ದಯಾನಂದ ರೈ ಮನವಳಿಕೆಗತ್ತು ಸೇವಾನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ವೃತ್ತಿಯಲ್ಲಿ ಅಭಿಮಾನ ಬಂದಾಗ ಮಾತ್ರ ಆಪತ್ತಿನಲ್ಲಿರುವ ಸಂಸ್ಥೆಯನ್ನು ಉಳಿಸಲು ಸಾಧ್ಯ – ಅಂಗಾರ .ಎಸ್
  • ದಯಾನಂದ ರೈ ಯವರು ರೈತಾಪಿ ವರ್ಗದ ಸೇವೆಯನ್ನು ಮಾಡಿದ್ದಾರೆ, ಇದಕ್ಕೆ ಸೇರಿದ ಜನಸ್ತೋಮ ಸಾಕ್ಷಿ – ಶಶಿಕುಮಾರ್ ರೈ ಬಾಲ್ಯೋಟ್ಟು
  • ದಯಾನಂದ ರೈ ಒಬ್ಬ ದಕ್ಷ ಅಧಿಕಾರಿ – ರಮೇಶ್ ಭಟ್ ಉಪ್ಪಂಗಳಾ

ಪುತ್ತೂರು: ನಮ್ಮ ಜೀವನಕ್ಕೆ ಆಧಾರವಾಗಿರುವ ವೃತ್ತಿಯಲ್ಲಿ ಗೌರವ ಭಾವದಿಂದ ಕರ್ತವ್ಯ ನಿರ್ವಹಿಸಿದಾಗ ಆಪತ್ತಿನಲ್ಲಿರುವ ಸಂಸ್ಥೆಯನ್ನು ಉಳಿಸಲು ಸಾಧ್ಯ ಎಂದು ಸುಳ್ಯ ಶಾಸಕ ಎಸ್.ಅಂಗಾರರವರು ಜೂ. 29ರಂದು 37 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವಾ ನಿವೃತ್ತಿ ಹೊಂದಿರುವ ಎಂ.ದಯಾನಂದ ರೈ ಅವರನ್ನು ಅಭಿನಂದಿಸಿ ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ರೈತ ಸಭಾಭವನದಲ್ಲಿ ತಿಳಿಸಿದರು.

90ರ ದಶಕದಲ್ಲಿ ನಷ್ಟವಿದ್ದ ಸಂಸ್ಥೆ ರಮೇಶ್ ಭಟ್ ಉಪ್ಪಂಗಳ ಅವರ ನೇತೃತ್ವದ ಆಡಳಿತ ಮಂಡಳಿಯ ಪಾರದರ್ಶಕ ಆಡಳಿತದಿಂದ ಅತ್ಯದ್ಭುತ ಸಾಧನೆ ಮಾಡಿ ಜಿಲ್ಲೆಯಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದು ಬಂದಿದೆ, ಇದರಲ್ಲಿ ಸೇವೆಗೈದ ದಯಾನಂದ ರೈ ಮನವಳಿಕೆಗುತ್ತು ರವರು ಕರ್ತವ್ಯ ನಿಷ್ಠೆಯನ್ನು ಮೆರೆದು ಆಡಳಿತ ಮಂಡಳಿ ಹಾಗೂ ಜನರ ವಿಶ್ವಾಸಗಳಿಸಿ ತನ್ನ ಸೇವಾ ಅವಧಿಯನ್ನು ಸಾರ್ಥಕಗೊಳಿಸಿದ್ದಾರೆ. ಸಂಘಟನೆಗೆ ಮನವಳಿಕೆ ಗುತ್ತಿನ ಕುಟುಂಬದ ಹಿರಿಯರ ಕೊಡುಗೆ ಮಹತ್ತರವಾಗಿದೆ, ಅಂತಹ ಪ್ರತಿಷ್ಠಿತ ಕುಟುಂಬದ ಗೌರವ, ಕೀರ್ತಿಯನ್ನು ಉಳಿಸಿದಾಗ ಮಾತ್ರ ಆ ಮನೆತನ ಉಳಿಯುತ್ತದೆ. ದಯಾನಂದ ರೈ ಯವರು ಮನೆತನದ ಗೌರವ ಉಳಿಸುವಲ್ಲಿ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ ಹಾಗೂ ಗ್ರಾಮ ಪಂಚಾಯತ್, ಗ್ರಾಮ ಕರಣಿಕರು, ಕಂದಾಯ ಇಲಾಖೆಯ ಸಿಬ್ಬಂದಿಗಳು ಸರಕಾರದ ಸವಲತ್ತನ್ನು ಜನರಿಗೆ ತಲುಪಿಸಲು ಅಸಡ್ಡೆ ಮಾಡಿದಾಗ ಸಹಕಾರಿ ಸಂಸ್ಥೆಗಳ ಮೂಲಕ ಜನರಿಗೆ ತಲುಪುವಂತೆ ಮಾಡಲು ಸಿ ಎ ಬ್ಯಾಂಕಿನಂತಹ ಸಂಸ್ಥೆಗಳು ಅತ್ಯಂತ ಸಹಕಾರಿಯಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೆಶಕ ಶಶಿಕುಮಾರ್ ಬಾಲ್ಯೊಟ್ಟು ಮಾತನಾಡಿ ದಯಾನಂದ ರೈ ಮನವಳಿಕೆ ಗುತ್ತು ರವರು ತನ್ನ ಸೇವಾ ಅವಧಿಯಲ್ಲಿ ರೈತಾಪಿ ವರ್ಗದ ಕಷ್ಟಗಳಿಗೆ ಸ್ಪಂದಿಸಿ ಆಡಳಿತ ಮಂಡಳಿಯ ಆಶಯಕ್ಕೆ ತಕ್ಕಂತೆ ಉತ್ತಮ ಕಾರ್ಯ ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ, ಮಾತ್ರವಲ್ಲ ಸಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಕೂಡಾ ಉತ್ತಮ ಸಾಧನೆ ಮಾಡಿದ್ದು, ಇವರ ಸೇವೆ ಸಮಾಜಕ್ಕೆ ನಿತ್ಯನಿರಂತರ ಮೀಸಲಾಗಿರಲಿ, ನಿವೃತ್ತಿ ಬದುಕು ಹಸನಾಗಲಿ ಎಂದರು ಇದಕ್ಕೆ ಈ ಅಭಿನಂದನಾ ಕಾರ್ಯಕ್ರಮಕ್ಕೆ ಸೇರಿದ ಜನಸ್ತೋಮ ಸಾಕ್ಷಿ ಎಂದರು. ಸಭೆಯ ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ರಮೇಶ್ ಭಟ್‌ಉಪ್ಪಂಗಳ ಮಾತನಾಡಿ ದಯಾನಂದ ರೈ ಮನವಳಿಕೆ ಗುತ್ತು ರವರು ಒಬ್ಬ ದಕ್ಷ ಅಧಿಕಾರಿ ಎಂದರು, ದಯಾನಂದ ರೈ ಅವರು ನನ್ನ ನಿರೀಕ್ಷೆಗೆ ಚ್ಯುತಿಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಸಂಘದ ಏಳಿಗೆಯಲ್ಲಿ ಆಡಳಿತ ಮಂಡಳಿಯೊಂದಿಗೆ ಕೈ ಜೋಡಿಸಿದ್ದಾರೆ. ಅವರ ಸೇವೆ ಸಲಹೆ ಸಂಘಕ್ಕೆ ಇನ್ನೂ ಅಗತ್ಯವಿದೆ ಎಂದು ಹೇಳಿ ಇತ್ತೀಚೆಗೆ ತಾನು ಇಸ್ರೇಲ್‌ಗೆ ಕೃಷಿ ಅಧ್ಯಯನ ಪ್ರವಾಸ ಮಾಡಿರುವ ಅನುಭವ ಹಂಚಿಕೊಂಡರು.

