Home_Page_Advt
Home_Page_Advt
Home_Page_Advt
Breaking News

ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಡೆಂಗ್ಯೂ ಜಾಗೃತಿ ಅಭಿಯಾನ – ಡ್ರೈವ್ ಡೇಗೆ ಹಸಿರು ನಿಶಾನೆ ತೋರಿಸಿ ಚಾಲನೆ

  • ಮುಂಜಾಗೃತೆ ವಹಿಸದಿದ್ದರೆ ಮರಣಕ್ಕೂ ಕಾರಣ – ಎ.ಸಿ. ಹೆಚ್.ಕೆ.ಕೃಷ್ಣಮೂರ್ತಿ
  • ನೀರು ತುಂಬಿದ ಸ್ಥಳ ಗುರುತು – ರೂಪಾ ಶೆಟ್ಟಿ

ಪುತ್ತೂರು: ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ನೀಡಿದ ಸೂಚನೆಯಂತೆ ತಾಲೂಕಿನಾದ್ಯಂತ ಡೆಂಗ್ಯೂ ಡ್ರೈವ್ ಡೇ ಅಭಿಯಾನ ಜು. 28ರಂದು ಆರಂಭಗೊಂಡಿದ್ದು, ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಕಚೇರಿ ಬಳಿಯಿಂದ ಅಭಿಯಾನ ಆರಂಭಗೊಂಡಿದ್ದು, ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಅಭಿಯಾನವು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮೂಲಕ ಹಾದು ನೆಲ್ಲಿಕಟ್ಟೆ ಬಸ್‌ನಿಲ್ದಾಣದ ತನಕ ನಡೆಯಿತು. ಸಹಾಯಕ ಕಮೀಷನರ್ ಅಭಿಯಾನದ ಜೊತೆಗೆ ತೆರಳಿ ಕಟ್ಟಡವೊಂದರ ಕೆಳಗಡೆ ನಿಂತ ನೀರನ್ನು ವೀಕ್ಷಣೆ ಮಾಡಿ ಎಚ್ಚರಿಕೆ ನೀಡಲು ತಿಳಿಸಿದ ಘಟನೆಯೂ ನಡೆಯಿತು.

ಮುಂಜಾಗೃತೆ ವಹಿಸದಿದ್ದರೆ ಮರಣಕ್ಕೂ ಕಾರಣ:
ಹಸಿರು ನಿಶಾನೆ ತೋರಿಸಿ ಅಭಿಯಾನಕ್ಕೆ ಚಾಲನೆ ನೀಡಿದ ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ ಅವರು ಮಾತನಾಡಿ ಡೆಂಗ್ಯೂ ಹೋಗಲಾಡಿಸಲು ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಆಗಿದೆ. ಕೊಳಚೆ ಪ್ರದೇಶದಲ್ಲಿ ಡೆಂಗ್ಯೂ ಇರುವುದಿಲ್ಲ. ಕೊಳಕು ನೀರಿನಿಂದ ಡೆಂಗ್ಯೂ ಬರುವುದಿಲ್ಲ. ಶುದ್ಧ ನೀರಿನಿಂದಲೇ ಬರುತ್ತದೆ. ನಿಂತ ಶುದ್ದ ನೀರಿನಲ್ಲಿ ಲಾರ್ವ ಉತ್ಪತ್ತಿಯಾಗಿ ಅದರಿಂದ ಬರುವ ಸೊಳ್ಳೆಯಿಂದ ಡೆಂಗ್ಯೂ ಬರುತ್ತದೆ. ಈ ನಿಟ್ಟಿನಲ್ಲಿ ಮನೆಯಲ್ಲಿರುವ ತೊಟ್ಟಿಯಲ್ಲಿ ನೀರನ್ನು ಬಹಳ ದಿನಗಳಿಂದ ತುಂಬಿಸಿಟ್ಟರೆ ಅದನ್ನು ಶುಚಿಗೊಳಿಸಿ ಅಗತ್ಯ ಕ್ರಮ ಕೈಗೊಂಡರೆ ಡೆಂಗ್ಯೂವನ್ನು ನಿಯಂತ್ರಣ ಮಾಡಿದಂತಾಗುತ್ತದೆ ಎಂದ ಅವರು ಡೆಂಗ್ಯೂ ಬಂದರೆ ಯಾವುದೇ ರೀತಿಯ ಔಷಧಿ ಇಲ್ಲ. ಜನರಲ್ ಔಷಧವೇ ಪಡೆಯಬೇಕು. ಈ ನಿಟ್ಟಿನಲ್ಲಿ ಮುಂಜಾಗೃತೆ ವಹಿಸಿಕೊಂಡಿಲ್ಲ ಎಂದಾದರೆ ಮರಣಕ್ಕೂ ಕಾರಣ ಆಗುತ್ತದೆ. ಹಾಗಾಗಿ ಇದನ್ನು ನಿರ್ಲಕ್ಷ ವಹಿಸಬೇಡಿ ಎಂದು ಸಹಾಯಕ ಕಮೀಷನರ್ ಎಚ್ಚರಿಸಿದರು. ಮೊನ್ನೆ ಮೊನ್ನೆ ಮಂಗಳೂರಿನಲ್ಲಿ ಪತ್ರಕರ್ತರೋರ್ವರು ಡೆಂಗ್ಯೂವಿನಿಂದಲೇ ನಿಧನರಾದು ಎಂಬುದು ಬೇಸರದ ವಿಷಯ. ಇವೆಲ್ಲಾ ಬಹಳ ಆತಂಕ ತರುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಿ ಇಡಿ ಪರಿಸರವನ್ನು ಕ್ಲೀನ್ ಮಾಡಿ ಎಂದು ಸಹಾಯಕ ಕಮೀಷನರ್ ಹೇಳಿದರು.

ನೀರು ತುಂಬಿದ ಸ್ಥಳ ಗುರುತು:
ಪೌರಾಯುಕ್ತೆ ರೂಪಾ ಶೆಟ್ಟಿಯವರು ಮಾತನಾಡಿ ಇವತ್ತು ಆರಂಭಗೊಂಡಿರುವ ಅಭಿಯಾನದಿಂದ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಜೊತೆಗೆ ಎಲ್ಲೆಲ್ಲಾ ಶುದ್ಧ ನೀರು ನಿಂತಿದೆಯೋ ಆ ಸ್ಥಳಗಳನ್ನು ಗುರುತಿಸಿ ಮುಂದೆ ಅಲ್ಲಿ ಕಾರ್ಯಾಚರಣೆ ನಡೆಸಲಾಗುತ್ತದೆ. ಕಟ್ಟಡಗಳಲ್ಲಿ ನೀರು ತುಂಬಿದ್ದರೆ ನೊಟೀಸ್ ಮಾಡಿ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದ ಅವರು ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯಲ್ಲಿ ನೀರು ನಿಲ್ಲದಂತೆ ಹಾಗೂ ಸ್ವಚ್ಛಗೊಳಿಸಿ ಈ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದರು.


Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.