ಪುತ್ತೂರು: ಅಬಕಾರಿ ಇಲಾಖೆಯ ಬೆಳ್ತಂಗಡಿ ನಿರೀಕ್ಷಕರ ಕಛೇರಿಯಲ್ಲಿ ಉಪ ನಿರೀಕ್ಷಕರಾಗಿದ್ದ ಕಲ್ಲಗುಡ್ಡೆ ನೈತ್ತಾಡಿ ನಿವಾಸಿ ವಿಶ್ವನಾಥ ಗೌಡರವರು ಜೂ.30ರಂದು ನಿವೃತ್ತರಾಗಿದ್ದಾರೆ.
ಪಡ್ನೂರು ಗ್ರಾಮದ ಪಟ್ಟೆ ದಿ. ಸೇಸಪ್ಪ ಗೌಡ ಹಾಗೂ ಸೇಸಮ್ಮ ದಂಪತಿ ಪುತ್ರನಾಗಿರುವ ವಿಶ್ವನಾಥ ಗೌಡರವರು ಪಡ್ನೂರು ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಾಲೆ, ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿದ್ದರು.
೧೯೯೨ರಲ್ಲಿ ಎಕ್ಸೈಸ್ ಇಂಟೆಲಿಜೆನ್ಸಿ ಬ್ಯೂರೋಗೆ ಅಬಕಾರಿ ರಕ್ಷಕರಾಗಿ ಇಲಾಖೆಗೆ ನೇಮಗೊಂಡಿದ್ದರು. ಬಳಿಕ ಪುತ್ತೂರು ಉಪ ನಿರೀಕ್ಷಕರ ಕಛೇರಿ, ಮಂಗಳೂರು, ಉಡುಪಿ ಎಕ್ಸೈಸ್ ಇಂಟೆಲಿಜೆನ್ಸಿ ಬ್ಯೂರೋದಲ್ಲಿ ಕರ್ತವ್ಯ ನಿರ್ವಸಿದ್ದರು. ೨೦೧೨ರಲ್ಲಿ ಅಬಕಾರಿ ಉಪನಿರೀಕ್ಷಕರಾಗಿ ಮುಂಭಡ್ತಿ ಪಡೆದು ಬೆಳ್ತಂಗಡಿ ನಿರೀಕ್ಷಕರ ಕಛೇರಿಗೆ ವರ್ಗಾವಣೆಗೊಂಡಿದ್ದರು. ಬಳಿಕ ಬೆಳಗಾಂ ಜಿಲ್ಲೆಯ ಚಿಕ್ಕೋಡಿ ಉಪ ವಿಭಾಗ, ಬೆಳ್ತಂಗಡಿ, ಮೂಡಿಗೆರೆಯ ಎನ್.ಆರ್ ಪುರಗಳಲ್ಲಿ ಕರ್ತವ್ಯ ನಿರ್ವಹಿಸಿ ಮತ್ತೆ ಬೆಳ್ತಂಗಡಿಗೆ ವರ್ಗಾವಣೆಗೊಂಡಿದ್ದರು. ಇವರು ಸರಕಾರಿ ಸೇವೆಗೆ ನೇಮಕವಾಗುವ ಮುನ್ನ ಕಬಕ ಮಂಡಲ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.
ಪತ್ನಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ರೇವತಿ ಪುತ್ರರಾದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಆಶಿಸ್ ಹಾಗೂ ವಿವೇಕಾನಂದ ಪದವಿ ಪೂರ್ವಕಾಲೇಜಿ ವಿದ್ಯಾರ್ಥಿ ಆಶ್ರಯ್ರವರೊಂದಿಗೆ ಕಲ್ಲಗುಡ್ಡೆಯ ನೈತ್ತಾಡಿಯಲ್ಲಿ ವಾಸವಾಗಿದ್ದಾರೆ.