ಸವಣೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಸವಣೂರು ಗ್ರಾಮ ಪಂಚಾಯತ್ ಇದರ ಸಾಮಾನ್ಯ ಸಭೆಯು ದಿನಾಂಕ 29 ಜೂನ್ ಶನಿವಾರದಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಇಂದಿರಾ ಬಿ ಕೆ ವಹಿಸಿದ್ದರು.ನಾಡಗೀತೆಯೊಂದಿಗೆ ಪ್ರಾರಂಭಿಸಲಾದ ಸಭೆಯ ಆರಂಭದಲ್ಲಿ ಇತ್ತೀಚೆಗೆ ವಿದ್ಯುತ್ ಆಘಾತದಿಂದ ಮೃತಪಟ್ಟ ಮೆಸ್ಕಾಂ ಲೈನ್ ಮ್ಯಾನ್ ಮಿಟ್ಯಾ ನಾಯಕ್ ರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಳೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಪಿಡಿಓ ನಾರಾಯಣ ಬಿ ಓದಿ ಹೇಳಿದರು.ಕಳೆದ ಸಾಲಿನ ಜಮಾ ಖರ್ಚುಗಳ ವಿವರವನ್ನು ಸಲ್ಲಿಸಿ ಅನುಮೋದನೆ ಪಡೆಯಲಾಯಿತು. ವಿವಿಧ ಇಲಾಖೆಗಳಿಂದ ಬಂದ ಪತ್ರಗಳ ಬಗ್ಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವ ನಿರ್ಣಯ ಮಾಡಲಾಯಿತು.ವಿವಿಧ ಇಲಾಖೆಗಳಿಂದ ನೀಡುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಿ ತಲುಪಿಸುವ ಬಗ್ಗೆ ಚರ್ಚಿಸಲಾಯಿತು.ಇಂದಿರಾ ಅವಾಜ್ ಯೋಜನೆಯಡಿ ಮಂಜೂರಾದ ಮನೆಗಳ ಸೂಕ್ತ ಹಂಚಿಕೆಯ ಕುರಿತು ಚರ್ಚಿಸಲಾಯಿತು.ಸಾರ್ವಾಜನಿಕರಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.ಕಟ್ಟಡ ಪರವಾನಿಗೆಗಳ ಕುರಿತು ಬಂದ ಅರ್ಜಿಗಳನ್ನು ಪರಿಶೀಲಿಸಿ ಪರವಾನಗಿ ಮಂಜೂರುಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಕುದ್ಮನಮಜಲು, ಸತೀಶ್ ಅಂಗಡಿ ಮೂಲೆ, ಅಬ್ದುಲ್ ರಝಾಕ್ ಕೆನರಾ, ರಫೀಕ್ ಎಂ ಎ, ಗಿರಿಶಂಕರ ಸುಲಾಯ, ದಿವಾಕರ ಬಂಗೇರ, ಜಯರಾಮ ರೈ ಹಾಗೂ ಸದಸ್ಯೆಯರಾದ ರಾಜೀವಿ ವಿ ಶೆಟ್ಟಿ, ಗಾಯತ್ರಿ ಬರಮೇಲು,ಸುಧಾ ಎನ್ ನಿಡ್ವಣ್ಣಾಯ, ಮೀನಾಕ್ಷಿ ಬಂಬಿಲ, ಚೆನ್ನು, ಜಯಂತಿ ಮಡಿವಾಳ, ನಳಿನಾಕ್ಷಿ, ವಸಂತಿ ಬಸ್ತಿ ಉಪಸ್ಥಿತರಿದ್ದರು.ಗ್ರಾ ಪಂ ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ ಸ್ವಾಗತಿಸಿ, ಲೆಕ್ಕ ಸಹಾಯಕ ಮನ್ಮಥ ಎ ವಂದಿಸಿದರು.ಗ್ರಾ ಪಂ ಸಿಬ್ಬಂದಿಗಳಾದ ಪ್ರಮೋದ್, ದಯಾನಂದ, ಜಯಾ, ಜಯಶ್ರೀ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.