ಉಪ್ಪಿನಂಗಡಿಯಲ್ಲಿ ಏರುತ್ತಿದೆ ನದಿ ನೀರಿನ ಮಟ್ಟ: ಮರುಕಳಿಸಲಿದೆಯೇ ಇತಿಹಾಸ..!?

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಘಟ್ಟಪ್ರದೇಶದಲ್ಲಿ ಮತ್ತು ಒಳನಾಡಿನಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ನೇತ್ರಾವತಿ ಕುಮಾರಧಾರ ನದಿ ಸಂಗಮ ಕ್ಷೇತ್ರದಲ್ಲಿ ಆ. 9 ರಂದೇ ಸಂಜೆ ನದಿಗಳ ಸಂಗಮವಾಗಿದ್ದು, ನೀರಿನ ಹರಿವಿನ ಪ್ರಮಾಣ ಇನ್ನೂ ಏರಿಕೆಯಾಗುತ್ತಿದೆ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭ ತಳಭಾಗ ಸಂಪೂರ್ಣ ನೀರಿನಿಂದ ಆವೃತವಾಗಿದೆ. ಸುತ್ತಮುತ್ತಲಿನ ಮನೆ ಅಂಗಡಿಗಳ ಒಳಭಾಗಕ್ಕೆ ನೀರು ನುಗ್ಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ರವನಾಸಿಲಾಗುತ್ತಿದೆ. ರಥಬೀದಿಯ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯಿರುವ ಹೊಟೇಲ್‌ನಲ್ಲಿಯವರೆಗೆ ನೀರಿನ ಮಟ್ಟ ಏರಿಕೆಯಾಗಿದೆ. 1974 ರಲ್ಲಿ ಉಪ್ಪಿನಂಗಡಿ ಮುಳುಗಡೆಯಾಗಿದ್ದಾಗ ಅಂದಿನ ಪರಿಸ್ಥಿತಿಯನ್ನು ಇಂದೂ ನೆನಪಿಸಿಕೊಂಡಿರುವ ವೈದ್ಯ ಶೀನಪ್ಪ ಶೆಟ್ಟಿಯವರ ಮನೆಯ ಮೆಟ್ಟಿಲುವರೆಗೆ ಸಂಪೂರ್ಣ ನೀರು ಆವರಿಸಿದ್ದು, ಮತ್ತೊಮ್ಮೆ 45 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸುವ ಭೀತಿಯಲ್ಲಿ ಶೀನ ಶೆಟ್ಟಿಯವರಿದ್ದಾರೆ. ಒಂದು ಕಡೆ ನಿಲ್ಲದ ಮಳೆ, ಇನ್ನೊಂದೆಡೆ ಕ್ಷಣದಿಂದ ಕ್ಷಣಕ್ಕೆ ಏರುತ್ತಿರುವ ನೀರಿನ ಮಟ್ಟ ಸ್ಥಳೀಯರಲ್ಲಿ ಮತ್ತೊಮ್ಮೆ ಇತಿಹಾಸದ ಭೀಕರತೆಯನ್ನು ನೆನಪಿಸುತ್ತಿದೆ.

 

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.