ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್ ಮಂತ್ರಿ ಮಂಡಲ – ಶಾಲಾ ನಾಯಕಿ: ಆಯಿಶತ್ ಸನಾ, ಉಪನಾಯಕ: ಶಾಮಿಲ್

                                                                              ಆಯಿಶತ್ ಸನಾ
                                                                                ಶಾಮಿಲ್

ಪುತ್ತೂರು: ಮಧುರಾ ಇಂಟರ್‌ನ್ಯಾಷನಲ್ ಸ್ಕೂಲ್ ಮೇನಾಲ ಈಶ್ವರಮಂಗಲ ಇಲ್ಲಿನ ವಿದ್ಯಾರ್ಥಿ ಸಂಘದ ಚುನಾವಣೆ ಜೂ.28ರಂದು ನಡೆಯಿತು.

ಶಾಲಾ ನಾಯಕಿಯಾಗಿ ಗ್ರೇಡ್ ೫ರ ವಿದ್ಯಾರ್ಥಿನಿ ಆಯಿಶತ್ ಸನಾ ಹಾಗೂ ಉಪನಾಯಕನಾಗಿ ಗ್ರೇಡ್ ೪ರ ವಿದ್ಯಾರ್ಥಿ ಶಾಮಿಲ್ ಎಂ.ಎಚ್.ಅಬ್ದುಲ್ ಖಾದರ್ ಆಯ್ಕೆಯಾಗಿದ್ದಾರೆ. ಸಾಂಸ್ಕೃತಿಕ ಮಂತ್ರಿಯಾಗಿ ಮುಹಮ್ಮದ್ ಮುಬಾರಿಸ್, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಮುಹಮ್ಮದ್ ಮುಝಮ್ಮಿಲ್, ಕ್ರೀಡಾ ಮಂತ್ರಿಯಾಗಿ ಅಹ್ಮದ್ ಸಿಮಾಕ್, ಉಪ ಕ್ರೀಡಾ ಮಂತ್ರಿಯಾಗಿ ತನೀಶ್.ಎ, ಶಿಸ್ತು ಮಂತ್ರಿಯಾಗಿ ಫಾತಿಮತ್ ಮುಬಶ್ಶಿರ, ಉಪ ಶಿಸ್ತು ಮಂತ್ರಿಯಾಗಿ ಅಲಿಶ, ಆರೋಗ್ಯ ಮಂತ್ರಿಯಾಗಿ ಖದೀಜತುಲ್ ಕುಬ್ರಾ, ಉಪ ಆರೋಗ್ಯ ಮಂತ್ರಿಯಾಗಿ ಮುಹಮ್ಮದ್ ಮಾಯಿಝ್, ತರಗತಿ ಪ್ರತಿನಿಧಿಗಳಾಗಿ ಅಮ್ನಾ ಫಾತಿಮಾ, ಮೊಹಮ್ಮದ್ ಮಿಸ್ಬಾ, ಲಿಬಾ ಆಯಿಶಾ, ಮುಹಮ್ಮದ್ ಫಾಝ್, ಆಯಿಷತ್ ಫಾಝಿಲ ಆಯ್ಕೆಯಾಗಿದ್ದಾರೆ. ಆಡಳಿತಾಧಿಕಾರಿ ಮಹಮ್ಮದ್ ಸಾಮು ಹಾಗೂ ಮುಖ್ಯ ಶಿಕ್ಷಕಿ ಎ.ಮಮತಾ ನೇತೃತ್ವದಲ್ಲಿ ಚುನಾವಣೆ ನಡೆಸಲಾಯಿತು. ಚುನಾವಣಾ ಅಧಿಕಾರಿಗಳಾಗಿ ಉಪನ್ಯಾಸಕಿ ರಮ್ಲತ್.ಕೆ ಹಾಗೂ ಶಿಕ್ಷಕಿ ಶ್ರೀಪ್ರಿಯಾ ಕಾರ್ಯ ನಿರ್ವಹಿಸಿದರು. ಶಿಕ್ಷಕಿ ಅರ್ಚನಾ, ಶಿಕ್ಷಕೇತರ ವೃಂದದವರಾದ ಹನ್ನತ್, ಸಂಸೀನಾ, ರೋಹಿಣಿ, ರತ್ನಾವತಿ, ಜಯಲಕ್ಷ್ಮಿ ಸಹಕರಿಸಿದರು.
————————————————-

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.