ಕಡಬ: ಪುತ್ತೂರು ಲೋಕೋಪಯೋಗಿ ಉಪ ವಿಭಾಗದಲ್ಲಿ ಗ್ಯಾಂಗ್ಮೆನ್ ಆಗಿರುವ ನಾಗೇಶ್ ಗೌಡ ಜೂ.30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಲೋಕೋಪಯೋಗಿ ಇಲಾಖೆಗೆ ೧೯೮೨ರಲ್ಲಿ ತಾತ್ಕಾಲಿಕ ನೆಲೆಯಲ್ಲಿ ಗ್ಯಾಂಗ್ ಮೆನ್ ಆಗಿ ನೇಮಕಗೊಂಡು, ೧೯೯೨ರಲ್ಲಿ ಮಾಸಿಕ ವೇತನ ಸಿಬ್ಬಂದಿಯಾಗಿ ನೇಮಕಗೊಂಡರು. ಇವರು ಒಟ್ಟು ೩೭ ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಸಿರಿಬಾಗಿಲು ಗ್ರಾಮದ ಅನಿಲ ದಿ.ನಾಗಪ್ಪ ಗೌಡ ಮತ್ತು ನೀಲಮ್ಮ ಇವರ ಪುತ್ರರಾಗಿದ್ದಾರೆ.