Breaking News

ನಾಡಿನೆಲ್ಲೆಡೆ ಮಾತೆಯರಿಂದ ಭಕ್ತಿ ಶ್ರದ್ಧೆಯ ವರಮಹಾಲಕ್ಷ್ಮಿ ವೃತ

Puttur_Advt_NewsUnder_1
Puttur_Advt_NewsUnder_1

ಶುಭ ಶ್ರಾವಣ ಮಾಸದ ಎರಡನೇ ಶುಕ್ರವಾರ(ಆ.9)ದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಪ್ರಮುಖವಾದ ಹಬ್ಬಗಳಲ್ಲಿ ವರ ಮಹಾಲಕ್ಷ್ಮೀ ಹಬ್ಬವೂ ಒಂದಾಗಿದೆ. ಸಕಲ ಐಶ್ವರ್‍ಯ ವನ್ನು ಕರುಣಿಸುವ ಮಹಾಲಕ್ಷ್ಮೀಗೆ ಈ ದಿನ ಮನೆ ಮನೆಯಲ್ಲೂ ಸಂಭ್ರಮದ ಪೂಜೆ ನಡೆಯುತ್ತದೆ. 

ನಮಸ್ತೇ ಮಹಾಮಾಯೆ… ಶ್ರೀ ಪೀಠೆ ಸುರಪೂಜಿತೆ| ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ|| ಹೇ ಮಹಾಮಾಯೆ… ಶ್ರೀ ಪೀಠದಲ್ಲಿ ದೇವತೆಗಳಿಂದಲೂ ಪೂಜಿತಳಾದವಳೇ, ಶಂಖ ಚಕ್ರ ಗದೆಗಳನ್ನು ಕೈಗಳಲ್ಲಿ ಧರಿಸಿದವಳೇ, ಹೇ ಮಹಾಲಕ್ಷ್ಮೀಯೇ ಎಂದು ಮಾತೆ ಯರು ಭಕ್ತಿಯಿಂದ ಹಾಡಿ ಹೊಗಳುತ್ತಾ ಪೂಜೆ, ವೃತಗಳನ್ನು ಮಾಡುತ್ತಾರೆ. ಶ್ರೀ ಮಹಾವಿಷ್ಣುವಿನ ಪತ್ನಿಯಾದ ವರ ಮಹಾಲಕ್ಷ್ಮೀ ದೇವಿಯನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೋ ಅವರಿಗೆ ಐಶ್ವರ್‍ಯಭಾಗ್ಯ, ಆರೋಗ್ಯ ಭಾಗ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಇದಲ್ಲದೆ ಮುತ್ತೈದೆಯರು ತಮ್ಮ ಮನೆಯಲ್ಲಿ ಸುಖ, ಶಾಂತಿ ಸಂಪತ್ತನ್ನು ಕರುಣಿಸಲು ಶ್ರೀ ದೇವಿಯನ್ನು ಪೂಜೆ ಮಾಡಿದರೆ, ಮದುವೆಯಾಗದ ಹುಡುಗಿಯರು ನನಗೆ ಒಳ್ಳೆಯ ಗಂಡ (ವರ)ನನ್ನು ದಯಪಾಲಿಸು ತಾಯೇ ಎಂದು ಕೈ ಮುಗಿಯುತ್ತಾರೆ. ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಈ ಹಬ್ಬವನ್ನು ಮಾತೆಯರು ಭಕ್ತಿಯಿಂದ ಆಚರಣೆ ಮಾಡುತ್ತಾರೆ.

ಸಾಮೂಹಿಕ ವರಮಹಾಲಕ್ಷ್ಮಿ ವೃತ ಪೂಜೆಯ ವಿವಿಧ ಕಡೆಯ ಫೊಟೋ ಸಹಿತ ವರದಿಗಳು
ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ


ಬ್ರಹ್ಮ ಶ್ರೀ ಗುರುನಾರಾಯಣ ಮಂದಿರದಲ್ಲಿ ವರಮಹಾಲಕ್ಷ್ಮೀ ಪೂಜೆ


ಈಶ್ವರಮಂಗಲ ಪಂಚಲಿಂಗೇಶ್ವರದಲ್ಲಿ ವರಮಹಾಲಕ್ಷ್ಮೀ ಪೂಜೆ


ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ


ಶ್ರೀ ಮಹಾಬಲೇಶ್ವರ, ಶ್ರೀ ವೀರಭದ್ರ ಸ್ವಾಮಿ ದೇವ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

 

ಮುಂಡೂರು ಆಲಡ್ಕ ಸದಾಶಿವ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

ನಿಡ್ಪಳ್ಳಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ನೀ ವೃತ ಪೂಜೆ- ಧಾರ್ಮಿಕ ಸಭೆ


ಕೆಮ್ಮಾಯಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ


ಲಕ್ಷ್ಮೀ ದೇವಿ ಬೆಟ್ಟದಲ್ಲಿ ವರಮಹಾಲಕ್ಷ್ಮೀ ಪೂಜೆ


 

ಕೋಡಿಂಬಾಳ ಮಾಲೇಶ್ವರ ಶ್ರೀ ಮಹಾಬಲೇಶ್ವರ ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ


ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲದಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ

 

ಪಡುಮಲೆ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

           

           ಬೀರಮಲೆ ವಿಶ್ವಕರ್ಮ ಮಂದಿರದಲ್ಲಿ ವರಮಹಾಲಕ್ಷೀ ಪೂಜೆ


ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿ ಸವಣೂರು ಮತ್ತು ಪುಣ್ಚಪ್ಪಾಡಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸವಣೂರು ಮತ್ತು ಪುಣ್ಚಪ್ಪಾಡಿ ಇವುಗಳ ಆಶ್ರಯದಲ್ಲಿ ಆ.9ರಂದು ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಜರಗಿತು. ಅರ್ಚಕ ಕೇಶವ ಕಲ್ಲೂರಾಯ ಬಂಬಿಲರವರು ಪೂಜಾ ವಿಧಿವಿಧಾನ ನೆರವೇರಿಸಿದರು. ಸುಮಾರು ೪೦೦ಮಂದಿ ವರಮಹಾಲಕ್ಷ್ಮೀ ವ್ರತ ಪೂಜೆಯನ್ನು ಮಾಡಿಸಿದರು. 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿಯ ಅಧ್ಯಕ್ಷೆ ನಾಗವೇಣಿ ಸೋಂಪಾಡಿ, ಉಪಾಧ್ಯಕ್ಷರಾದ ನಾರಾಯಣ ಗೌಡ ಪೂವ, ವಿಜಯ ಕುದ್ಮನಮಜಲು, ಕಾರ್ಯದರ್ಶಿ ಹೇಮಲತಾ ಪಿ. ಸೇವಾ ಪ್ರತಿನಿಧಿ ಸವಣೂರು, ಜೊತೆ ಕಾರ್ಯದರ್ಶಿಗಳಾದ ಪ್ರಕಾಶ್ ಕುದ್ಮನಮಜಲು, ರಾಘವ ಗೌಡ ಸವಣೂರು, ಕೋಶಾಧಿಕಾರಿ ವೆಂಕಪ್ಪ ಗೌಡ ಅಡೀಲುರವರುಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.