- ಅಂಬಿಕಾ ಬಾಲ ವಿದ್ಯಾಲಯದಲ್ಲಿ ಪದಗ್ರಹಣ ಸಮಾರಂಭ
ಪುತ್ತೂರು : ಬಪ್ಪಳಿಗೆಯ ಅಂಬಿಕಾ ಬಾಲ ವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷ 2019-20 ನೇ ಸಾಲಿನ ಪದಗ್ರಹಣ ಸಮಾರಂಭವು ಜೂನ್ 29 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ನಟ್ಟೋಜ ಧ್ವಜವನ್ನು ಹಸ್ತಾಂತರಿಸಿ ಮಾತನಾಡುತ್ತಾ ನಮ್ಮ ವಿದ್ಯಾಲಯದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಮಂತ್ರಿಮಂಡಲದ ನಾಯಕರುಗಳನ್ನು ವಿದ್ಯಾರ್ಥಿ ಸಂಘಕ್ಕೆ ಆಯ್ಕೆ ಮಾಡಲಾಗಿದೆ.ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಶಾಲೆಯ ಎಲ್ಲಾ ಕಾರ್ಯಗಳಲ್ಲಿಯೂ ಸಕ್ರೀಯವಾಗಿ ಭಾಗವಹಿಸಿ ಯಶಸ್ವಿ ನಾಯಕರುಗಳು ಎಂದೆನಿಸಿಕೊಳ್ಳಬೇಕು, ದೇಶ ಸುಭೀಕ್ಷೆಯಿಂದ ಇರಬೇಕಾದರೆ ಅದನ್ನು ಆಳುವ ನಾಯಕರು ಉತ್ತಮ,ಹಾಗೂ ಭ್ರಷ್ಟಾಚಾರ ರಹಿತ ವ್ಯಕ್ತಿಗಳ ಅವಶ್ಯಕತೆಯಿದೆ.ಹಾಗಾಗಿ ನಮ್ಮ ಲ್ಲಿ ಆಯ್ಕೆಯಾದ ನಾಯಕರು, ಅಲ್ಲದೆ ನಮ್ಮ ಲ್ಲಿ ಕಲಿಯುವ ವಿದ್ಯಾರ್ಥಿಗಳು ವಿದ್ಯಾವಂತರಾಗಿ ಒಳ್ಳೆಯ ಕೆಲಸವನ್ನು ಮಾಡುವುದರ ಮೂಲಕ ಜನಪ್ರಿಯ ವ್ಯಕ್ತಿಗಳಾಗಿ ಹಾಗೂ ಭಾರತದ ನೈಜ ರಾಜಕಾರಣಿಗಳಾಗಿ ಮೂಡಿಬರಬೇಕೆಂದು ಶುಭಹಾರೈಸಿದರು.ಸಮಾರಂಭದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟಿನ ಖಜಾಂಜಿ ಶ್ರೀಮತಿ ರಾಜಶ್ರೀ ನಟ್ಟೋಜ ಉಪಸ್ಥಿತರಿದ್ದರು.
ಮಂತ್ರಿಮಂಡಲದಲ್ಲಿ ಆಯ್ಕೆಯಾದ ಮಂತ್ರಿಗಳಿಗೆ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಸುಜನೀ ಬೋರ್ಕರ್ ಪ್ರಮಾಣ ವಚನ ಬೋಧಿಸಿದರು. ಮಂತ್ರಿಮಂಡಲದ ನಾಯಕರಾಗಿ, ಕು | ಶ್ರೀ ಲಕ್ಷ್ಮಿ ಎಸ್.ಸಿ. , ಉಪನಾಯಕನಾಗಿ ಮಾ | ವರ್ಧಿನ್ ಡಿ.ರೈ, ಇತರ ಮಂತ್ರಿಗಳಾಗಿ ಚಂದನಾ ಇ , ಅದಿತಿ ಯು.ಎನ್ ( ಶಿಸ್ತು ) ಯಶಸ್ವಿ ಸುರುಳಿ, ಅದ್ವೈತ ಕೃಷ್ಣ ( ಶಿಕ್ಷಣ ) ಭವಿಶ್ , ಅನಘ ( ಆರೋಗ್ಯ ) ಶ್ರೀಕೃಷ್ಣ ನಟ್ಟೋಜ , ಜ್ಞಾನ್ ( ಕ್ರೀಡೆ ) ನಿಖಿಲ್ , ಧನುಷ್ ( ಜಲ )
ಮೇಧಾ ಭಟ್, ರಿಧಿ ( ಸಾಂಸ್ಕೃತಿಕ ) ಪ್ರಥ್ವಿ, ಕುಲದೀಪ್ ( ಆಹಾರ ) ವಿರೋಧ ಪಕ್ಷದ ನಾಯಕನಾಗಿ, ಮಾ | ಆತ್ರೇಯ ಭಟ್, ಸಭಾಪತಿಯಾಗಿ ಭಾರ್ಗವಿ ಬೋರ್ಕರ್ ಆಕರ್ಷಕ ಪಥಸಂಚಲನದೊಂದಿಗೆ ಬಂದು ಸಭೆಯಲ್ಲಿ ಹಾಜರಾದರು.
ಮಾ | ಅವನೀಶ ಆರ್ ಯು, ಪ್ರಾರ್ಥಿಸಿ, ಶಿಕ್ಷಕಿ ಶ್ರೀಮತಿ ನಯನ ಸ್ವಾಗತಿಸಿದರು. ಶಿಕ್ಷಕಿ ಸುನೀತಾ ಜೆ.ರೈ ಕಾರ್ಯಕ್ರಮ ನಿರೂಪಿಸಿ, ಸುಜಯ ವಂದಿಸಿದರು.