ಸವಣೂರು ಚಾಪಲ್ಲ ಬದ್ರಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ‘ಹಸಿರ ಸಿರಿ’ ವೃಕ್ಷಾಭಿಯಾನ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಸವಣೂರು: ವಿದ್ಯಾರ್ಥಿಗಳಲ್ಲಿ ಹಾಗೂ ಯುವಜನರಲ್ಲಿ ಪರಿಸರದ ಕುರಿತು ಕಾಳಜಿ ಮೂಡಿಸುವ ಸದುದ್ದೇಶದೊಂದಿಗೆ ಎಸ್ಕೆ ಎಸ್ಎಸ್ಎಫ್ ತ್ವಲಬಾ ವಿಂಗ್ ದ.ಕ ಜಿಲ್ಲಾ ಸಮಿತಿ ಹಮ್ಮಿಕೊಂಡಿರುವ ‘ಹಸಿರ ಸಿರಿ’ ವೃಕ್ಷಾಭಿಯಾನದ ಉದ್ಘಾಟನಾ ಸಮಾರಂಭವು ಇಲ್ಲಿನ ಚಾಪಲ್ಲ ಬದ್ರಿಯಾ ಜುಮ್ಮಾ ಮಸೀದಿಯ ಮರ್ಹೂಂ ಶೈಖುನಾ ಹಾದಿ ತಂಙಳ್ ಮೆಮೋರಿಯಲ್ ದರ್ಸ್ ಕ್ಯಾಂಪಸ್ಸಿನಲ್ಲಿ ಆಗಸ್ಟ್ 08ರಂದು ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಮಸೀದಿ ವಠಾರದಲ್ಲಿ ಸಸಿ ನೆಟ್ಟು ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ನಂತರ ಹಿದಾಯತುಲ್ ಇಸ್ಲಾಂ ಮದರಸದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಕೋ ಓರ್ಡಿನೇಟರ್ ಅಬ್ದುಲ್ ರಶೀದ್ ರಹ್ಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅಧ್ಯಕ್ಷತೆ ವಹಿಸಿದ್ದ‌ ಚಾಪಲ್ಲ ಮುದರ್ರಿಸ್ ಅಶ್ರಫ್ ಫಾಝಿಲ್ ಬಾಖವಿ ಮಾತನಾಡಿ ” ನಾಳೆ ಪ್ರಳಯ ಸಂಭವಿಸುವ ಮುನ್ಸೂಚನೆಯಿದ್ದರೂ ಇಂದು ನೀನು ಗಿಡವನ್ನು ನೆಡಬೇಕು ಎಂಬ ಪುಣ್ಯ ಪ್ರವಾದಿ ವಚನ ಪರಿಸರವನ್ನು ಸಂರಕ್ಷಿಸಲು ನಾವು ಎಷ್ಟರಮಟ್ಟಿಗೆ ತೊಡಗಿಸಿಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ತೋರಿಸಿಕೊಡುತ್ತದೆ.ಆದ್ದರಿಂದ ಗಿಡ ನೆಟ್ಟು ಹಸಿರಿನ ಸಿರಿಯನ್ನು ವೃದ್ಧಿಸುವ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗಬೇಕು.ಗಿಡ ನೆಟ್ಟು ಬಿಟ್ಟರೆ ಮಾತ್ರ ಸಾಲದು, ಅದನ್ನು ಕಾಲಕಾಲಕ್ಕೆ ಸರಿಯಾಗಿ ಪೋಷಿಸಲೂ ನಾವು ಮನಸ್ಸು ಮಾಡಬೇಕು.ಸಸ್ಯಸಂಕುಲವನ್ನು ಬೆಳೆಸುವ ಈ ಪ್ರಯೋಗ ಯಶಸ್ವಿಯಾಗಲಿ’ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ತ್ವಲಬಾವಿಂಗ್ ಅದ್ಯಕ್ಷರಾದ ನಈಂ ಫೈಝಿ ಮುಕ್ವೆ ಅಭಿಯಾನದ ರೂಪುರೇಷೆಗಳ ಕುರಿತು ಮಾತನಾಡಿ ” ಜಾಗತಿಕ ತಾಪಮಾನ ದಿನೇದಿನೇ ಏರುತ್ತಿರುವ ಇಂದಿನ ದಿನಗಳಲ್ಲಿ ವೃಕ್ಷಸಂಕುಲವನ್ನು ಬೆಳೆಸುವುದು ಅತ್ಯಗತ್ಯವಾಗಿದೆ.ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಆದ್ದರಿಂದ ತ್ವಲಬಾ ವಿಂಗ್ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಹಸಿರ ಸಿರಿ ಎಂಬ ವಿನೂತನ ಪ್ರಯೋಗವನ್ನು ಹಮ್ಮಿಕೊಂಡಿದೆ” ಎಂದರು.

ಕಾರ್ಯಕ್ರಮದಲ್ಲಿ ಚಾಪಲ್ಲ ಜಮಾಅತ್ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಹಾಜಿ, ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಅದ್ಯಕ್ಷರಾದ ಅಬ್ದುಲ್ ರಝಾಕ್ ಕೆನರಾ, ಜಮಾಅತ್ ಸಮಿತಿಯ ಸದಸ್ಯರಾದ ಬಿ ಎಂ ಅಹಮದ್ ಹಾಜಿ, ಕಾಸಿಂ ಹಾಜಿ ಕೇಕುಡೆ, ಇಬ್ರಾಹಿಂ ಎಸ್ ಆರ್, ಕೂರ್ನಡ್ಕ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಅಬ್ದುಲ್ ಕರೀಂ ಮೌಲಾ, ತ್ವಲಬಾ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ನಾವೂರು, ಜಿಲ್ಲಾ ವರ್ಕಿಂಗ್ ಕಾರ್ಯದರ್ಶಿ ಉವೈಸ್ ತೋಕೆ ಉಪಸ್ಥಿತಿ ಇದ್ದರು.  ಸ್ವಾದಿಕ್ ಬಜೆಗುಂಡಿ ಸ್ವಾಗತಿಸಿ, ಸಪ್ವಾನ್ ಮಾಪಾಲ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.