಿಕ ರೀತಿಯಲ್ಲಿ ಕಾರ್ಯನಿರ್ವಹಿಸಿ, ಜನಮೆಚ್ಚುಗೆಯ ಅಧಿಕಾರಿಯಾಗಿ ಸಮಾಜದ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಜಯರಾಮ ಶೆಟ್ಟಿಯವರ ಬದುಕು ಸಮಾಜಕ್ಕೆ ಆದರ್ಶವಾಗಿದೆ ಎಂದು ನುಡಿನಮನ ಸಲ್ಲಿಸಿದ್ದರು.
ಅಮೈ ನಡ್ಯೇಲು ಜಯರಾಮ ಶೆಟ್ಟಿರವರ ಪತ್ನಿ ರಾಜೀವಿ ಜೆ.ಶೆಟ್ಟಿ, ಮಕ್ಕಳಾದ ಪ್ರತೀಕ್ಷಾ, ಪ್ರಜ್ವಲ್ ಶೆಟ್ಟಿ, ಪ್ರಜ್ಞಾ, ಅಳಿಯದಿಂರಾದ ಪ್ರಮೀತ್ ರೈ, ಸಚಿನ್ ಶೆಟ್ಟಿ, ಸಹೋದರರಾದ ಶಾಂಭವ ಶೆಟ್ಟಿ ಅಮೈ ನಡ್ಯೇಲು, ಜಗನ್ನಾಥ ಶೆಟ್ಟಿ ಅಮೈ ನಡ್ಯೇಲು ಹಾಗೂ ಮೂವರು ಸಹೋದರಿಯರು, ಕುಟುಂಬಸ್ಥರು,ಹಿತೈಷಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು,ಹಾಗೂ ಊರವರು ಸಮಾರಂಭದಲ್ಲಿ ಭಾಗವಹಿಸಿದ್ದರು.