ನೆಲ್ಯಾಡಿ: ನೆಲ್ಯಾಡಿ ವಲಯ ಬಂಟರ ಸಂಘದ ಸಾಮಾನ್ಯ ಸಭೆ ಜೂ.30ರಂದು ಸಂಘದ ಗೌರವಾಧ್ಯಕ್ಷ ಗುಡ್ಡಪ್ಪ ಶೆಟ್ಟಿಯವರ ಮನೆಯಲ್ಲಿ ನಡೆಯಿತು.
ಗೌರವಾಧ್ಯಕ್ಷ ಗುಡ್ಡಪ್ಪ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಮುಂದಿನ 3 ವರ್ಷಗಳ ಅವಧಿಗೆ ಹಾಲಿ ಸಮಿಯನ್ನೇ ಮುಂದುವರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಆಟಿಡೊಂಜಿ ಕೂಟ ಆಯೋಜನೆ ಹಾಗೂ ಸಂಘದ ಮುಂದಿನ ಕಾರ್ಯ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಯಿತು. ಸಂಚಾಲಕ ಸತೀಶ್ ರೈ ಕೊಣಾಲುಗುತ್ತು, ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮನವಳಿಕೆ, ಸಹ ಸಂಚಾಲಕ ಜಯಾನಂದ ಬಂಟ್ರಿಯಾಲ್, ಕಾರ್ಯದರ್ಶಿ ವಾಣಿಸುಂದರ ಶೆಟ್ಟಿ ನೆಲ್ಯಾಡಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ ಕೊಲ್ಯೊಟ್ಟು, ಉಪಾಧ್ಯಕ್ಷರಾದ ಸುಂದರ ಶೆಟ್ಟಿ ಪುರ, ಪ್ರವೀಣ್ ಭಂಡಾರಿ ಪುರ, ಭಾಸ್ಕರ ರೈ ತೋಟ, ಪ್ರತಾಪ್ಚಂದ್ರ ರೈ ಕುದ್ಮಾರುಗುತ್ತು, ಜೊತೆ ಕಾರ್ಯದರ್ಶಿ ಶೀಲಾ ಯಶೋಧರ ಶೆಟ್ಟಿ, ಸದಸ್ಯರುಗಳಾದ ವಾಣಿ ಸದಾನಂದ ಶೆಟ್ಟಿ ಆಲಂತಾಯ, ಭಾರತಿ ಶೆಟ್ಟಿ, ಸುಜಾತ ರಮೇಶ್ ಶೆಟ್ಟಿ ಬೀದಿ, ಪ್ರಮುಖರಾದ ರಮೇಶ್ ಶೆಟ್ಟಿ ಬೀದಿ, ಶ್ಯಾಮಲಾ ಜಿ.ಶೆಟ್ಟಿ, ಸುಧಾ ಕರುಣಾಕರ ಶೆಟ್ಟಿ ನೆಲ್ಯಾಡಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ವಾಣಿ ಸುಂದರ ಶೆಟ್ಟಿ ವಂದಿಸಿದರು.