Breaking News

ದಕ್ಷಿಣ ಕಾಶಿಯಲ್ಲಿ ವಾಹಿನಿಗಳ ಸಂಗಮ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಆ.9ರಂದು ದಿನವಿಡೀ ನಿರೀಕ್ಷೆಯಲ್ಲಿದ್ದ ದಕ್ಷಿಣ ಕಾಶಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಳದ ಬಳಿ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಪವಿತ್ರ ಸಂಗಮವು ಕೊನೆಗೂ ಘಟಿಸಿದ್ದು, ಸಂಜೆ 7.00ಗಂಟೆ ಸುಮಾರಿಗೆ ನದಿಗಳೆರಡೂ ಸಮಾನಾಂತರವಾಗಿ ಉಕ್ಕಿ ಹರಿದು ದೇವಳದ ಎದುರುಗಡೆ ಸಮಾಗಮಗೊಂಡ ಬಳಿಕ ವೈದಿಕರಿಂದ ಮಂತ್ರಘೋಷ ಮಂಗಲವಾದ್ಯಗಳೊಂದಿಗೆ ಗಂಗಾ ಪೂಜೆ ನಡೆಯಿತು. ಈ ಮೂಲಕ ಬೆಳಗ್ಗಿನಿಂದಲೇ ಸಂಗಮದ ನಿರೀಕ್ಷೆಯಲ್ಲಿದ್ದ ಸಾವಿರಾರು ಮಂದಿ ಸಂಗಮ ದೃಶ್ಯವನ್ನು ವೀಕ್ಷಿಸಿ ಸಂತುಷ್ಟರಾದರು.
ವೇದಮೂರ್ತಿ ಹರೀಶ್ ಉಪಾಧ್ಯಾಯ ರವರು ಪೂಜಾವಿಧಿ ವಿಧಾನಗಳನ್ನು ನೆರವೇರಿಸಿ ಗಂಗಾಮಾತೆಗೆ ಭಾಗಿನ ಸಮರ್ಪಿಸಿದರು. ಈ ಸಂಧರ್ಭದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ಮುಂದಾಳೂಗಳಾದ ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು. ಸಂಗಮ ಪೂಜೆಯ ಬಳಿಕವೂ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳ ಕಾಣಿಸಿದ ಕಾರಣ ಉಪ್ಪಿನಂಗಡಿ ಜನತೆ ನೆರೆ ಭೀತಿಗೆ ತುತ್ತಾಗಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.