HomePage_Banner
HomePage_Banner
HomePage_Banner

ತೆಂಕಿಲ ಗುಡ್ಡದಲ್ಲಿ ಬಿರುಕು: ಅನಾಹುತ ಮರುಕಳಿಸಿದರೆ ಬದಲಿ ಶಾಶ್ವತ ವ್ಯವಸ್ಥೆ

Puttur_Advt_NewsUnder_1
Puttur_Advt_NewsUnder_1
  • ಸಮುದಾಯ ಭವನದಲ್ಲಿ ಆಶ್ರಯ ಪಡೆದ ಕಟುಂಬಕ್ಕೆ ಧೈರ್ಯ ತುಂಬಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ತೆಂಕಿಲದಲ್ಲಿ ಆಗಿರುವ ಧರೆ ಕುಸಿತ ಮತ್ತು ಅಲ್ಲಿ ಬಿರುಕು ಬಿಟ್ಟ ಘಟನೆಗೆ ಸಂಬಂಧಿಸಿ ಅಪಾಯಕಾರಿ ಹಂತದಲ್ಲಿ ಇದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿಯ ಸ್ಥಳಿಯಾಡಳಿತದ ಮೂಲಕ ಸಮುದಾಯ ಭವನದಲ್ಲಿ ಅಲ್ಲಿನ ಕಟುಂಬಕ್ಕೆ ವಸತಿ, ಊಟೋಪಚಾರ, ಆರೋಗ್ಯದ ಕಡೆ ಗಮನ ಹರಿಸಲಾಗಿದೆ. ಕೆಲವು ಅವರ ಸಂಬಂಧಿಕರ ಮನೆಯ ಆಶ್ರಯ ಪಡೆದಿದ್ದಾರೆ. ಒಟ್ಟು ಮಳೆ ಮುಗಿದ ತಕ್ಷಣ ಯಾವುದೇ ಘಟನೆ ಆಗದಿದ್ದರೆ ಮತ್ತೆ ವಸತಿಗಳಿಗೆ ಹೋಗುವ ಕೆಲಸ ನಡೆಯಲಿದೆ. ಒಂದು ವೇಳೆ ಅಲ್ಲಿ ಅನಾಹುತಗಳಾಗುತ್ತವೆ ಎಂಬ ಸೂಚನೆ ಇದ್ದರೆ ಅಲ್ಲಿನ ಕುಟುಂಬಕ್ಕೆ ಶಾಶ್ವತ ಬದಲಿ ವ್ಯವಸ್ಥೆಯ ಕುರಿತು ಶಾಸಕ ಸಂಜೀವ ಮಠಂದೂರು ಭರವಸೆ ನೀಡಿದ್ದಾರೆ.

ತೆಂಕಿಲ ದರ್ಖಾಸು ಎಂಬಲ್ಲಿ ಗೇರು ಅಭಿವೃದ್ಧಿ ನಿಗಮದ ಗೇರು ತೋಟವಿರುವ ಸರಕಾರಿ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಭೂಕಂಪನ ಸಾಧ್ಯತೆ ಕುರಿತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗರುಕತೆ ಕ್ರಮವಾಗಿ ಅಲ್ಲಿನ ಸುಮಾರು 11 ಕುಟುಂಬಗಳನ್ನು ಆ.12ರ ರಾತ್ರಿಯೆ ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ ಮತ್ತು ನಗರಸಭೆಯ ಅಧಿಕಾರಿಗಳ ನೇತೃತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರೊಗಳಿಸಲಾಗಿತ್ತು. ಇದೆ ವಿಚಾರಕ್ಕೆ ಸಂಬಂಧಿಸಿ ಸಮುದಾಯ ಭವನದಲ್ಲಿ ಆಶ್ರಯ ಪಡೆದ ಕುಟುಂಬವನ್ನು ಆ.೧೩ರಂದು ಬೆಳಿಗ್ಗೆ ಶಾಸಕರು ಭೇಟಿ ಮಾಡಿ ಅವರ ಆರೋಗ್ಯ ಮತ್ತು ಗುಡ್ಡದಲ್ಲಿ ನಡೆದ ಘಟನೆಗಳ ಕುರಿತು ಮಾಹಿತಿ ಪಡೆದು ಕೊಂಡ ಬಳಿಕ ಪತ್ರಿಕಾ ಮಾಧ್ಯಮದವರಲ್ಲಿ ಮಾತನಾಡಿದರು.

