ಪುತ್ತೂರು ಪ್ರಾ.ಸ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಕಿರಿಯ ಕ್ಷೇತ್ರಾಧಿಕಾರಿ ಸೇವಂತಿರವರಿಗೆ ಬೀಳ್ಕೊಡುಗೆ

  • ಸೇವಂತಿರವರ ಕರ್ತವ್ಯ ಮಾದರಿಯಾಗಿದೆ: ಮನೋಹರ್ ರೈ

ಪುತ್ತೂರು: ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಕಿರಿಯ ಕ್ಷೇತ್ರಾಧಿಕಾರಿ ಸೇವಂತಿ ಟಿ.ರವರು ಜೂ.30ರಂದು ಸೇವಾ ನಿವೃತ್ತಿ ಹೊಂದಲಿದ್ದು, ಈ ಸಂದರ್ಭದಲ್ಲಿ ಜೂ.29ರಂದು ಪುತ್ತೂರು ಪ್ರಾ.ಸ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ಪರವಾಗಿ ಬೀಳ್ಕೊಡುಗೆ ಸಮಾರಂಭ ಜರಗಿತು.

ಪುತ್ತೂರು ಪ್ರಾ.ಸ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಲ್ಲಿ ಸುಮಾರು ೩೪ ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತರಾದ ಸೇವಂತಿ ಟಿ.ರವರನ್ನು ಬ್ಯಾಂಕ್‌ನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸೇವಂತಿರವರ ಕರ್ತವ್ಯ ಮಾದರಿಯಾಗಿದೆ: ಮನೋಹರ್ ರೈ– ಬ್ಯಾಂಕ್‌ನ ಅಧ್ಯಕ್ಷ ಮನೋಹರ್ ರೈ ಎ.ಬಿ.ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ೩೪ ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ, ಸೇವಾ ನಿವೃತ್ತಿ ಹೊಂದಿದ ಸೇವಂತಿ ಟಿ.ರವರ ಕರ್ತವ್ಯ ಮಾದರಿಯಾಗಿದೆ ಎಂದು ಶ್ಲಾಘನೆ ವ್ಯಕ್ತ ಪಡಿಸಿದರು.

ಸೇವಂತಿ ಉತ್ತಮ ಅಧಿಕಾರಿ: ರಂಗನಾಥ ರೈ– ಬ್ಯಾಂಕ್‌ನ ನಿರ್ದೇಶಕ ರಂಗನಾಥ ರೈ ಗುತ್ತುರವರು ಮಾತನಾಡಿ, ಸೇವಂತಿ ಟಿ.ರವರು ಕರ್ತವ್ಯವನ್ನು ದೇವರನ್ನು ಭಾವಿಸಿ ಬ್ಯಾಂಕ್‌ನ ಶ್ರೇಯೋಭಿವೃದ್ಧಿಗೆ ದುಡಿದಿದ್ದಾರೆ. ಇವರು ಉತ್ತಮ ಅಧಿಕಾರಿಯಾಗಿ ಜನ ಪ್ರೀತಿಯನ್ನು ಗಳಿಸಿದ್ದಾರೆ ಎಂದು ಹೇಳಿದರು.

ಜನಮೆಚ್ಚುಗೆಯನ್ನು ಪಡೆದಿದ್ದಾರೆ: ಎಸ್.ಬಿ. ಜಯರಾಮ ರೈ– ಬ್ಯಾಂಕ್‌ನ ನಿರ್ದೇಶಕ ಎಸ್.ಬಿ. ಜಯರಾಮ ರೈರವರು ಮಾತನಾಡಿ ಸೇವಂತಿ ಟಿ.ರವರು ತಮ್ಮ ಸೇವಾವಧಿಯಲ್ಲಿ ಅಚ್ಚುಕಟ್ಟಾದ, ಸಮರ್ಪಕವಾದ ಸೇವಾ ಕಾರ್ಯದಿಂದ ಜನಮೆಚ್ಚುಗೆಯನ್ನು ಪಡೆದಿದ್ದಾರೆ. ಇವರ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.

ಶ್ರಮಪಟ್ಟು ದುಡಿದಿದ್ದಾರೆ: ಹೊನ್ನಪ್ಪ ಗೌಡ- ಬ್ಯಾಂಕ್‌ನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಗೌಡ ರವರು ಮಾತನಾಡಿ ಸೇವಂತಿರವರು ಕೆಲಸಕ್ಕೆ ಸೇರಿದ ದಿನದಿಂದ ಇಂದಿನವರೆಗೆ ಬ್ಯಾಂಕ್‌ನ ಅಭಿವೃದ್ಧಿಗೆ ಶ್ರಮಪಟ್ಟು ದುಡಿದಿದ್ದಾರೆ ಎಂದು ಹೇಳಿದರು.

