ವರುಣನ ಆರ್ಭಟ -ಕೊಯಿಲ, ಆತೂರು ಪರಿಸರದಲ್ಲಿ ವಿದ್ಯುತ್ ಕಂಬಗಳು ಧರಶಾಯಿ

Puttur_Advt_NewsUnder_1
Puttur_Advt_NewsUnder_1

ಕಡಬ: ಕೊಯಿಲ, ಆತೂರು ಪರಿಸರದಲ್ಲಿ ಕಳೆದ ರಾತ್ರಿ, ಆ.9 ರಂದು ಬೆಳಿಗ್ಗೆ ಬೀಸಿದ ಭಾರಿ ಗಾಳಿಗೆ ವಿದ್ಯುತ್ ತಂತಿ ಮೇಲೆ ಮರಗಳು ಬಿದ್ದು ಹಲವು ವಿದ್ಯುತ್ ಕಂಬಗಳು ಧರಶಾಯಿಯಾಗಿದೆ. ಆತೂರು ಸಮೀಪದ ಕೊಯಿಲ ಸರಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದ ಬಳಿ ಬೃಹತ್ ಮರ ಮುರಿದು ಬಿದ್ದಿದೆ, ಕೊಯಿಲ ಗ್ರಾಮದಲ್ಲಿ ಏಣಿತ್ತಡ್ಕ ಎಂಬಲ್ಲಿ ಮರವೊಂದು ಮುರಿದು ಬಿದ್ದಿದೆ. ಇದೇ ಗ್ರಾಮದ ತಿಮರೆಗುಡ್ಡೆ ಎಂಬಲ್ಲಿ ಮರ ಬಿದ್ದಿದೆ.

ಘಟನೆಯಿಂದ ಸುಮಾರು 10 ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ತಿಮರೆಗುಡ್ಡೆ ಎಂಬಲ್ಲಿ ಕಂಬ ಮುರಿದು ಬಿದ್ದ ಪರಿಣಾಮ ಇಲ್ಲಿಯ ಕೃಷ್ಣಪ್ಪ ಎಂಬುವವರ ಪಂಪು ಶೆಡ್ ಗೆ ಹಾನಿಯಾಗಿದೆ. ಸಮಸ್ಯೆ ಬಗೆಹರಿಸಲು ಮೆಸ್ಕಾಂ ಸಿಬ್ಬಂದಧೀಿಗಳು ಹರ ಸಾಹಸ ಪಡುತ್ತಿದ್ದಾರೆ. ನಿರಂತರ ಸುರಿಯುವ ಮಳೆಯೊಂದಿಗೆ ಭಾರಿ ಗಾಳಿ ಬೀಸುತ್ತಿರುವುದು ಸೂಸುತ್ರವಾಗಿ ಕೆಲಸ ಮುಗಿಸಲು ಸವಾಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.