ಭೂಕುಸಿತಕ್ಕೆ ಮಣ್ಣಿನ ಗುಣಲಕ್ಷಣ ಇರಬಹುದು ಅಥವಾ ಹತ್ತಿರದಲ್ಲಿ ಏನಾದರೂ ಘಟನೆ ನಡೆದಿರಬಹುದು. ಅದರೂ ಭೂ ಮತ್ತು ಗಣಿ ವಿಜ್ಞಾನಿಗಳ ವರದಿ ಪ್ರಕಾರ ಅದು ಸದ್ಯದ ಪರಿಸ್ಥಿತಿಯಲ್ಲಿ ಅಪಾಯಕಾರಿ ಗುಡ್ಡ ಆಗಿದೆ. ವಿಜ್ಞಾನಿಗಳು ಅಲ್ಲಿ ವಸತಿ ಯೋಗ್ಯ ಪ್ರದೇಶ ಅಲ್ಲ ಎಂದು ಸೂಚನೆ ಕೊಟ್ಟಂತೆ. ಅಲ್ಲಿದ್ದ ನಿವಾಸಿಗಳನ್ನು ಮತ್ತೆ ಪುನರ್ವಸತಿ ಮಾಡುವ ಕೆಲಸ ನಗರಸಭೆ ಮತ್ತು ಸಹಾಯಕ ಕಮೀಷನರ್, ತಹಶೀಲ್ದಾರ್ ಮೂಲಕ ಆಗಿದೆ. ಅಲ್ಲಿಯ ಒಂದಷ್ಟು ಮನೆಗಳಿಗೆ ಹಾನಿಯಾಗಿದೆ. ಮುಖ್ಯಮಂತ್ರಿಯವರು ಘೋಷಣೆ ಮಾಡಿದಂತೆ ಮನೆ ಹಾನಿಯಾದರೆ ರೂ. ೫ಲಕ್ಷ, ಭಾಗಶಃ ಹಾನಿಯಾದರೆ ರೂ. ೧ಲಕ್ಷ, ಆ ಪ್ರದೇಶದಿಂದ ಪುನರ್ವಸತಿ ಕೇಂದ್ರದಲ್ಲಿ ವಾಸವಾಗುವುದಾದರೆ ಅಲ್ಲಿಯ ಖರ್ಚು ವೆಚ್ಚ ಬರಿಸುವುದು ಅಥವಾ ಬಾಡಿಗೆ ಮನೆಯಲ್ಲೂ ವಾಸವಾಗುವುದಾದರೆ ರೂ. 5ಸಾವಿರ ತಿಂಗಳಿಗೆ ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಕುರಿತು ಸಹಾಯಕ ಕಮೀಷನರ್ ಅವರಲ್ಲಿ ಮಾತನಾಡಿದ್ದೇನೆ. ಜೊತೆಗೆ ಅಲ್ಲಿನ ಪರಿಸರದಲ್ಲಿ ಒಂದಷ್ಟು ನಿವೇಶನ ಇದೆ. ಅಲ್ಲಿ ಇನ್ನೊಮ್ಮೆ ಗುಡ್ಡವನ್ನು ಪರಿಶೀಲಿಸಿ, ಅಲ್ಲಿ ವಾಸ್ತವ್ಯದ ಸ್ಥಿತಿ ಇದೆ ಎಂದಾದರೆ ಅಲ್ಲಿ ವಸತಿ ಮಾಡುವುದು. ವಾಸ್ತವ್ಯಕ್ಕೆ ಯೋಗ್ಯವಲ್ಲ ಎಂದಾದರೆ ಮುಂದಿನ ದಿನಗಳಲ್ಲಿ ಏನು ಕೆಲಸ ಮಾಡಬೇಕೋ ಅದನ್ನು ಮಾಡಿ ಕೊಡಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.