ಆಲಂಕಾರು: ಆಲಂಕಾರು ಗ್ರಾಮದ ನಗ್ರಿ ಮನೆ ನಾರಾಯಣ ನಾಯ್ಕ (69 ವ) ಹೃದಯಾಘಾತದಲ್ಲಿ ಜೂ28 ರಂದು ನಿಧನರಾದರು. ಮೃತರು ಎನ್.ಎಮ್.ಪಿ.ಟಿ.ಯಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತರಾಗಿದ್ದಾರೆ. ಬೆಳಿಗ್ಗೆ ಎಂದಿನಂತೆ ಎದ್ದು ತೋಟದ ಕೆಲಸ ಮುಗಿಸಿ ಮನೆಗೆ ಬರುವಷ್ಟರಲ್ಲಿ ಎದೆ ನೋವು ಆಗುತ್ತಿದೆ ಹೇಳಿದ ನಂತರ ಸ್ವಲ್ಪ ಹೋತ್ತಿನಲ್ಲೆ ಕುಸಿದು ಬಿದ್ದು ಮೃತ ಪಟ್ಟರು ಎಂದು ಮನೆಯವರು ತಿಳಿಸಿದ್ದಾರೆ. ಮೃತರು ಪತ್ನಿ ದೇವಕಿ ಮಕ್ಕಳಾದ ಈಶ್ವರ, ಹೊನ್ನಪ್ಪ, ಧನಂಜಯ, ರಾಧಾಕೃಷ್ಣ, ದಿನೇಶ, ಕಿಶೋರ, ದಾಮೋದರ, ಜಗದೀಶ, ಸುಂದರಿ, ಹಾಗು ರತ್ನಾವತಿ ಹಾಗು ಅಳಿಯಂದಿರನ್ನು ಸೊಸೆಯಂದಿರನ್ನು ಹಾಗು ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.