ಪುತ್ತೂರು: ಪ್ಲಾಸ್ಟೋ ಪ್ರೊಡಕ್ಟ್ ಸಂಸ್ಥೆಯಿಂದ ಪ್ಲಾಸ್ಟಿಕ್ ಶೀಟ್ಗಳನ್ನು ಕಳವುಗೈದ ಆರೋಪ ಎದುರಿಸುತ್ತಿದ್ದ ಅಲ್ಲಿನ ನೌಕರನನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಲಕ್ಷ್ಮಿ ಯು. ಭಟ್ರವರು ಮಾಲಕರಾಗಿರುವ ಮೆ. ಪ್ಲಾಸ್ಟೋ ಪ್ರೊಡಕ್ಟ್ ಸಂಸ್ಥೆಯಿಂದ ೨೦೧೧ರ ಎಪ್ರಿಲ್ ೧ರಿಂದ ೨೦೧೩ರ ಜುಲೈ ೩ರವರೆಗಿನ ಅವಧಿಯಲ್ಲಿ ಸಂಸ್ಥೆಗೆ ಸಂಬಂಧಿಸಿದ ೯ ಲಕ್ಷ ರೂ ಮೌಲ್ಯದ ವಿವಿಧ ಗಾತ್ರ, ತೂಕ ಮತ್ತು ಬಣ್ಣಗಳ ಪ್ಲಾಸ್ಟಿಕ್ ಶಿಟ್ಗಳನ್ನು ಕಳವು ಮಾಡಿದ್ದ ಘಟನೆಗೆ ಸಂಬಂಧಿಸಿ ಅದೇ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ವಿಕ್ಟರ್ ಪಯಾಜ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ೧೫ ಜನ ಸಾಕ್ಷೀದಾರರನ್ನು ವಿಚಾರಣೆಗೊಳಪಡಿಸಿದ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಿಕ್ಟರ್ರವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಆರೋಪಿ ಪರ ವಕೀಲರಾದ ದೇವಾನಂದ ಕೆ,ಸುಚಿತಾ ಕೂಡೇಲು ಮತ್ತು ಮಿಥುನ್ ರೈ ವಾದಿಸಿದ್ದರು.