ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಮಾದರಿ ಸಂಘವಾಗಿ ಅಭಿವೃದ್ಧಿ ಹೊಂದಲಿ- ನೆಲ್ಲಿತ್ತಿಮಾರ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಆ.8ರಂದು ಸಂಘದ ಆವರಣದಲ್ಲಿ ನಡೆಯಿತು. ನಿರ್ದೇಶಕರಾದ ವೆಂಕಟ್ರಾವ್ ಬಿ. ರವರು ಕಾರ್ಯಕ್ರಮ ಉದ್ಘಾಟಿಸಿದರು. ದ.ಕ. ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ಮಾತನಾಡಿ ಸಂಘವು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿ ತಾಲೂಕಿನಲ್ಲಿ ಮಾದರಿಯಾಗಲಿ ಸಂಘದ ಸದಸ್ಯರ ನೆರವಿನಿಂದ ಸಂಘದ ಕಛೇರಿಗೆ ಗ್ರಾನೈಟು, ಎದುರುಗಡೆ ಇಂಟರ್‌ಲಾಕ್ ಹಾಗೂ ಕಪಾಟು ವ್ಯವಸ್ಥೆ ಮಾಡಲಾಗಿದ್ದು ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕರುಣಾಕರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಸಂಘದ ಅಭಿವೃದ್ದಿಗೆ ಎಲ್ಲರ ಸಹಕಾರ ಕೋರಿದರು. ಸಂಘದ ಕಾರ್ಯದರ್ಶಿ ಸತೀಶ್ ರೈ ಮೂರ್ಕಾಜೆ ವರದಿ ವಾಚಿಸಿ ಸಂಘವು ಕಳೆದ ಸಾಲಿನಲ್ಲಿ 1,83,664.68 ಲಕ್ಷ ರೂ. ಲಾಭ ಪಡೆದುಕೊಂಡಿದೆ. ಸದಸ್ಯರಿಗೆ ರೂ.87,745 ಬೋನಸ್ ಹಾಗೂ ಶೇ.15 ಡಿವಿಡೆಂಡು ವಿತರಿಸಲಾಗುವುದು ಎಂದು ಹೇಳಿದರು. ದ.ಕ. ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಎಂ.ಶ್ರೀನಿವಾಸ ಹಾಗೂ ಉಪ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ಸಂಘದ ಸ್ಥಾಪಕಾಧ್ಯಕ್ಷರಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ ಕೆ.ಎಸ್.ರಂಗನಾಥ ರೈ ಗುತ್ತು ಹಾಗೂ ಸಂಘದ ಸದಸ್ಯರಾದ ಚಂದ್ರಾವತಿ ಮತ್ತು ಕಿಟ್ಟಣ್ಣ ಗೌಡರ ಪುತ್ರ ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ದೀಕ್ಷಿತ್ ಮಿತ್ತಡ್ಕ ರವರನ್ನು ಸಂಘದ ವತಿಯಿಂದ ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ಸನ್ಮಾನಿಸಿದರು.

ಸದಸ್ಯರಿಗೆ ಬಹುಮಾನ: ಕಳೆದ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದವರಿಗೆ ಸಭೆಯಲ್ಲಿ ಬಹುಮಾನ ನೀಡಲಾಯಿತು. ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ನಿರ್ದೇಶಕ ತ್ಯಾಂಪ ನಾಯ್ಕ ಕಜೆ ಪ್ರಥಮ, ನಿರ್ದೇಶಕ ಶಂಕರನಾರಾಯಣ ರಾವ್ ಪಾರ ದ್ವಿತೀಯ ಹಾಗೂ ಸದಾನಂದ ರೈ ಬಾಳ್ಯೊಟ್ಟು ತೃತೀಯ ಬಹುಮಾನ ಪಡೆದುಕೊಂಡರು. ಹಾಲು ಪೂರೈಕೆ ಮಾಡಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ರೂಪದಲ್ಲಿ ಸ್ಟೀಲ್ ಪಾತ್ರೆ, ಸೋಸುವ ಹರಿವೆ ಹಾಗೂ ನಂದಿನಿ ಪೇಡ ನೀಡಿ ಪ್ರೋತ್ಸಾಹಿಸಲಾಯಿತು.

ಸಂಘದ ನಿರ್ದೇಶಕರಾದ ವಿನೋದ್ ಕುಮಾರ್ ಬಲ್ಲಾಳ್, ಬಿ.ಪ್ರಭಾಕರ ರೈ, ಪ್ರಮೋದ ರೈ ಬರೆ, ಪಿ. ಜಗದೀಶ ಗೌಡ ಪಾರ, ಯತೀಶ ಗೌಡ ಮಿತ್ತಡ್ಕ, ರತ್ನಾವತಿ, ಸುಲೋಚನಾ, ಸಂಘದ ಕೃತಕ ಗರ್ಭದಾರರಾದ ಉಚಿತ್ ಕುಮಾರ್, ಸಹಾಯಕ ಕುಂಞಿಕೃಷ್ಣ ಮಣಿಯಾಣಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು. ನಿರ್ದೆಶಕರಾದ ಶಂಕರ್‌ನಾರಾಯಣ ರಾವ್ ಪಾರ ಹಾಗೂ ಶೇಷಪ್ಪ ರೈ ಮೂರ್ಕಾಜೆ ಸನ್ಮಾನಿತರ ಪತ್ರ ವಾಚಿಸಿದರು. ಶ್ಯಾಂಪ್ರಸಾದ್ ಮಜಲುಗುಡ್ಡೆ ಪ್ರಾರ್ಥಿಸಿ ನಿರ್ದೇಶಕಿ ದೇವಕಿದೇವಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.