ಸಮಾನ ಚಿತ್ತ ದುಡಿಮೆ: ಯಶೋಧರ್ ಜೈನ್– ಬ್ಯಾಂಕ್‌ನ ನಿಕಟಪೂರ್ವ ವ್ಯವಸ್ಥಾಪಕರಾದ ಯಶೋಧರ್ ಜೈನ್ ಮಾತನಾಡಿ, ಸಮಾನ ಚಿತ್ತದಿಂದ ಎಲ್ಲರನ್ನು ಸಮಾನ ರೀತಿಯಲ್ಲಿ ಕಂಡು ಬ್ಯಾಂಕ್‌ನ ಅಭಿವೃದ್ಧಿಗೆ ಸೇವಂತಿರವರು ಅಹರ್ನಿಶಿಯಾಗಿ ದುಡಿದಿದ್ದಾರೆ ಎಂದು ಹೇಳಿದರು.

ಸನ್ಮಾನವನ್ನು ಸ್ವೀಕರಿಸಿದ ಸೇವಂತಿ ಟಿ.ರವರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಬ್ಯಾಂಕ್‌ನ ಎಲ್ಲಾ ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸಿದರು. ಸೇವಂತಿ ಟಿ.ರವರ ಪತಿ ನಿವೃತ್ತ ಶಿಕ್ಷಕ ರುಕ್ಮಯ್ಯ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬ್ಯಾಂಕ್‌ನ ಕೋಶಾಧಿಕಾರಿ ಭಾಸ್ಕರ್ ಎಸ್.ಗೌಡ ಇಚ್ಲಂಪಾಡಿ, ರಾಮ್ ಭಟ್ ಹಸಂತಡ್ಕ, ರಾಜಶೇಖರ್ ಜೈನ್ ಎನ್., ನಾಗಕನ್ನಿಕಾ, ಸುನೀತಾ ಸುವರ್ಣ, ನಾರಾಯಣ ಕನ್ಯಾನ, ಗಣೇಶ್ ಉದನಡ್ಕ, ರಾಮ ನಾಯ್ಕ, ಬ್ಯಾಂಕ್‌ನ ಕಡಬ ಶಾಖಾ ವ್ಯವಸ್ಥಾಪಕ ಬಾಲಕೃಷ್ಣ ಪಿ. ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಶ್ರೀ, ನಿವೃತ್ತ ಅಧಿಕಾರಿಗಳಾದ ವಾರಿಜ, ಮಿತ್ರ ಜೈನ್, ಪದ್ಮಯ್ಯ ಗೌಡ, ಬ್ಯಾಂಕ್‌ನ ಗುಮಾಸ್ತೆ ಸುಮನಾ ಎಂ., ಕ್ಷೇತ್ರಾಧಿಕಾರಿ ರೊನಾಲ್ಡ್ ಮಾರ್ಟಿಸ್, ಸಿಬ್ಬಂದಿಗಳಾದ ಆರತಿ ಟಿ.ಕೆ., ವೇಣು ಭಟ್, ಸುರೇಶ್ ಪಿ., ಭರತ್ ಟಿ., ಹರೀಶ್ ಗೌಡ, ಪುನೀತ್ ಕೆ.ಜಿ., ವಿಜಯ ಭಟ್ ಹೆಚ್., ವಿನಯ ಕುಮಾರ್ ಗೌಡ ಬಿ.ಎಸ್., ಶಿವಪ್ರಸಾದ್ ಯು., ಮನೋಜ್ ಕುಮಾರ್ ಕೆ., ಸೇವಂತಿ ಟಿ.ರವರ ಮಗ ವರುಣ್ ಪ್ರಕಾಶ್ ಎಂ.ಆರ್., ಸೊಸೆ ನವ್ಯಾ, ಪುತ್ರಿ ಸೃಜನಾ ಎಂ.ಆರ್., ಸಹೋದರಿ ಸ್ವಾತಿ ಮಲ್ಲಾರ ಉಪಸ್ಥಿತರಿದ್ದರು.
ಬ್ಯಾಂಕ್‌ನ ವ್ಯವಸ್ಥಾಪಕರಾದ ದಯಾಮಣಿ ಕೆ.ರವರು ಸನ್ಮಾನ ಪತ್ರ ವಾಚಿಸಿದರು. ಬ್ಯಾಂಕ್‌ನ ಅಧ್ಯಕ್ಷ ಮನೋಹರ್ ರೈ ಎ.ಬಿ. ಸ್ವಾಗತಿಸಿ, ಉಪಾಧ್ಯಕ್ಷ ಯತೀಂದ್ರ ಕೊಚ್ಚಿ ವಂದಿಸಿದರು. ಬ್ಯಾಂಕ್‌ನ ಕ್ಷೇತ್ರಾಧಿಕಾರಿ ವಿನಯ ಕುಮಾರ್ ಕೆ. ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.