ಪುತ್ತೂರು: ರಾಷ್ಟ್ರೀಯ ಅಂಚೆ ನೌಕರರ ಸಂಘ ಮೂರನೇ ವರ್ಗ, ಪೋಸ್ಟ್ಮೆನ್, ಎಮ್ಟಿಎಸ್ ಹಾಗೂ ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘದ 29ನೇ ಜಂಟಿ ದ್ವೈವಾರ್ಷಿಕ ಅಧಿವೇಶನವು ಜೂ.30ರಂದು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಿವೃತ್ತ ಪ್ರಧಾನ ಅಂಚೆ ಪಾಲಕ, ರಾಷ್ಟ್ರೀಯ ಅಂಚೆ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಎಮ್.ಸೀತಾರಾಮ ಗೌಡ ಮುಂಡಾಳ ಮಾತನಾಡಿ, ಸಂಘಟನೆ ಇರುವುದು ಕೇವಲ ಸಂಘಟನೆಯ ಒಳಗಿನ ಸಮಸ್ಯೆಗಳನ್ನು ಬರೆಹರಿಸಲು. ಹಾಗಾಗಿ ಸದಸ್ಯರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಸಂಘದೊಳಗೆ ಎಳೆದು ತರಬಾರದು. ಸಂಘದ ಸದಸ್ಯರಾದವರು ಪ್ರತಿಯೊಬ್ಬರು ಸಂಘದ ಚೌಕಟ್ಟಿನಲ್ಲಿ ನಡೆಯುವ ಕಾರ್ಯಗಳಿಗೆ ಇತರರೊಂದಿಗೆ ಬೆರಯುವುದರೊಂದಿಗೆ ಸ್ಪಂದನೆ ನೀಡಬೇಕು. ಗ್ರಾಮೀಣ ಅಂಚೆ ಸೇವಕರ ಎಂದು ನಮೂದಾಗಿದ್ದು, ಸೇವಕರು ಪದವನ್ನು ತೆಗೆದು ಹಾಕಿ ಅಂಚೆ ನೌಕರರ ಎಂದು ನಮೂದಿಸಲು ಅವರು ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಸರಕಾರ ಅಂಚೆ ನೌಕರರಿಗೆ ಸಿಗುವ ಪಿಂಚಣಿ ನೀಡುವಲ್ಲಿ ಮುಂಗೈಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದು ಅದನ್ನು ಬಿಟ್ಟು ನಿವೃತ್ತ ನೌಕರರಿಗೆ ಸರಿಯಾಗಿ ಪಿಂಚಣಿ ವಿತರಿಸುವಲ್ಲಿ ಸಹಕರಿಸಲಿ ಎಂದು ಆಗ್ರಹಿಸಿದರು ಅವರು ಆಗ್ರಹಿಸಿದರು.
ರಾಷ್ಟ್ರೀಯ ಅಂಚೆ ನೌಕರರ ಸಂಘ ಮೂರನೇ ವರ್ಗದ ಪುತ್ತೂರು ಅಧ್ಯಕ್ಷ ಎ.ಲಕ್ಷ್ಮಣ ನಾಕ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಧಾನ ಅಂಚೆ ಪಾಲಕ, ರಾಷ್ಟ್ರೀಯ ಅಂಚೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಿ.ಗಂಗಾಧರ್ ನಾಕ್, ಸಂಘದ ನವದೆಹಲಿ ಡೆಪ್ಯುಟಿ ಕಾರ್ಯದರ್ಶಿ ಡಾ.ಬಿ.ಶಿವಕುಮಾರ್, ಬೆಂಗಳೂರು ಎಂಟಿಎಎಸ್ನ ಆರ್.ಮಹದೇವ, ಅಧ್ಯಕ್ಷ ಮಂಜುನಾಥ, ಸಂಘದ ಬೆಂಗಳೂರು ವಲಯ ಕಾರ್ಯದರ್ಶಿ ಎಂ.ಪಿ.ಚಿತ್ರಸೇನ ಸಂದರ್ಭೋಚಿತವಾಗಿ ಮಾತನಾಡಿದರು.
ಸನ್ಮಾನ:
ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮೋನಪ್ಪ ಬಿ., ಕೃಷ್ಣಪ್ರಸಾದ್, ಕೃಷ್ಣಪ್ಪ ಗೌಡ ಪಿ., ಶ್ರೀನಿವಾಸ ಮೂಲ್ಯ, ಕೆ.ನಾರಾಯಣ ಗೌಡ, ಗಿರಿಧರ ಎಂ.ಟಿ, ಗೋಪಿನಾಥ ಮೀಡಂಬೈಲು, ರಾಮ ನಾಕ ನೀರ್ಕಜೆ, ರಾಧಾಕೃಷ್ಣ ಕೊಡಿಪ್ಪಾಡಿ, ಮುಂಭಡ್ತಿ ಹೊಂದಿದ ಹರೀಶ್ ಕೆ., ಕುಂಞ ಮೇರ, ನವೀನ್ ಎನ್.ಎಮ್, ಬಾಲಕೃಷ್ಣ, ರಾಜಲಕ್ಷ್ಮೀ, ಆನಂದ ಗೌಡ ಸಿ., ಚಂದ್ರಹಾಸ ಎಮ್, ಹರೀಶ್ ಕಾಮತ್, ಉಮೇಶ್ ಬಿ., ಅಶೋಕ, ವಿನೋದ್ ಕುಮಾರ್ ಕೆ.ವಿ ಆನಂದ ಪಿ.ಎರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಘದ ಸಂಘಟನಾ ಕಾರ್ಯದರ್ಶಿ, ಪೋಸ್ಟ್ಮೆನ್ ಆನಂದ ಗೌಡ ಸಿ. ಸ್ವಾಗತಿಸಿದರು. ಸಂಘದ ಪುತ್ತೂರು ಕಾರ್ಯದರ್ಶಿ ಚಿದಾನಂದ ಪೂಜಾರಿ ಎ. ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ರಾಷ್ಟ್ರೀಯ ಅಂಚೆ ನೌಕರರ ಸಂಘದ ಅಧ್ಯಕ್ಷ ಅಣ್ಣಪ್ಪ ನಾಕ್ ಎ., ಗ್ರಾಮೀಣ ಅಂಚೆ ಸೇವಕರ ಸಂಘದ ಅಧ್ಯಕ್ಷ ಅಣ್ಣಪ್ಪ ಗುಂಡ್ಯ, ಕಾರ್ಯದರ್ಶಿ ಉಮೇಶ್ ಬಿ., ರವಿ ನಾಕ್, ಧನಂಜಯ ಮತ್ತಿತರರು ಅತಿಥಿಗಳನ್ನು ಗೌರವಿಸಿದರು.
ವಿಟ್ಲ ಅಂಚೆ ಪಾಲಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು.