ಪುತ್ತೂರು: ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಕಿರಿಯ ಕ್ಷೇತ್ರಾಧಿಕಾರಿ ಸೇವಂತಿ ಟಿರವರು ಜೂ. 30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಸೇವಂತಿ ಟಿರವರು 1985 ಸೆ. 2 ರಂದು ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ನೌಕರಿಗೆ ಸೇರಿ, ಬೆರಳಚ್ಚುಗಾರರಾಗಿ,ಗುಮಸ್ತೆಯಾಗಿ ಬಳಿಕ ಕಿರಿಯ ಕ್ಷೇತ್ರಾಧಿಕಾರಿಯಾಗಿ ಒಟ್ಟು 34 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸೇವಂತಿ ಟಿರವರು ಬೆಳ್ಳಿಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ ಪಂಜ ಮತ್ತು ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜ್ನಲ್ಲಿ ಶಿಕ್ಷಣವನ್ನು ಪಡೆದಿರುತ್ತಾರೆ.
ಸೇವಂತಿ ಟಿ.ರವರು ಪತಿ ನಿವೃತ್ತ ಶಿಕ್ಷಕ ರುಕ್ಮಯ್ಯ ಗೌಡ, ಪುತ್ರ ವರುಣ್ಪ್ರಕಾಶ್ ಎಂ. ಆರ್, ಸೊಸೆ ನವ್ಯ, ಹಾಗೂ ಪುತ್ರಿ ಸೃಜನಾ ಎಂ.ಆರ್ ರವರೊಂದಿಗೆ ಕಬಕದ ಪೋಳ್ಯ ಎಂಬಲ್ಲಿ ವಾಸವಾಗಿದ್ದಾರೆ.