ಪುತ್ತೂರು: ಚಿನ್ನ ಕಳ್ಳತನದ ಆರೋಪದ ಹಿನ್ನಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ನೀಡಿದ್ದಾರೆಂದು ಆರೋಪಿಸಿ, ಅಪ್ರಾಪ್ತೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಬಾಲಕಿ ವಿರುದ್ಧ ಕೌಡಿಚಾರ್ ನಿವಾಸಿ ಮುಮ್ತಾಜ್ ಎಂಬವರು ದೂರು ನೀಡಿದ್ದರು. ಇದೆ ವಿಚಾರವಾಗಿ ಪೊಲೀಸರು ವಿಚಾರಣೆ ವೇಳೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಚಿನ್ನ ಕದ್ದಿರುವುದನ್ನು ಒಪ್ಪಿಕೊಳ್ಳುವಂತೆ ಪೊಲೀಸರು ಒತ್ತಡ ಹೇರಿದ್ದಲ್ಲದೆ, ಲಾಠಿ ಹಾಗೂ ವಿದ್ಯುತ್ ಶಾಕ್ ನೀಡಿದ್ದಾರೆ ಎಂದು ಅಪ್ರಾಪ್ತೆ ತಿಳಿಸಿದ್ದಾರೆ.