ಅನ್ಯ ರಾಜ್ಯಕ್ಕೂ ಆರ್ಟಿಕಲ್ 371 ಹಾಗೂ ವಿಶೇಷ ಸ್ಥಾನಮಾನ…!

Puttur_Advt_NewsUnder_1
Puttur_Advt_NewsUnder_1

ಜಮ್ಮು ಕಾಶ್ಮೀರಕ್ಕೆ ವಿಶೇಷಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ನಿಷೇಧಗೊಳಿಸಿರುವುದರಿಂದ, ಕೇವಲ ಜಮ್ಮು-ಕಾಶ್ಮೀರಕ್ಕೆ ಮಾತ್ರವೇ ಇಂತಹ ವಿಧಿಗಳು ಸೀಮಿತವಾಗಿತ್ತೇ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ..

ಆರ್ಟಿಕಲ್ 371ವಿಧಿಯ ಅಧೀನದಲ್ಲಿ ಉಳಿದ ಯಾವುದೆಲ್ಲಾ ರಾಜ್ಯಗಳು ಒಳಗೊಂಡಿದೆ ಎಂಬುದರ ಮಾಹಿತಿ ಇಲ್ಲಿದೆ…

ನಾಗಾಲ್ಯಾಂಡ್ : ಆರ್ಟಿಕಲ್ 371 ಎ
ನಾಗಾಲ್ಯಾಂಡ್ ಜನರ ಸಾಮಾಜಿಕ ಅಥವಾ ಧಾರ್ಮಿಕ ಪದ್ಧತಿಗಳಿಗೆ ಸಂಸತ್ತಿ ನಿಂದ ರೂಪಿತವಾದ ಯಾವುದೇ ಕಾಯ್ದೆಯೂ ಅನ್ವಯವಾಗುವುದಿಲ್ಲ ಎಂಬ ನಿಯಮವನ್ನು ಈ ಅರ್ಟಿಕಲ್ ಹೊಂದಿದೆ. ದೇಶದ ಇತರೆ ರಾಜ್ಯಗಳಲ್ಲಿ ಅನ್ವಯವಾಗುವ ಕಾನೂನುಗಳು ನಾಗಾ ಪಂಗಡದ ಸಾಂಪ್ರದಾಯಿಕ ನಿಯಮಗಳಿಗೆ ಅನ್ವಯವಾಗುವುದಿಲ್ಲ . ಇನ್ನೂ ನಾಗಾಲ್ಯಾಂಡ್‌ನ ಭೂಮಿ ಮತ್ತು ಸಂಪನ್ಮೂಲಗಳ ಮಾಲೀಕತ್ವ ಮತ್ತು ವರ್ಗಾವಣೆಯ ವಿಚಾರಗಳೂ ಅಲ್ಲಿನ ಜನರಿಗೆ ಮೀಸಲಾಗಿದೆ. ವಿಶೇಷವೆನೆಂದರೆ ನಾಗಲ್ಯಾಂಡ್‌ನ ನೆಲ ಮತ್ತು ಅದರ ಸಂಪನ್ಮೂಲಗಳು ಜನರಿಗೆ ಸಂಬಂಧಿಸಿದ್ದೇ ಹೊರತು ಸರ್ಕಾರಕ್ಕಲ್ಲ ಎನ್ನುತ್ತದೆ ಆರ್ಟಿಕಲ್ 371 ಎ .

ಅಸ್ಸಾಂ : ಆರ್ಟಿಕಲ್ 371 ಬಿ
ಅಸ್ಸಾಂನ ಬುಡಕಟ್ಟುಗಳಿಗೆ ಸ್ವಾಯತ್ತತೆ ಮತ್ತು ಧ್ವನಿ ನೀಡುವ ಮಹತ್ತರ ಉದ್ದೇಶ ಇದಕ್ಕಿದೆ. ಈ ಆರ್ಟಿಕಲ್ ವಿಧಿಯ ಪ್ರಕಾರ, ಅಸ್ಸಾಂನ ಬುಡಕಟ್ಟು ಪ್ರದೇಶಗಳಿಂದ ಚುನಾಯಿತರಾದ ರಾಜಕಾರಣಿಗಳನ್ನು ಒಳಗೊಂಡ ಪ್ರತ್ಯೇಕ ಶಾಸಕಾಂಗ ಸಭೆಯ ಸಮಿತಿಯನ್ನು ರಚಿಸಲು ರಾಜ್ಯಪಾಲರಿಗೆ ರಾಷ್ಟ್ರಪತಿಗಳು ಅಧಿಕಾರ ನೀಡಲಿದ್ದಾರೆ .

ಮಣಿಪುರ : ಆರ್ಟಿಕಲ್ 371 ಸಿ
ಮಣಿಪುರದ ಪರ್ವತ ಪ್ರದೇಶಗಳ ಶ್ರೇಯೋಭಿವೃಧಿಯಲ್ಲಿ ಈ ವಿಧಿ ಪ್ರಮುಖವಾಗಿ ಪಾತ್ರ ವಹಿಸುತ್ತದೆ. ಮಣಿಪುರದಲ್ಲೂ ಕೂಡ ಬೆಟ್ಟ ಪ್ರದೇಶಗಳಿಂದ ಆಯ್ಕೆಯಾದ ಸದ್ಯಸರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಪರ್ವತ ಪ್ರದೇಶಗಳಲ್ಲಿ ಆಡಳಿತ ಹೇಗಿದೆ ಎನ್ನುವ ಕುರಿತು ರಾಜ್ಯಪಾಲರು ರಾಷ್ಟ್ರಪತಿಯವರಿಗೆ ವರದಿ ಸಲ್ಲಿಸಬೇಕಾತ್ತದೆ.

ಆಂಧ್ರಪ್ರದೇಶ : ಆರ್ಟಿಕಲ್ 371 ಡಿ ಮತ್ತು ಇ
1974ರಂದು ಸಂವಿಧಾನಕ್ಕೆ ಸೇರ್ಪಡೆಗೊಂಡ ಈ ವಿಧಿಯ ಉದ್ಯೋಗ ಮತ್ತು ಶಿಕ್ಷಣದಲ್ಲಿ ಆಂಧ್ರದ ಜನರಿಗೆ ಸಮಾನ ಅವಕಾಶವನ್ನು ಮತ್ತು ಸೌಲಭ್ಯಗಳನ್ನು ಒದಗಿಸುತ್ತದೆ. ಆಂಧ್ರವಾಸಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಖಾತ್ರಿಪಡಿಸುವ ವಿಶೇಷ ಅಧಿಕಾರವನ್ನು ಈ ಆರ್ಟಿಕಲ್ ಹೊಂದಿದೆ.

ಸಿಕ್ಕಿಂ : ಆರ್ಟಿಕಲ್ 371 ಎಫ್
ಭಾರತದ 22ನೇ ರಾಜ್ಯವಾಗಿ ಸೇರ್ಪಡೆಗೊಂಡಾಗ ಅಳವಡಿಸಲಾದ ವಿಧಿಯಿದು. ಇಂದಿಗೂ ಸಿಕ್ಕಿಂ ಈಶಾನ್ಯ ರಾಜ್ಯಗಳಲ್ಲೇ ಅತಿ ಶಾಂತ ರಾಜ್ಯವಾಗಿ ಉಳಿದಿರುವುದರಲ್ಲಿ ಈ ಆರ್ಟಿಕಲ್ 371 ಎಫ್ ಪಾತ್ರ ದೊಡ್ಡದು ಎನ್ನಲಾಗುತ್ತದೆ. ಸಿಕ್ಕಿಂ ಸ್ಥಳೀಯ ಸಂಸ್ಕೃತಿಯ ರಕ್ಷಣೆಗೆ ಆದ್ಯತೆ ಕೊಡುವ ಈ ವಿಧಿಯು , ರಾಜಕೀಯವಾಗಿಯೂ ವಿವಿಧ ಪಂಗಡದ ಜನರಿಗೆ ಮನ್ನಣೆ ನೀಡುತ್ತದೆ. ಭಾರತದೊಂದಿಗೆ ಒಂದಾಗುವ ಮುಂಚೆ ಸಿಕ್ಕಿಂ ಹೊಂದಿದ್ದ ಕಾನೂನುಗಳನ್ನು ಈಗಲೂ ಕಾಪಾಡಿಕೊಂಡು ಬಂದಿದೆ.

