ಉಪ್ಪಿನಂಗಡಿ: ಇಲ್ಲಿನ ಕೆಂಪಿಮಜಲುನಲ್ಲಿ ಇಲ್ಮಾರ್ ಅಕಾಡೆಮಿ ಆಡಳಿತದ ಅಧೀನದಲ್ಲಿ ಕಾರ್ಯಚರಿಸುತ್ತಿರುವ ನ್ಯೂ ಬಿ ಚಿನ್ನರ ಶಾಲೆ ಜೂನ್ 26ರಂದು ಉದ್ಘಾಟನೆಗೊಂಡಿತು. ನೂತನ ಸಂಸ್ಥೆಯನ್ನು ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ಉದ್ಘಾಟಿಸಿದರು. ಕರುವೇಲು ತಂಙಳ್ ದುವಾಃ ನೆರವೇರಿಸಿದರು. ದ.ಕ. ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ನಝೀರ್ ಮಠ, ಮನ್ಶರ್ ಗ್ರೂಪ್ ಅಕಾಡೆಮಿಕ್ ನಿರ್ದೇಶಕರಾದ ವಸಂತ್ ನಿಟ್ಟೆ, ಸಾದಿಕ್, ಇಂಡಿಯನ್ ಸ್ಕೂಲ್ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಝಕರಿಯ್ಯ ಹಾಗೂ ಚೌಕಿ ಮಸೀದಿ ಖತೀಬ್ ಮುಹಮ್ಮದ್ ಅಶ್ರಫ್ ಅಲಿ ಸಖಾಫಿ ಮಾತನಾಡಿ ಹಾರೈಸಿದರು.
ಇಲ್ಮಾರ್ ಅಕಾಡೆಮಿ ಅಧ್ಯಕ್ಷ ಸಯ್ಯಿದ್ ಆಬಿದ್ ಅಸ್ಸಾಖಾಫ್, ನ್ಯೂ ಬಿ ಕಟ್ಟಡ ಮಾಲೀಕ ಮಹಮ್ಮದ್ ಬ್ಯಾರಿ, ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ತೌಶೀಫ್, ಸ್ಥಳೀಯ ಪ್ರಮುಖರಾದ ಶಬೀರ್ ಕೆಂಪಿ, ಇಬ್ರಾಹಿಂ ಆಚಿ ಕೆಂಪಿ, ಯಾಸೀನ್ ಸಖಾಫಿ, ಜಮಾಲ್ ಕೆಂಪಿ ಉಪಸ್ಥಿತರಿದ್ದರು. ಮನ್ಶರ್ ಗ್ರೂಪ್ ಆಡಳಿತ ನಿರ್ದೇಶಕ ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ನ್ಯೂಬಿ ಸಿಸ್ಟಮ್ ಬಗ್ಗೆ ಮಾಹಿತಿ ನೀಡಿ, ಸ್ವಾಗತಿಸಿದರು.