ಅಭಿನಂದನೆ ಸ್ವೀಕರಿಸಿದ ದಯಾನಂದ ರೈ ಮನವಳಿಕೆ ಗುತ್ತು ರವರು ಮಾತನಾಡಿ ನನಗೆ ಅನ್ನ ನೀಡಿ ಬದುಕು ಕಟ್ಟಿಕೊಳ್ಳಲು ಕಾರಣವಾದ ಸಂಘಕ್ಕೆ ನಾನು ಯಾವತ್ತೂ ಚಿರಋಣಿಯಾಗಿದ್ದೇನೆ, ಸಂಘದ ಆಡಳಿತ ಮಂಡಳಿ ಹಾಗೂ ಇಲ್ಲಿನ ಎಲ್ಲಾ ಸಿಬ್ಬಂದಿಗಳು ಒಂದು ಅವಿಭಕ್ತಕುಟುಂಬದ ಹಾಗೆ ಕೆಲಸ ನಿರ್ವಹಿಸಿ ಸಂಘವನ್ನು ಕಟ್ಟಿಬೆಳೆಸುವಲ್ಲಿ ಪ್ರಾಮಾಣಿಕವಾಗಿ ದುಡಿದ್ದೇವೆ, ಆಡಳಿತ ಮಂಡಳಿಯ ನಿರ್ದೆಶನದಲ್ಲಿ ಹತ್ತುಹಲವು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಟಾನ ಮಾಡಲು ಸಾಧ್ಯವಾಗಿದೆ. ಉತ್ತಮ ಸೇವೆ ನೀಡಿದ ತೃಪ್ತಿ ನನಗಿದೆ ಎಂದರು. ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ದಯಾನಂದ ರೈ ಮನವಳಿಕೆ ಗುತ್ತು ದಂಪತಿಗಳನ್ನು ಸನ್ಮಾನಿಸಲಾಯಿತು. ಸಿಬ್ಬಂದಿಗಳ ವತಿಯಿಂದ ದಯಾನಂದ ರೈ ಅವರಿಗೆ ಚಿನ್ನದ ಕೈಚೈನ್ ಉಡುಗೊರೆಯಾಗಿ ನೀಡಿದರು. ವೇದಿಕೆಯಲ್ಲಿ ಅನಿತಾ ದಯಾನಂದ ರೈ, ಸಂಘದ ನಿರ್ದೆಶಕರಾದ ಪೂವಪ್ಪ ನಾಯ್ಕ, ಮಧುಕುಮಾರ್, ಸುಧಾಕರ ರೈ, ಮೋನಪ್ಪ ಬೊಳ್ಳರೋಡಿ, ಜಯಕರ ಪೂಜಾರಿ, ಮಮತಾ ಆನೆಗುಂಡಿ ಮತ್ತಿತತರು ಉಪಸ್ಥಿತರಿದ್ದರು. ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಗೌಡ ಪಜ್ಜಡ್ಕ ಅಭಿನಂದನಾ ಭಾಷಣ ಮಾಡಿದರು. ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರೈ ಮನವಳಿಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ಪೂರ್ಣಿಮಾ ಹಿರಿಂಜ ಪ್ರಾರ್ಥಿಸಿ ಸಂಘದ ಉಪಾಧ್ಯಕ್ಷ ರಮೇಶ್ ಎನ್.ಸಿ ರಾಮಕುಂಜ ವಂದಿಸಿದರು. ಸಿಬ್ಬಂದಿ ಲೋಕನಾಥ್ ರೈ ಕೇಲ್ಕ ಕಾರ್ಯಕ್ರಮ ನಿರ್ವಹಿಸಿದರು.

ಸಂಘದ ಸಿಬ್ಬಂದಿಗಳಾದ ಸಿಬ್ಬಂದಿಗಳಾದ ವ್ಯವಸ್ಥಾಪಕ ಪದ್ಮಪ್ಪ ಗೌಡ, ಲೆಕ್ಕಿಗ ಮನೋಹರ್ ಪ್ರಕಾಶ್, ಹಿರಿಯ ಗುಮಾಸ್ತ ಎ. ಸಂತೋಷ್ ರೈ, ಶಾಖಾ ವ್ಯವಸ್ಥಾಪಕ ಆನಂದ ಗೌಡ, ಪ್ರಜ್ಞಾ ಆರ್, ಆಶಾಲತಾ, ರಾಧಾಕೃಷ್ಣ ನಾಕ್, ರವಿರಾಜ್ ರೈ, ಮಂಗಳಾ ಪೈ, ಮಹೇಶ್ ಕೆ, ಕುಕ್ಕ, ಆನಂದ, ಸಂತೋಷ ಬಿ. ಎಂ, ಯಶಸ್ವಿ, ಕೃಷ್ಣಪ್ಪ, ಬಾಲಕೃಷ್ಣ, ಪ್ರಸಾದ್, ಸತೀಶ್, ಸೀತಾರಾಮ ಗೌಡ, ಕೇಶವ ಗೌಡ, ಸುಂದರ, ವಸಂತ ಶೆಟ್ಟಿ ಎನ್ ಮೋಹನ ಗೌಡ, ಕಾರ್‍ಯಕ್ರಮದಲ್ಲಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಆಶಾತಿಮ್ಮಪ್ಪ ಗೌಡ, ಹರೀಶ್ ಕಂಜಿಪಿಲಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಳ, ಬಿಜಿಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರಾಕೇಶ್ ರೈ ಕಡೆಂಜಿ, ಮಂಡಲ ಕಾರ್ಯದರ್ಶಿ ಲಕ್ಷ್ಮೀನಾರಾಯಣ ರಾವ್, ತಾಲೂಕು ಪಂಚಾಯತ್ ಸದಸ್ಯೆ ತಾರಾ .