Breaking News

ಸೆ.1 ರಿಂದ ಕೆಎಸ್‌ಆರ್‌ಟಿಸಿ ಡ್ರೈವರ್ – ಕಂಡಕ್ಟರ್‌ಗೆ ಮೊಬೈಲ್ ನಿಷಿದ್ಧ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಜ್ಯದ ಎಲ್ಲ ನಾಲ್ಕು ಸಾರಿಗೆ ಸಂಸ್ಥೆಯ ನಿರ್ವಾಹಕರು ಹಾಗೂ ಚಾಲಕರು ಇನ್ನು ಮುಂದೆ ಕರ್ತವ್ಯದ ವೇಳೆ ಅವರ ಬಳಿ ಮೊಬೈಲ್ ಇಟ್ಟುಕೊಳ್ಳುವಂತಿಲ್ಲ. ಪರಿಶೀಲನೆ ವೇಳೆ ಮೊಬೈಲ್ ಸಿಕ್ಕರೆ, ಮೊಬೈಲ್ ಬಳಸಿದ್ದು ಕಂಡು ಬಂದರೆ ಅಮಾನತು ಶಿಕ್ಷೆಕಟ್ಟಿಟ್ಟಬುತ್ತಿ. ಪತ್ತೆಯಾದ ಮೊಬೈಲ್ ಮುಟ್ಟುಗೋಲು ಖಚಿತ.

2012ರಲ್ಲಿ ಕರ್ತವ್ಯ ವೇಳೆ ಮೊಬೈಲ್ ಇಟ್ಟು ಕೊಳ್ಳುವುದಕ್ಕೆ ಅನುಮತಿ ನೀಡಲಾಗಿತ್ತು. ಈ ಆದೇಶವನ್ನು ಹಿಂಪಡೆದು ಕರ್ತವ್ಯ ವೇಳೆಯಲ್ಲಿ ಮೊಬೈಲ್ ಹೊಂದುವುದನ್ನು ಸಂಪೂರ್ಣ ನಿಷೇಧಿಸಿ ಈಗ ಆದೇಶ ಹೊರಡಿಸಲಾಗಿದೆ.  ಸೆ. 1ರಿಂದ ಮುಂಗಡ ಟಿಕೆಟ್ ಕಾಯ್ದಿರಿಸುವ ಬಸ್‌ಗಳ ನಿರ್ವಾಹಕರನ್ನು ಹೊರತುಪಡಿಸಿ ಇತರ ಚಾಲಕರು- ನಿರ್ವಾಹಕರು ಮೊಬೈಲ್ ಬಳಸುವುದು ಸಂಪೂರ್ಣ ನಿಷಿದ್ಧ.

ಈ ನಿರ್ಧಾರ ಯಾಕೆ?
ಇಲಾಖೆ ಮುಖ್ಯಸ್ಥರ ಹಾಗೂ ತನಿಖಾ ಸಿಬಂದಿಗಳ ಚಲನವಲನದ ಮಾಹಿತಿ ಸೋರಿಕೆಯಾಗುತ್ತಿರುವುದರಿಂದ ಸಂಸ್ಥೆಯ ಆದಾಯಕ್ಕೆ ಖೋತಾ ಬೀಳುತ್ತಿದೆ. ಹೀಗಾಗಿ ನಿಷೇಧ ಅನಿವಾರ್ಯ ಎಂದು ನಿರ್ಣಯಿಸಲಾಗಿದೆ. ತನಿಖಾ ಸಿಬಂದಿಯ ಮಾಹಿತಿ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಕರ್ತವ್ಯದ ವೇಳೆ ಚಾಲಕರು – ನಿರ್ವಾಹಕರು ಮೊಬೈಲ್ ಇಟ್ಟುಕೊಳ್ಳುವ ಹಾಗಿಲ್ಲ ಎಂದು ಆದೇಶಿಸಲಾಗಿದೆ. ಶಿಸ್ತು- ಬದ್ಧತೆಮೂಡಿಸುವುದು ಪ್ರಮುಖ ಉದ್ದೇಶ.

ಅಧಿಕಾರಿಗಳಿಂದ ಮೊಬೈಲ್ ಜಪ್ತಿ
ಚಾಲಕ- ನಿರ್ವಾಹಕ ಕರ್ತವ್ಯದ ವೇಳೆ ಮೊಬೈಲ್ ಹೊಂದುವುದನ್ನು ನಿಷೆಧಿಸುವ ನಿಟ್ಟಿನಲ್ಲಿ ಇಲಾಖೆ ಮುಖ್ಯಸ್ಥರ ಸಭೆಯಲ್ಲಿ ನಿರ್ಧರಿಲಾಗಿದೆ. ಆರಂಭದಲ್ಲಿ ಒಂದಿಷ್ಟು ಎಚ್ಚರಿಕೆ ನೀಡಲಾಗುತ್ತದೆ. ನಿಯಮ ಉಲ್ಲಂಘನೆ ಮುಂದುವರಿದರೆ ಅಮಾನತು ಜರಗಿಲಾಗುತ್ತದೆ. ಪ್ರಕರಣ ದಾಖಲಾದ 30 ದಿನ ಅಥವಾ ವಿಚಾರಣೆ ಪೂರ್ಣಗೊಂಡ ಕೂಡಲೇ ಅಮಾನತು ಆದೇಶ ತರೆವುಗೊಳಿಸಲಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.