Breaking News

ನೆಹರು ನಗರ: ಬೈಕ್ ಪಾದಚಾರಿಗೆ ಡಿಕ್ಕಿ – ಬೈಕ್ ಸವಾರ ಮೆಸ್ಕಾಂ ಪವರ್ ಮ್ಯಾನ್ ವಸಂತ್ ಮೃತ್ಯು

Puttur_Advt_NewsUnder_1
Puttur_Advt_NewsUnder_1

ಪುತ್ತೂರು:      ಪಾದಚಾರಿಯೋರ್ವರಿಗೆ ಬೈಕೊಂದು ಡಿಕ್ಕಿಯಾದ ಘಟನೆಗೆ ಸಂಬಂದಿಸಿ ಬೈಕ್ ಸವಾರ ಮೆಸ್ಕಾಂ ಪವರ್ ಮ್ಯಾನ್ ಕೋಡಿಂಬಾಡಿ ಭಂಡಾರದ ಮನೆ ನಿವಾಸಿ ವಸಂತ್ ಕುಮಾರ್(40 ವ) ಎಂಬವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಪಾದಚಾರಿ ನೆಹರು ನಗರ ನಿವಾಸಿ ವಿನೋದ್ ಎಂಬವರು ಸಣ್ಣ-ಪುಟ್ಟ ಗಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ:
ಕೋಡಿಂಬಾಡಿ ಭಂಡಾರದ ಮನೆ ನಿವಾಸಿ ಶಿವಪ್ಪ ಗೌಡರ ಪುತ್ರ ಮೆಸ್ಕಾಂ ಪವರ್ ಮ್ಯಾನ್ ವಸಂತ್ ಕುಮಾರ್ ರವರು ಚಲಾಯಿಸುತ್ತಿದ್ದ ಬೈಕ್ ಆ.6 ರಂದು ರಾತ್ರಿ ನೆಹರೂ ನಗರದ  ರೈಲ್ವೇ ಬ್ರಿಡ್ಜ್ ಬಳಿ ಪಾದಚಾರಿ ವಿನೋದ್ ಎಂಬವರಿಗೆ ಡಿಕ್ಕಿಯಾಗಿತ್ತು. ಪರಿಣಾಮ ಬೈಕ್ ಸವಾರ ವಸಂತ್ ಕುಮಾರ್ ರೈಲ್ವೇ ಬ್ರಿಡ್ಜ್ ನ ತಡೆಗೋಡೆಗೆ ಬಿದ್ದು ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು. ಪಾದಚಾರಿ ವಿನೋದ್ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.