ಮಿಜೋರಾಂ : ಆರ್ಟಿಕಲ್ 371 ಜಿ
ಗಡಿ ರಾಜ್ಯದ ಜನರ ಸಾಂಪ್ರದಾಯಿಕ ಕಾನೂನು- ಕಟ್ಟಳೆಗಳು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಭೂ ಹಕ್ಕುಗಳಿಗೆ ದೇಶದ ಕಾನೂನುಗಳು ಅನ್ವಯವಾಗುವುದಿಲ್ಲ. ಒಂದು ವೇಳೆ ಈ ವಿಧಿಯಲ್ಲಿ ಬದಲಾವಣೆ ತರಬೇಕೆಂದರೆ, ವಿಧಾನಸಭೆಯ ಅಂಗೀಕಾರ ಆಗತ್ಯವಾಗುತ್ತದೆ. ಈ ಭಾಗದಲ್ಲೂ ಹೊರಗಿನ ರಾಜ್ಯಗಳವರಿಗೆ ಜಾಗ ಖರೀದಿಸುವ ಅಧಿಕಾರವಿಲ್ಲ.

ಅರುಣಾಚಲ : ಆರ್ಟಿಕಲ್ 371 ಎಚ್
ಈ ವಿಧಿಯಲ್ಲಿ ಅರುಣಾಚಲ ಪ್ರದೇಶದ ಕಾನೂನು ಸುವ್ಯವಸ್ಥೆಯ ಮೇಲೆ ರಾಜ್ಯಪಾಲರಿಗೆ ವಿಶೇಷಾಧಿಕಾರವನ್ನು ಒದಗಿಸುತ್ತದೆ. ಆರ್ಟಿಕಲ್ 371 ಎಚ್ ವಿಧಿಯ ಆಧಾರದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳ ನಿರ್ಣಯವನ್ನು ರದ್ದು ಮಾಡಬಹುದಾಗಿದೆ. ಅರುಣಾಚಲದಲ್ಲಿ ಚೀನಾದ ಮೂಗುತೂರಿಸುವಿಕೆಯನ್ನು ಹತ್ತಿಕ್ಕುವಲ್ಲಿ ಈ ವಿಧಿಯ ಪಾತ್ರ ದೊಡ್ಡದು.

ಗೋವಾ : ಆರ್ಟಿಕಲ್ 371 ಐ
ಆರ್ಟಿಕಲ್ 371 ಐ ಅಡಿಯಲ್ಲಿ ಭೂ ಮಾರಾಟ, ಆಸ್ತಿಗಳ ಮಾಲೀಕತ್ವದ ವಿಚಾರದಲ್ಲಿ ಕಾನೂನುಗಳನ್ನು ರೂಪಿಸುವ ವಿಶೇಷಾಧಿಕಾರ ಗೋವಾ ವಿಧಾನಸಭೆಗೆ ಇದೆ. ಗೋವಾದ ವಿಧಾನಸಭೆಯು 30 ಕ್ಕಿಂತಲೂ ಕಡಿಮೆ ಸದಸ್ಯರನ್ನು ಹೊಂದಿರಬಾರದೆಂದು ಈ ವಿಧಿ ಹೇಳುತ್ತದೆ.

ಹೈದ್ರಾಬಾದ್ ಕರ್ನಾಟಕ : ಆರ್ಟಿಕಲ್ 371 ಜೆ
ಇದು ಮಹಾರಾಷ್ಟ್ರ ಮತ್ತು ಗುಜರಾತ್‌ಗೆ ಅನ್ವಯಿಸಲಾಗುವ ಆರ್ಟಿಕಲ್  370 ಅನ್ನು ಹೋಲುತ್ತದೆ. ಸ್ಥಳೀಯರಿಗೆ ಶಿಕ್ಷಣ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಈ ವಿಧಿಯು ಹೇಳುತ್ತದೆ. ಇದರಿಂದಾಗಿ ವೃತ್ತಿಪರ ಕೋರ್ಸ್‌ಗಳಿಗೆ ಸಾವಿರಾರು ವಿದ್ಯಾಥಿಗಳು ಪ್ರವೇಶವನ್ನೂ, ವಿದ್ಯಾವಂತರು ಉದ್ಯೋಗವನ್ನೂ ಪಡೆಯುವಂತಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.