ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಪ್ರಶಾಂತ ರೈ ಮನವಳಿಕೆ ಗುತ್ತು ನಿಯುಕ್ತಿಗೊಂಡಿರುತ್ತಾರೆ. ಪೆರಾಬೆ ಪಟ್ಟೆ ನಾರಾಯಣ ರೈ ಮತ್ತು ಮನವಳಿಕೆ ಗುತ್ತು ಕುಸುಮಾ ಎನ್ ರೈ ಯವರ ಸುಪುತ್ರರಾಗಿದ್ದು ಬಿ. ಕಾಂ ಪದವಿದಾರರಾಗಿದ್ದು, ೧೯೮೪ ರಲ್ಲಿ ಸಂಘದ ಸಿಬ್ಬಂದಿಯಾಗಿ ಸೇವೆಗೆ ಸೇರಿರುತ್ತಾರೆ. ಸಂಘದಲ್ಲಿ ವಿವಿಧ ಹದ್ದೆಗಳನ್ನು ಅಲಂಕರಿಸಿ ಸುಮಾರು ೧೪ ವರ್ಷಗಳ ಕಾಲ ಕೊಲ ಶಾಖೆಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಆನಂತರ ಪ್ರಧಾನ ಕಛೇರಿಯಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು ಇದೀಗ ಆಡಳಿತ ಮಂಡಳಿಯ ನಿರ್ದೇಶನದಂತೆ ಪ್ರಬಾರ ಮುಖ್ಯಕಾರ್ಯರ್ನಿಹಣಾಧಿಕಾರಿಯಾಗಿದ್ದಾರೆ.