ನನಗಾಗಿ, ನನ್ನವರಿಗಾಗಿ ಆಸ್ಪತ್ರೆಗೆ ಹೋಗಿಲ್ಲ ಬಡ ಹೆಣ್ಣು ಮಗಳಿಗೆ ನ್ಯಾಯ ಒದಗಿಸಲು ಹೋಗಿದ್ದೆ-ಮೀನಾಕ್ಷಿ ಶಾಂತಿಗೋಡು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಾನು ನನ್ನ ಪೋಷಕರು, ಗಂಡ ಮತ್ತು ಮಕ್ಕಳಿಗಾಗಿ ಇಲ್ಲವೇ ಮನೆಯವರಿಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋದುದಲ್ಲ, ಬಡ ಹೆಣ್ಣು ಮಗಳೊಬ್ಬಳಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಲು ಹೋಗಿದ್ದೆ. ಆ ಸಂದರ್ಭದಲ್ಲಿ ಅಲ್ಲಿನ ವೈದ್ಯರು ನಡೆದುಕೊಳ್ಳಬೇಕಾದ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದು ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದ್ದಾರೆ.

ಪುತ್ತೂರು ಸರಕಾರಿ ಆಸ್ಪತ್ರೆಯ ಡಾ.ಅರ್ಚನಾ ಅವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಕುರಿತು ‘ಸುದ್ದಿ’ಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣವನ್ನು ಮಾತುಕತೆಯಲ್ಲಿ ಇತ್ಯರ್ಥ ಮಾಡುವ ಕುರಿತು ಶಾಸಕರ ಹೇಳಿಕೆ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸದ ಅಧ್ಯಕ್ಷರು ಈ ವಿಚಾರ ನನಗೆ ಗೊತ್ತಿಲ್ಲ ಅದೇನಿದ್ದರೂ ಪಕ್ಷದ ವಿಚಾರ. ಪಕ್ಷದ ಪ್ರಮುಖರೇ ಅದನ್ನು ತೀರ್ಮಾನಿಸುತ್ತಾರೆ ಎಂದು ಹೇಳಿದರು.

About The Author

Related posts

3 Comments

 1. L.B.PERNAJE

  ಗೌರವಾನ್ವಿತ ಅಧ್ಯಕ್ಷೆಯವರೇ,
  ಬಡವರಿಗೆ ಅರ್ಚನಾ ವೈದ್ಯೆಯವರಿಂದ ಅನ್ಯಾಯವಾಗಿದೆ ಎಂದು ನಿಮ್ಮಲ್ಲಿ ದೂರಿ ಕೊಂಡವರಾರು?ನಿಮ್ಮದು ಅಧಿಕೃತ ಭೇಟಿಯಾಗಿತ್ತೇ?ನೀವು ವೈದ್ಯೆಯವರನ್ನು ವಿಚಾರಿಸಲು ಅವರ ಛೇಂಬರ್ ಒಳ ಹೊಗುವಾಗ ಆಸ್ಪತ್ರೆಯ ಆಢಳಿತಾಧಿಕಾರಿ ಜೊತೆಯಲ್ಲಿ ಏಕೆ ಹೋಗಲಿಲ್ಲ?ಗೌರವ ಕೊಟ್ಟು ಗೌರವ ಪಡಕೊಳ್ಳಿ ಎಂದು ವೈದ್ಯೆಯವರಿಗೆ ಹೇಳಿದಿರಲ್ಲವೇ?ಆಕೆ ನೀವು ಅವರಿಗೆ ಗೌರವ ಕೊಡಲಿಲ್ಲವೆಂದು ಆಪಾಧಿಸಿದರೇ ಅಥವಾ ನಿಮ್ಮಲ್ಲಿ ಗೌರವ ಕೊಡಲು ಹೇಳಿದರೇ?ಅವರಲ್ಲಿ ಗೌರವಕ್ಕೆ‌ ಕೊರತೆ ಇರಲಿಲ್ಲ.ಹಾಗಾಗಿ ಕೇಳಲಿಲ್ಲ.ಆದರೆ ನಿಮ್ಮಲ್ಲಿ‌ ಆ ಕೊರತೆ ಇದ್ದಂತೆ ಅನಿಸಿತು.ಹಾಗಾಗಿ ನೀವು ಗೌರವವನ್ನು ರೇಗಾಡಿ ಪಡೆಯಲು ಯತ್ನಿಸಿ ತನಗೆ ಗೌರವದ ಕೊರತೆಯಿದೆ ಎಂದು ಜಗಜ್ಜಾಹೀರು‌ ಮಾಡಿಕೊಂಡಿರಿ.ನಿಮ್ಮಿಂದಾಗಿರುವ ಮಹದಪರಾಧವನ್ನು ಇನ್ನೂ ಸಮರ್ಥಿಸದಿರಿ.
  ನೀವು ಎಸಗಿದ ರಾದ್ಧಾಂತದಿಂದ ಸರಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ ರಜೆಯಲ್ಲಿ ತೆರಳಿದ್ದಾರೆಂಬ ವರದಿಯಿದೆ.ಇದಕ್ಕೆ ನಿಮ್ಮ ಸಮರ್ಥನೆ ಏನು? ಬದಲಿ ವ್ಯವಸ್ಥೆ ನೀವೇನು ಕೈಗೊಳ್ಳಲಿರುವಿರಿ?
  ಕೆಟ್ಟ ಘಳಿಗೆಯಲ್ಲಿ ಏನೋ ಒಂದು ಅನುಚಿತ ಘಟನೆ ನಡೆದಿದೆ.ಅದು ಶೇಕಡಾ ನೂರರಷ್ಟೂ ಖಂಡನಾರ್ಹ ಘಟನೆ. ಅದಕ್ಕಾಗಿ ಮನವರಿತು ವೈದ್ಯೆಯವರಲ್ಲಿ ನಿಶ್ಶರ್ತ ಕ್ಷಮೆಯಾಚಿಸಿ.ಇದರಿಂದ ನಿಮ್ಮ ಗೌರವ ಇಮ್ಮಡಿಯಾಗುವುದು.ನೀವು ಘಟನೆಯಲ್ಲಿ ನಿಮ್ಮ ಪಾತ್ರ ಸಮರ್ಥಿಸಿದಷ್ಟೂ ವಿವಾದ ಬೆಳೆದು ಹೆಮ್ಮರವಾಗುತ್ತದೆ.ಅದರೊಂದಿಗೆ ನಿಮ್ಮ ರಾಜಕೀಯ ಬದುಕು ಅಂತ್ಯವಾಗುತ್ತದೆ.

  Reply
  1. ವೆಂಕಟರಮಣ

   ಸರಿಯಾಗಿ ಹೇಳಿದಿರಿ ಬಡ ಹೆಣ್ಣು ಮಗಳನ್ನು ನೋಡಲು ಅಂತ ಹೇಳಿ ರಾಜಕೀಯ ಮಾಡಲು ಹೋದಾಕೆ ಕೃತ್ಯವನ್ನು ಸಮರ್ಥನೆ ಮಾಡುದು ಸರಿಯಲ್ಲ

   Reply
 2. Harisubrahmanya Puchhappady

  Dear Madam,
  Every one in this world deserve a word called ‘Respect’
  Being a elected member you should be a role model to the society. If you respect ‘Values’ in your life all you need to do is ‘Convey your apologies’ to Ms. Dr. Archana and to Public’

  Harisubrahmanya Puchhappady

  Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.