ಚಾರ್ವಾಕ ಪ್ರಾ.ಕೃ.ಪ.ಸಹಕಾರ ಸಂಘದಿಂದ ಸಾಂತ್ವನ ನಿಧಿ ವಿತರಣೆ

Puttur_Advt_NewsUnder_1
Puttur_Advt_NewsUnder_1


ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರು ಇದರ ವತಿಯಿಂದ ಇತ್ತೀಚೆಗೆ ನಿಧನರಾದ ಸಂಘದ ನಿವೃತ್ತ ಸಿಬ್ಬಂದಿ ಸುಬ್ರಾಯ ಗೌಡ ಕಟ್ಟ ಅವರ ಮನೆಯವರ ಆರ್ಥಿಕ ದುಸ್ಥಿತಿಯನ್ನು ಮನಗಂಡು ಸುಬ್ರಾಯ ಗೌಡರ ಪುತ್ರ ಮಿಥುನ್‌ರವರಿಗೆ ಸಾಂತ್ವನ ನಿಧಿಯಿಂದ ಧನ ಸಹಾಯ ವಿತರಿಸಲಾಯಿತು. ಅಲ್ಲದೇ ಸಂಘದ ಸದಸ್ಯ ರಾಮಕೃಷ್ಣ ಆತಾಜೆಯವರು ನಿಧನರಾಗಿದ್ದು ಇವರ ಪತ್ನಿ ಸಂಘದ ಮಾಜಿ ನಿರ್ದೇಶಕರಾದ ಸವಿತಾರವರಿಗೂ ಸಂಘದ ವತಿಯಿಂದ ಧನ ಸಹಾಯ ನೀಡಲಾಯಿತು. ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ ಧನ ಸಹಾಯ ವಿತರಿಸಿದ್ದು, ಈ ಸಂದರ್ಭದಲ್ಲಿ ನಿರ್ದೇಶಕರಾದ ಧರ್ಮೇಂದ್ರ ಗೌಡ ಕಟ್ಟತ್ತಾರು, ವಿಶ್ವನಾಥ ಗೌಡ ಮರಕ್ಕಡ, ವಿಶ್ವನಾಥ ಕೂಡಿಗೆ, ಕಾಣಿಯೂರು ಗ್ರಾ.ಪಂ,ಸದಸ್ಯರಾದ ಗಣೇಶ್ ಉದುನಡ್ಕ, ಚಾರ್ವಾಕ ಹಾ.ಉ.ಸ.ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕ ಮಾಧವ ಎಣ್ಮೂರು, ಚಾರ್ವಾಕ ಪ್ರಾ.ಕೃ.ಪ.ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಹಾಗೂ ಮೋಹನ್‌ದಾಸ್ ರೈ ಬಲ್ಕಾಡಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.