ನೆಲ್ಯಾಡಿ: ನೆಲ್ಯಾಡಿ ಪೇಟೆ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ಜೂ.29ರಂದು ನಿವೃತ್ತರಾದ ಶ್ರೀಮತಿ ತೆರೇಜಾರವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು ನಿವೃತ್ತರಾದ ತೇರೇಜರವರಿಗೆ ಹಣ್ಣು ಹಂಪಲು, ಶಾಲು ಹೊದಿಸಿ ಸನ್ಮಾನಿಸಿದರು. ತಾ.ಪಂ.ಸದಸ್ಯೆ ಉಷಾ ಅಂಚನ್ ಶುಭಹಾರೈಸಿದರು. ಸ್ತ್ರೀ ಶಕ್ತಿಗುಂಪುಗಳ ಪ್ರತಿನಿಧಿಗಳು, ಬಾಲವಿಕಾಸ ಸಮಿತಿಯ ಅಧ್ಯಕ್ಷರು, ಸದಸ್ಯರು, ಮಕ್ಕಳ ಪೋಷಕರು ಚಿನ್ನದ ಉಂಗುರ ನೀಡಿ ಗೌರವಿಸಿದರು. ನೆಲ್ಯಾಡಿ ಜೆಸಿಐ ಅಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿಯವರು ಸ್ಮರಣಿಕೆ ನೀಡಿ ಗೌರವಿಸಿದರು. ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಅಬ್ದುಲ್ ಹಮೀದ್, ಮೋಹಿನಿ, ಅಬ್ರಹಾಂ ಕೆ.ಪಿ., ಜಯಕರ್ನಾಟಕ ಸಂಘಟನೆಯ ಪುತ್ತೂರು ತಾಲೂಕು ಉಪಾಧ್ಯಕ್ಷ ನಾಝೀಂ ಸಾಹೇಬ್, ಅಂಗನವಾಡಿ ನಿರ್ಮಾಣಕ್ಕೆ ಸ್ಥಳವಕಾಶ ಮಾಡಿಕೊಟ್ಟ ಪ್ರಿಯದರ್ಶಿನಿ ಇಬ್ರಾಹಿಂ ಎಂ.ಕೆ., ನೆಲ್ಯಾಡಿ ವಾಣಿಶ್ರೀ ಜ್ಯುವೆಲ್ಲರ್ಸ್ ಮಾಲಕ ದಯಾನಂದ ಆಚಾರ್ಯ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಕನಕಿ ಕೆ., ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಮೇಲ್ವಿಚಾರಕಿ ಉಮಾವತಿ ಸ್ವಾಗತಿಸಿದರು. ನಳಿನಿ ವಂದಿಸಿದರು.