ಕೆ, ಜಯಂತಿ ಆರ್ ಗೌಡ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಹಸಂಚಾಲಕ ಅಜಯ ಆಳ್ವ, ಸಮಿತಿಯ ಸದಸ್ಯರಾದ ಚಂದ್ರಹಾಸ್ ಶೆಟ್ಟಿ, ಜಯಪ್ರಕಾಶ್ ರೈ ನೂಜಿ, ತಾಲೂಕು ಬಂಟರ ಸಂಘದ ಕೋಶಾಧಿಕಾರಿ ರಮೇಶ್ ರೈ ಡಿಂಬ್ರಿ, ಡಿಸಿಸಿ ಬ್ಯಾಂಕಿನ ಮ್ಯನೇಜರುಗಲಾದ ಅಮಿತಾ ಚಂದ್ರಹಾಸ್ ಶೆಟ್ಟಿ, ಮೀನಾಕ್ಷಿ, ಹೊಸಮಠ ಸಿ ಎ ಬ್ಯಾಂಕಿನ ಸಿ.ಇ.ಓ ಸೋಮಶೇಖರ ಶೆಟ್ಟಿ, ಉಪ್ಪಿನಂಗಡಿ ಸಿ.ಎ ಬ್ಯಾಂಕಿನ ಸಿ.ಇ.ಓ ಜತ್ತಪ್ಪ ಗೌಡ, ಪೆರಾಬೆ ಗ್ರಾಮಪಚಾಯತ್ ಅಧ್ಯಕ್ಷೆ ಸುಗುಣ ಮತ್ತು ಪಂಚಾಯತ್ ಸದಸ್ಯರು, ಆಲಂಕಾರು ಗ್ರಾಮ ಪಂಚಾಯತಿನ ಅಧ್ಯಕ್ಷೆ ಸುನಂದಾ ಬಾರ್ಕುಳಿ, ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷ ಸದಾನಂದ ಆಚಾರ್ಯ ಮತ್ತು ಸದಸ್ಯರು, ನಿವೃತ್ತ ಸಿ.ಇ.ಓ ಶೇಷಪತಿ ರೈ ಗುತ್ತುಪಾಲು, ದುರ್ಗಾಂಬಾ ಕಾಲೇಜಿನ ಪ್ರಾಂಶುಪಾಲರಾದ ನವೀನ್ ರೈ, ಮುಖ್ಯಗುರುಗಳು ಸತ್ಯನಾರಾಯಣ ಭಟ್, ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಗುರುಗಳಾದ ನಾರಾಯಣ ಭಟ್ .ಟಿ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಕಾರ್ಯದರ್ಶಿ ಸೇಸಪ್ಪ ರೈ ರಾಮಕುಂಜ, ಶ್ರೀ ಕ್ಷೇತ್ರ ಶರವೂರಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಮಲಾಕ್ಷ ರೈ ಪರಾರಿಗುತ್ತು, ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ, ಹಾಗೂ ನಿರ್ದೇಶಕರುಗಳು ಕಾರ್ಯದರ್ಶಿ ಗಣೇಶ್ ರೈ, ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮುತ್ತಪ್ಪ ಪೂಜಾರಿ ನೈಯಲ್ಗ, ಆಲಂಕಾರು ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ .ಕೆ, ನೋಟರಿ ವಕೀಲರಾದ ಆರವಿಂದ ಭಂಡಾರಿ, ಹಾಗೂ ಸುಂದರ ಗೌಡ, ಸಿವಿಲ್ ಇಂಜಿನೀಯರ್ ಬಾಸ್ಕರ್, ಲಕ್ಷ್ಮೀನಾರಾಯಣ, ಕುಂತೂರು ಪೆರಾಬೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸೇಸಪ್ಪ ಗೌಡ, ಕಾರ್ಯದರ್ಶಿ ಮಂಜಪ್ಪ ಗೌಡ, ಹಾಗೂ ಪ್ರಮುಖರಾದ ಗೋಪಾಲಕೃಷ್ಣ ಪಡಿಲ್ಲಾಯ, ರಮಾನಾಥ ರೈ ಮನವಳಿಕೆ ಗುತ್ತು, ರಾಧಾಕೃಷ್ಣ ರೈ ಮನವಳಿಕೆ ಗುತ್ತು, ವಿಜಯ ಕುಮಾರ್ ರೈ ಮನವಳಿಕೆ ಗುತ್ತು, ಗಂಗಾಧರ ಗೌಡ ಕುಂಡಡ್ಕ, ನಾರಾಯಣ ಪೂಜಾರಿ, ಚಂದಪ್ಪ ಪಾಟಾಲಿ, ಬೇಬಿ ಸಿ ಪಾಟಾಲಿ, ಉದ್ಯಮಿ ಪ್ರಶಾಂತ ರೈ .ಜಿ, ಸೇರಿದಂತೆ ಹಲವು ಗಣ್ಯರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.