ನಿವೃತ್ತ ಕೃಷಿ ಅಧಿಕಾರಿ ಜತ್ತಪ್ಪ ಗೌಡರಿಗೆ ಕೃಷಿಕರಿಂದ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಪುತ್ತೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾಗಿದ್ದ ಜತ್ತಪ್ಪ ಗೌಡರವರು ಜು.31 ರಂದು ಸೇವಾ ನಿವೃತ್ತಿ ಹೊಂದಿದ್ದು ಅವರನ್ನು ಬೆಟ್ಟಂಪಾಡಿ ಕುವೆಂಜದಲ್ಲಿ ಅ.6 ರಂದು ಕೃಷಿಕರಿಂದ ಸನ್ಮಾನಿಸಲಾಯಿತು. ಸಮೃದ್ಧಿ , ಆತ್ಮಶಕ್ತಿ ಕೃಷಿ ಕೇಂದ್ರ ಮತ್ತು Z.B.N.F ಕೃಷಿ ಕೇಂದ್ರದ ಕೃಷಿಕರು ಸೇರಿ ನಿಷ್ಠಾವಂತ ಅಧಿಕಾರಿ ಜತ್ತಪ್ಪ ಗೌಡರನ್ನು ಸನ್ಮಾನಿಸಲಾಯಿತು. ನೂತನ ಕೃಷಿ ಅಧಿಕಾರಿ ಯಶಸ್ಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿಕರಾದ ಅನಿತಾ ಕುವೆಂಜ , ತ್ಯಾಂಪಣ್ಣ ರೈ ತಲೆಪ್ಪಾಡಿ, ಸಂಕಪ್ಪ ರೈ ಕುವೆಂಜ, ಶಂಕರ ಪಾಟಾಳಿ ಕಕ್ಕೂರು, ಕೊರಗಪ್ಪ ಪೂಜಾರಿ ಕರ್ನಪ್ಪಾಡಿ ಸನ್ಮಾನ ಕಾರ್ಯಕ್ರಮ ನಡೆಸಿ ಕೊಟ್ಟರು. ಕೃಷಿಕರಾದ ಅಚ್ಯುತ ಭಟ್ ಕಕ್ಕೂರು, ಲಲಿತಾ ಚಿದಾನಂದ ನಿಡ್ಪಳ್ಳಿ, ತಿಮ್ಮಪ್ಪ ನಾಯ್ಕ ಕುವೆಂಜ, ಲಿಂಗಪ್ಪ ಗೌಡ ಮಿತ್ತಡ್ಕ ಸನ್ಮಾನಿತರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ರಾಧಾಕೃಷ್ಣ ಅರ್.ಕೋಡಿ ಕಾರ್ಯಕ್ರಮ ನಿರೂಪಿಸಿದರು. ಕೃಷಿಕರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.