



ಈಶ್ವರಮಂಗಲ: ಗಜಾನನ ವಿದ್ಯಾಸಂಸ್ಥೆ ಹನುಮಗಿರಿ ಈಶ್ವರಮಂಗಲ ಇಲ್ಲಿ ಜೂ.25ರಂದು ಶಾಲಾ ನಾಯಕ ಮತ್ತು ಉಪನಾಯಕರ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾ ಮೂಲಕ ನಡೆಸಲಾಯಿತು. ಪ್ರೌಢಶಾಲಾ ವಿಭಾಗದ ನಾಯಕನಾಗಿ ವಸಿಷ್ಠ ರೈ ಹಾಗೂ ಉಪನಾಯಕನಾಗಿ ಪ್ರಖ್ಯಾತ್ ಡಿ.ಬಿ., ಮತ್ತು ಪ್ರಾಥಮಿಕ ವಿಭಾಗದ ನಾಯಕನಾಗಿ ಪ್ರಥಮ್ ಹಾಗೂ ಉಪನಾಯಕನಾಗಿ ಪ್ರಸ್ತುತ್ ಆಯ್ಕೆಯಾದರು. ಚುನಾವಣೆಯನ್ನು ಪ್ರಾಂಶುಪಾಲರ, ಮುಖ್ಯೋಪಾಧ್ಯಾಯರ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಸಲಾಯಿತು.