ಕಿಲ್ಲೆ ಮೈದಾನದ ತ್ಯಾಜ್ಯ ವಿಲೇವಾರಿ ಯಾವಾಗ? ರೋಗಗಳಿಗೆ ಸ್ವಾಗತ ನೀಡುತ್ತಿದೆ ಕಸಗಳ ರಾಶಿ..!

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಸ್ವಚ್ಛತೆಗೆ ಮಾದರಿಯಾಗಬೇಕಾದರೆ ನಾವು ಏನು ಮಾಡಬೇಕು, ಭವಿಷ್ಯದ ಪುತ್ತೂರು ಹೇಗಿರಬೇಕು ಎಂಬೆಲ್ಲ ಚಿಂತನೆಗಳನ್ನು ಮಾಡುತ್ತೇವೆ. ಆದರೆ ನಾವು ಇಂತಹ ಚಿಂತನೆಗಳಿಗೆ ಮಣೆ ಹಾಕುವಾಗ ಸ್ವಲ್ಪ ಯೋಚನೆ ಮಾಡಬೇಕು. ಪ್ರತಿದಿನವು ನಿಯಮಿತವಾಗಿ ನಡೆಯುವ ಕಾರ್ಯಗಳೇ ಸರಿಯಾಗಿ ನಡೆಯದಿದ್ದರೆ ನಾವು ಸ್ವಚ್ಛತೆಗೆ ಇಟ್ಟಿರುವ ಪ್ರಾಶಸ್ತ್ಯ ಎಷ್ಟು?

ನಗರಸಭೆಗೆ ಎದುರಾಗಿ, ಬಹು ಹತ್ತಿರವಿರುವ, ವಾರದ ಸಂತೆ ನಡೆಯುವ ಸ್ಥಳ ಕಿಲ್ಲೆ ಮೈದಾನ. ಇಲ್ಲಿ ನಡೆಯವ ಸಂತೆ ಒಂದು ದಿನವಾದರೂ ಕಸಗಳಂತು ರಾಶಿಯೋ, ರಾಶಿ. ಆದರೆ ಇದನ್ನು ವಿಲೇವಾರಿ ಮಾಡುವುದು ಅಷ್ಟೇ ಮುಖ್ಯ. ಆದರೆ ಸಂತೆ ನಡೆದು ಮೂರು ದಿನವಾದರೂ ತ್ಯಾಜ್ಯಗಳ ವಿಲೇವಾರಿಯಾಗದೆ ರೋಗಗಳಿಗೆ ಸ್ವಾಗತ ನೀಡುತ್ತಿದೆ ಈ ಕಸಗಳ ರಾಶಿ..!

ಎಂತಹ ದುರ್ದೈವವಿದು, ಒಂದು ಕಡೆ ತಾಲೂಕಿನಾದ್ಯಂತ ಡೆಂಗ್ಯೂ ಜ್ವರದ ಬಾಧೆ ಅನೇಕ ಮಂದಿಯನ್ನು ಕಂಗೆಡಿಸಿದ್ದು ಆತಂಕಕ್ಕೆ ಈಡು ಮಾಡಿದೆ. ಆದರೆ ಇಲ್ಲಿ ಅದರ ವಿರುದ್ದ ಎಂಬಂತೆ ಕಿಲ್ಲೆ ಮೈದಾನವು ಡೆಂಗ್ಯೂ ಜ್ವರಕ್ಕೆ ಸಂಪೂರ್ಣ ಬೆಂಬಲ ನೀಡುವಂತಿದೆ

ಅದರಲ್ಲೂ ತರಕಾರಿ ತ್ಯಾಜ್ಯಗಳಲ್ಲಿ ಬಹು ಬೇಗನೆ ಸೊಳ್ಳೆ ಉತ್ಪತ್ತಿಯಾಗುತ್ತದೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತಕ್ರಮವನ್ನು ಕೈಗೊಳ್ಳಬೇಕಾಗಿದೆ.

ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಸವನ್ನು ತೆಗೆಯಲು ಸಾಧ್ಯವಾಗಿಲ್ಲ. ಅದನ್ನು ಗುಡಿಸಿ ತೆಗೆಯಲು ಕಷ್ಟಸಾಧ್ಯವಾದ್ದರಿಂದ ಆದಷ್ಟು ಬೇಗ ತ್ಯಾಜ್ಯವಿಲೇವಾರಿ ಮಾಡಲಾಗುವುದು – ರೂಪಾ ಶೆಟ್ಟಿ ಪೌರಾಯುಕ್ತರು ಪುತ್ತೂರು ನಗರಸಭೆ

ತ್ಯಾಜ್ಯಗಳಿಂದ ಸೊಳ್ಳೆಗಳು ಉತ್ಪತ್ತಿಯಾಗುತಿದ್ದು ಕಿಲ್ಲೆ ಮೈದಾನದ ಸಮೀಪವಿರುವ ಅಂಗಡಿಗಳಿಗೆ ಸೊಳ್ಳೆಯ ಕಾಟ ಜಾಸ್ತಿಯಾಗಿದೆ. ಕೂಡಲೇ ಸಂತೆ ನಡೆದು ಮೂರು ದಿನವಾದರೂ ತ್ಯಾಜ್ಯ ವಿಲೇವಾರಿಯಾಗಲಿಲ್ಲ – ಸ್ಥಳೀಯ ಅಂಗಡಿ ಮಾಲಕರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.