
ಕಡಬ: ಪಿಜಕ್ಕಳ ಸ.ಕಿ.ಪ್ರಾ.ಶಾಲೆಯ 2019-20ನೇ ಸಾಲಿನ ಶಾಲಾ ಮಂತ್ರಿ ಮಂಡಲವನ್ನು ಚುನಾವಣೆಯ ಮೂಲಕ ರಚನೆ ಮಾಡಲಾಯಿತು.
ಮುಖ್ಯಮಂತ್ರಿ ಸುಧಾಲಕ್ಷ್ಮೀ, ಉಪಮುಖ್ಯಮಂತ್ರಿ ಗಗನ್ ರವರು ಆಯ್ಕೆಯಾದರು. ವಿರೋಧ ಪಕ್ಷದ ನಾಯಕಿಯಾಗಿ ನೇಹಾ ಎ.ಎಸ್. ಆರೋಗ್ಯ ಮಂತ್ರಿಯಾಗಿ ಸುಧಾಲಕ್ಷ್ಮೀ, ಶಿಕ್ಷಣ ಮಂತ್ರಿಯಾಗಿ ಹಸ್ತ, ಕ್ರೀಡಾ ಮಂತ್ರಿಯಾಗಿ ಚಿಂತನ್, ನೀರಾವರಿ ಮಂತ್ರಿಯಾಗಿ ಕೆ.ತನುಶ್ರೀ, ವಾರ್ತಾ ಮಂತ್ರಿಯಾಗಿ ಸಾನ್ವಿಕ, ಸ್ವಚ್ಚತಾ ಮಂತ್ರಿಯಾಗಿ ಸೌಜನ್ಯ, ಕಾನೂನು ಮಂತ್ರಿಯಾಗಿ ಮೋಕ್ಷಿತ್, ಗ್ರಂಥಾಲಯ ಮಂತ್ರಿಯಾಗಿ ಫಾತಿಮತ್ ತುಷಿಹಾನ್, ರಕ್ಷಣಾ ಮಂತ್ರಿಯಾಗಿ ಗಗನ್ ತೋಟಗಾರಿಕಾ ಮಂತ್ರಿಯಾಗಿ ಡ್ಯಾಲಿ, ಸಾಂಸ್ಕೃತಿಕ ಮಂತ್ರಿಯಾಗಿ ಮೌಲ್ಯ.ಪಿ. ಆಯ್ಕೆಯಾದರು. ಮುಖ್ಯ ಶಿಕ್ಷಕಿ ಚೇತನಾರವರು ಮತದಾನ ಪ್ರಕ್ರೀಯೆ ಮತ್ತು ಪ್ರತಿಜ್ಙಾ ವಿಧಿ ನೆರವೇರಿಸಿದರು. ಗೌರವ ಶಿಕ್ಷಕಿ ಕವಿತಾರವರು ಸಹಕರಿಸಿದರು.