ಪಾಣಾಜೆ: ಪಾಣಾಜೆ ಸುಬೋಧ ಪ್ರೌಢ ಶಾಲೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ, ಡೆಂಗ್ಯೂ ನಿರ್ಮೂಲನೆ ಹಾಗೂ ಚಿಕನ್ ಗುನ್ಯಾ ಸಾಂಕ್ರಾಮಿಕ ರೋಗಗಳ ಮಾಹಿತಿಯನ್ನು ಜೂ .28 ನೀಡಲಾಯಿತು.
ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಡಾ.ಸುರಕ್ಷಾ ರೈಯವರು ಮಲೇರಿಯಾ ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಆರೋಗ್ಯ ಸಹಾಯಕಿ ಜ್ಯೋತಿ ಅವರು ರೋಗಗಳ ಹರಡುವಿಕೆಗೆ ಕಾರಣಗಳು ಹಾಗೂ ರೋಗ ಲಕ್ಷಣಗಳನ್ನು ತಿಳಿಸಿದರು.ಆಶಾ ಕಾರ್ಯಕರ್ತೆಯರಾದ ರತ್ನಾ ಕುಮಾರಿ, ಹಾಗೂ ಉಷಾ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರುಗಳಾದ ನಾರಾಯಣ ಎಸ್ ಕೆ ಸ್ವಾಗತಿಸಿ ಸಹ ಶಿಕ್ಷಕ ಶ್ರೀಪತಿ ಇಂದಾಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.