- ಜು.1ರಿಂದ 6-8ನೇ ತರಗತಿಗಳಿಗೆ ಸಂಬಂಧಿಸಿದ ಎಲ್ಲಾ ತರಬೇತಿಗಳನ್ನು ಬಹಿಷ್ಕರಾಕ್ಕೆ ನಿರ್ಧಾರ
ಪುತ್ತೂರು: ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಹೊಂದಿರುವ ಸೇವಾನಿರತ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರನ್ನು ಮುಂಬಡ್ತಿಗೆ ಪರಿಗಣಿಸದೆ, 6ರಿಂದ 8ನೇ ತರಗತಿ ತನಕ ಬೋಧಿಸಲು ನೇರ ಶಿಕ್ಷಕರ ನೇಮಕಾತಿ ನಡೆಸುತ್ತಿರುವ ಸರ್ಕಾರದ ನೀತಿಯನ್ನು ವಿರೋಧಿಸಿ ಸೇವಾ ನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ಜು.1ರಿಂದ 6 ರಿಂದ 8 ನೇ ತರಗತಿಗೆ ಬೋಧನೆಯನ್ನು ಬಹಿಷ್ಕರಿಸುವ ಕುರಿತು ಹಾಗೂ ೬ ರಿಂದ ೮ ನೇ ತರಗತಿಗಳಿಗೆ ಸಂಬಂಧಸಿದ ತರಬೇತಿಗಳಿಗೆ ನಿಯೋಜಿಸುವಂತೆ ಆಗ್ರಹಿಸಿ ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರು ಜೂ.೨೯ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್ರವರಿಗೆ ಮನವಿ ಮಾಡಿದ್ದಾರೆ.
೧ ರಿಂದ ೭ನೇ ತರಗತಿಗೆ ನೇಮಕವಾದ ಶಿಕ್ಷಕರು ೨೦೦೫ ರಿಂದ ೮ನೇ ತರಗತಿ ಪ್ರಾರಂಭಿಸಿದಾಗಿನಿಂದಲೂ ೬-೮ನೇ ತರಗತಿಗಳನ್ನು ಸೇವೆಯಲ್ಲಿರುವ ಪದವೀಧರ ಶಿಕ್ಷಕರು ಭೋದಿಸುತ್ತಾ ಬಂದಿರುತ್ತಾರೆ. ರಾಜ್ಯದಲ್ಲಿ ೮೨ ಸಾವಿರಕ್ಕಿಂತಅಧಿಕ ಪದವಿ ಪಡೆದ ಅನುಭವಿ ಶಿಕ್ಷಕರು ೬-೮ನೇ ತರಗತಿಗಳನ್ನು ಕಳೆದ ೧೪ ವರ್ಷಗಳಿಂದ ಬೋದಿಸುತ್ತಿದ್ದರೂ ಅವರನ್ನು ಮುಂಬಡ್ತಿಗೆ ಪರಿಗಣಿಸದೇ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು (೬-೮) ಹುದ್ದೆಗಳನ್ನು ೨ ಬಾರಿ ನೇರ ನೇಮಕ ಮಾಡಿ ಈಗ ಮತ್ತೆ ೩ನೇ ಬಾರಿ ನೇರ ನೇಮಕ ನಡೆಯುತ್ತಿದೆ.
ಇದರ ಬಗ್ಗೆ ಇಲಾಖೆ ಮುಖ್ಯಸ್ಥರು ಮತ್ತು ಮಾನ್ಯಸಚಿವರನ್ನು ಕೂಡಕಂಡು ಮನವರಿಕೆ ಮಾಡಲಾಗಿದೆ. ಅಲ್ಲದೇ ಜೂ.೫ರಂದು ಬೆಂಗಳೂರು ಪ್ರೀಡಂ ಪಾರ್ಕ್ನಲ್ಲಿ ೨೫೦೦೦ ಶಿಕ್ಷಕರು ಉಪವಾಸ ಸತ್ಯಾಗ್ರಹ ಮಾಡಿ ಸರಕಾರಕ್ಕೆ ಬೇಡಿಕೆ ಬಗ್ಗೆ ವಿನಂತಿಸಿ ನ್ಯಾಯಕ್ಕಾಗಿ ಒತ್ತಾಹಿಸಿದ್ದೇವೆ. ಆದರೆ ಈ ವರೆಗೂ ನಮಗೆ ನ್ಯಾಯ ಸಿಕ್ಕಿರುವುದಿಲ್ಲ, ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು (೧-೫) ಆದೇಶದಂತೆ ೧-೫ ನೇ ತರಗತಿಗಳ ವಿಷಯಗಳನ್ನು ಮಾತ್ರ ಬೋಧಿಸಿತ್ತೇವೆ ಹಾಗೂ ೨೦೧೯ರ ಜು.೧ ರಿಂದ ೬-೭/೮ ನೇ ತರಗತಿಗಳ ಬೋಧನಾಕಾರ್ಯ ಬಹಿಷ್ಕರಿಸುತ್ತೇವೆ. ಜೊತೆಗೆ ಇನ್ನು ಮುಂದೆ ಇಲಾಖೆಯು ಆಯೋಜಿಸುವ ೬-೮ ನೇ ತರಗತಿಗಳಿಗೆ ಸಂಬಂಧಿಸಿದ ಎಲ್ಲಾ ತರಬೇತಿಗಳನ್ನು ನಾವು ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಿದರಿಂದ ನಮ್ಮನ್ನು ೬-೮ ರಯಾವುದೇ ತರಬೇತಿಗಳಿಗೆ ನಿಯೋಜಿಸಬಾರದು ಮತ್ತು ೬-೮ ರ ತರಬೇತಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ನಿಯೋಜಿಸಬಾರದುಎಂದು ಈ ಮೂಲಕ ಮಾನ್ಯರಲ್ಲಿ ವಿನಂತಿಸಿಕೊಳ್ಳುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ. ಮನವಿಯ ಸಂದರ್ಭದಲ್ಲಿ ನೂರಾರು ಮಂದಿ ಶಿಕ್ಷಕರು ಭಾಗವಹಿಸಿದ್ದರು.