Breaking News

ಉಪ್ಪಿನಂಗಡಿಯಲ್ಲಿ ಸಂಗಮದ ನಿರೀಕ್ಷೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಪ್ಪಿನಂಡಿ ನೇತ್ರಾವತಿ ಕುಮಾರಧಾರ ನದಿಗಳು ಮೈದುಂಬಿ ಹರಿಯುತ್ತಿದ್ದು, ಉಭಯ ನದಿಗಳು ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಬಳಿ ಸಂಗಮಗೊಳ್ಳುವ ಸಾಧ್ಯತೆ ಇದ್ದು ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ತಂಡೋಪ ತಂಡವಾಗಿ ಭಕ್ತಾಧಿಗಳು ದೇವಾಲಯದತ್ತ ಮುಖಮಾಡುತ್ತಿದ್ದಾರೆ. 

ನೇತ್ರಾವತಿ ನದಿಗಳ ಅಪಾಯದ ಮಟ್ಟ 30.5 ಮೀ ಆಗಿದ್ದು  ಈಗ ನೇತ್ರಾವತಿ ನದಿಯ ನೀರು 30 ಮೀಟರ್ ನಲ್ಲಿ ಹರಿಯುತ್ತಿದೆ. ದೇವಾಲಯದಲ್ಲಿರುವ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ಒಂದು ಮೆಟ್ಟಿಲು ಮಾತ್ರ ಕಾಣಿಸುತ್ತಿದ್ದು, ಉಭಯ ನದಿಗಳಲ್ಲಿ ಇನ್ನಷ್ಟು ನೀರು ಹರಿದು ಬಂದರೆ, ದೇವಾಲಯದ ಆವರಣದೊಳಗಡೆ ನೆರೆ ನೀರು ಪ್ರವೇಶಿಸಲಿದೆ. ಬಳಿಕ ಉಭಯ ನದಿಗಳ ನೀರು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗಕ್ಕೆ ಬಂದು ಒಂದಕ್ಕೊಂದು ಸಂಧಿಸಿದರೆ ಸಂಗಮವಾಯಿತೆಂದು ಲೆಕ್ಕ. ಬಳಿಕ ದೇವಾಲಯದ ವತಿಯಿಂದ ಗಂಗಾಪೂಜೆ ನಡೆಯುತ್ತದೆ. ಭಕ್ತಾಧಿಗಳು ಸಂಗಮ ಸ್ನಾನವನ್ನು ಮಾಡುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.