HomePage_Banner
HomePage_Banner

ಕೊಯಿಲ: ಈಕೊ ಗಾಡಿ ಡಿಕ್ಕಿ -ಬೈಕ್ ಸವಾರನಿಗೆ ಗಾಯ

ಪುತ್ತೂರು: ಉಪ್ಪಿನಂಗಡಿ ಕಡಬ ರಾಜ್ಯ ಹೆದ್ದಾರಿಯ ಕೊಯಿಲದಲ್ಲಿ ಈಕೊ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆ ದಾಖಲಾಗಿರುವ ಘಟನೆ ಜೂ.30  ರಂದು ಬೆಳಗ್ಗೆ ಸಂಭವಿಸಿದೆ. ಕಡಬ ಕಡೆಯಿಂದ ಬೈಕ್ ಕೊಯಿಲ ಜಂಕ್ಷನ್ ನಲ್ಲಿ ಬಲ ಬದಿಗೆ ತಿರುಗುತ್ತಿದ್ದ ವೇಳೆ ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯದ ಕಡೆಗೆ ತೆರಳುತ್ತಿದ್ದ ಇಕೊ ಗಾಡಿ ಡಿಕ್ಕಿ ಆಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಇಕೊ ಗಾಡಿಯ ಒಳಗೆ ಸಿಲುಕಿಕೊಂಡಿದ್ದು ಸುಮಾರು 50.ಮೀ ತನಕ ಬೈಕ್ ಸಮೇತ ಸವಾರನನ್ನು ಎಳೆದುಕೊಂಡು ಬಂದಿದೆ. ಘಟನೆಯಿಂದ ಗಂಭೀರ ಗಾಯಗೊಂಡಿರುವ ಬೈಕ್ ಸವಾರನನ್ನು ಪುತ್ತೂರು ಆಸ್ಪತ್ರೆ ಕರೆದೊಯ್ಯಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.