ಬೆಟ್ಟಂಪಾಡಿ: ನವೋದಯ ಪ್ರೌಢಶಾಲೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮವು ನವೋದಯ ವಿದ್ಯಾಸಮಿತಿಯ ಸಂಚಾಲಕ ವೆಂಕಟ್ರಮಣ ಭಟ್ ಮಂಜುಳಗಿರಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ವಿದ್ಯಾರ್ಥಿ ನಾಯಕನಾಗಿ ದೀಕ್ಷಿತ್. ಬಿ, ಉಪನಾಯಕಿಯಾಗಿ ಅರ್ಚನಾ ಭಾರಧ್ವಾಜ್, ಪ್ರತಿಪಕ್ಷದ ನಾಯಕಿಯಾಗಿ ಅಫ್ರಾ ಕೆ. ಹಾಗೂ ವಿರೋಧ ಪಕ್ಷದ ಉಪನಾಯಕನಾಗಿ ರಕ್ಷಣ್. ರೈ ಪ್ರಮಾಣವಚನ ಸ್ವೀಕರಿಸಿದರು. ಸಭಾಪತಿಯಾಗಿ ರಾಧಾ. ಆರ್, ಉಪಸಭಾಪತಿಯಾಗಿ ಹರ್ಷಿತಾ. ಜಿ, ಸಂಸತ್ ಕಾರ್ಯದರ್ಶಿಯಾಗಿ ಮೇಘಶ್ರೀ, ಉಪಸಂಸತ್ ಕಾರ್ಯದರ್ಶಿಯಾಗಿ ಮಹಮ್ಮದ್ ಸಫ್ವಾನ್, ಕ್ರೀಡಾಮಂತ್ರಿಯಾಗಿ ಅಶ್ವಿನಿ, ಉಪಕ್ರೀಡಾಮಂತ್ರಿಯಾಗಿ ಜಯಶ್ರೀ.ಪಿ, ವಿದ್ಯಾಮಂತ್ರಿಯಾಗಿ ಅಮಿತಾಕುಮಾರಿ, ಉಪವಿದ್ಯಾಮಂತ್ರಿಯಾಗಿ ಪ್ರಜ್ವಲ್ ಎನ್, ರಕ್ಷಣಾಮಂತ್ರಿಯಾಗಿ ಮುಹಮ್ಮದ್ಸಿನಾನ್, ಉಪ ರಕ್ಷಣಾ ಮಂತ್ರಿಯಾಗಿ ಪ್ರಜ್ವಲ್. ರೈ, ಸ್ತ್ರೀಹಿತರಕ್ಷಣಾ ಮಂತ್ರಿಯಾಗಿ ಅಕ್ಷತಾ. ರೈ, ಉಪಸ್ತ್ರೀಹಿತರಕ್ಷಣಾ ಮಂತ್ರಿಯಾಗಿರಮ್ಯಾಎಂ, ನೀರಾವರಿ ಮಂತ್ರಿಯಾಗಿ ಯೋಗೀಶ್ ಕುಮಾರ್.ಬಿ, ಉಪನೀರಾವರಿಮಂತ್ರಿಯಾಗಿ ಮಹಮ್ಮದ್ಅನಾಸ್, ಕೃಷಿ ಮಂತ್ರಿಯಾಗಿ ಸುಮಂತ್. ಎ, ಉಪಕೃಷಿಮಂತ್ರಿಯಾಗಿ ಪುನೀತ್ ಕುಮಾರ್.ಸಿಹೆಚ್, ಆರೋಗ್ಯಮಂತ್ರಿಯಾಗಿ ರಶ್ಮಿತಾ. ಆರ್, ಉಪಆರೋಗ್ಯ ಮಂತ್ರಿಯಾಗಿ ರಶ್ಮಿತಾ. ಕೆ, ಸ್ವಚ್ಚತಾಮಂತ್ರಿಯಾಗಿ ಸಿಂಚನಾ.ಬಿ ಉಪಸ್ವಚ್ಚತಾಮಂತ್ರಿಯಾಗಿ ದಿವ್ಯಶ್ರೀ.ಸಿಹೆಚ್, ಸಾಂಸ್ಕೃತಿಕ ಮಂತ್ರಿಯಾಗಿ ಕ್ಷಮಾ.ಎಸ್,ಉಪ ಸಾಂಸ್ಕೃತಿಕ ಮಂತ್ರಿಯಾಗಿ ಅಶ್ವಿತಾ ಪ್ರಮಾಣ ವಚನ ಸ್ವೀಕರಿಸಿದರು.
ಶಾಲಾ ಸಂಸತ್ತಿನ ಅಧ್ಯಕ್ಷರು ಹಾಗೂ ಮುಖ್ಯಗುರುಗಳಾದ ಮಾಲತಿ. ಬಿ ಇವರು ಸಭಾಪತಿಗೆ ಪ್ರಮಾಣ ವಚನ ಬೋಧಿಸಿ ಶುಭಹಾರೈಸಿದರು. ಶಾಲಾ ಸಂಚಾಲಕರಾದ ವೆಂಕಟ್ರಮಣ ಭಟ್ ಮಂಜುಳಗಿರಿ ನೂತನ ಮಂತ್ರಿಗಳು ತಮ್ಮ ಕರ್ತವ್ಯಪ್ರಜ್ಞೆಯನ್ನು ಅರಿತುನಿಷ್ಠೆಯಿಂದ ಪ್ರಾಮಾಣಿಕರಾಗಿ ಕರ್ತವ್ಯನಿರ್ವಹಿಸಬೇಕೆಂದು ತಿಳಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಯಾನಂದ ರೈಇವರು ನೂತನ ಮಂತ್ರಿಮಂಡಲವನ್ನು ಉದ್ದೇಶಿಸಿ ಮಾತನಾಡಿ ಶಾಲೆಯ ಶಿಸ್ತಿನ ಕಡೆಗೆ ಹೆಚ್ಚಿನ ಗಮನಕೊಡಬೇಕು ಹಾಗೂ ಪ್ರತಿಪಕ್ಷದ ನಾಯಕನ ಪಾತ್ರ ಅತ್ಯಂತ ಪ್ರಮುಖವಾದದ್ದು ಎಂಬುದನ್ನು ತಿಳಿಸಿದರು. ಸಹ ಶಿಕ್ಷಕಿ ಸುಮಂಗಲಾ. ಕೆ ಸಂಸತ್ತಿನ ನಿಯಮಗಳನ್ನು ತಿಳಿಸಿದರು. ಸಹಶಿಕ್ಷಕಿ ಪುಷ್ಪಾವತಿ. ಎಸ್, ಪ್ರವೀಣ ಕುಮಾರಿ, ಶೋಭಾ. ಬಿ, ಭುವನೇಶ್ವರಿ. ಎಂ, ರಾಧಾಕೃಷ್ಣಕೋಡಿಉಪಸ್ಥಿತರಿದ್ದರು.