ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಶೀಂಟೂರು ಸ್ಮೃತಿ

Puttur_Advt_NewsUnder_1
Puttur_Advt_NewsUnder_1

ಶೀಂಟೂರು ನಾರಾಯಣ ರೈ ಆದರ್ಶ ಶಿಕ್ಷಕ, ಸೇನಾನಿ- ಎಂ.ಬಿ.ಸದಾಶಿವ

ಪುತ್ತೂರು: ಆದರ್ಶ ಶಿಕ್ಷಕ, ಹಾಗೂ ಸೇನಾನಿಯಾಗಿ ಶೀಂಟೂರು ನಾರಾಯಣ ರೈರವರು ಸಮಾಜದಲ್ಲಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಪ್ರತಿ ನುಡಿ ಮತ್ತು ನಡೆ ನಮ್ಮ ಯುವ ಸಮಾಜಕ್ಕೆ ಅನುಕರಣೀಯ ಎಂದು ಸುಳ್ಯ ಸಾಂದೀಪ್ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಎಂ.ಬಿ.ಸದಾಶಿವ ಹೇಳಿದರು.

ಅವರು ಆ 14 ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಜರಗಿದ ಶೀಂಟೂರು ನಾರಾಯಣ ರೈರವರ ಜನ್ಮದಿನಾಚರಣೆಯ” ಶೀಂಟೂರು ಸ್ಮೃತಿ” ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಸೇನಾನಿಯಾಗಿ ರಾಷ್ಟ್ರ ಸೇವೆಯ ಕಾಯಕದಲ್ಲಿ ತೊಡಗಿಕೊಂಡು, ಬಳಿಕ ಶಿಕ್ಷಕನಾಗಿ ಸಾವಿರಾರು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರುವಾಗಿದ್ದ ನಾರಾಯಣ ರೈರವರು ಶಿಕ್ಷಣದ ಮೇಲೆ ಪ್ರೀತಿ-ವಿಶ್ವಾಸವನ್ನು ಇರಿಸಿಕೊಂಡ ವ್ಯಕ್ತಿಯಾಗಿದ್ದರು. ಅವರ ಪ್ರೇರಣೆಯಂತೆ ಅವರ ಪುತ್ರ ಸವಣೂರು ಸೀತಾರಾಮ ರೈರವರು ಗ್ರಾಮೀಣ ಭಾಗವಾಗಿರುವ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸ್ಥಾಪಿಸಿ, ಇಂದು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರಶ್ಮಿಗೆ ರಾಜ್ಯದಲ್ಲಿಯೇ ಹೆಸರು ಇದೆ ಎಂದು ಹೇಳಿ, . ಶೀಂಟೂರು ನಾರಾಯಣ ರೈರವರ ಮಾದರಿ ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆಯಾಗುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.

ಶೀಂಟೂರು ಪ್ರತಿಷ್ಠಾನದಿಂದ ಪ್ರತಿ ವರ್ಷ ಕಾರ್‍ಯಕ್ರಮ- ಸವಣೂರು ಕೆ.ಸೀತಾರಾಮ ರೈ
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈರವರು ದೀಪ ಬೆಳಗಿಸಿ, ಕಾರ್‍ಯಕ್ರಮ ಉದ್ಘಾಟಿಸಿ, ಸ್ವಾಗತಿಸಿ ಮಾತನಾಡಿ ಇವತ್ತು ನನ್ನ ತೀರ್ಥರೂಪರಾದ ಶೀಂಟೂರು ನಾರಾಯಣ ರೈಯವರ ೧೧೩ನೇ ಜನ್ನದಿನಾಚರಣೆಯಾಗಿದ್ದು, ಪ್ರತಿ ವರ್ಷ ಕಾರ್‍ಯಕ್ರಮ ನಡೆಯುತ್ತಿದ್ದು, ಈ ಬಾರಿ ನಿವೃತ್ತ ಸೈನಿಕರೊಬ್ಬರನ್ನು ಶೀಂಟೂರು ಸನ್ಮಾನಕ್ಕೆ ಆಯ್ಕೆಮಾಡಲಾಗಿದೆ. ಅಲ್ಲದೇ ೮ ಮಂದಿ ವಿದ್ಯಾರ್ಥಿಗಳಿಗೆ ತಲಾ ೫ ಸಾವಿರದಂತೆ ಶೀಂಟೂರು ಶಿಷ್ಯ ವೇತನವನ್ನು ನೀಡಲಾಗುತ್ತಿದೆ ಎಂದು ತಿಳಿಸಿ, ಪ್ರತಿಷ್ಠಾನಕ್ಕೆ ಅರ್ಥಿಕವಾಗಿ ಸಹಕಾರ ನೀಡಿದ ಎಲ್ಲರೂ ಧನ್ಯರು ಎಂದು ಹೇಳಿದರು.


ಶೀಂಟೂರು ಸನ್ಮಾನ ಪುರಸ್ಕೃತರು
ಶೀಂಟೂರು ಸನ್ಮಾನ ಪುರಸ್ಕಾರವನ್ನು ನಿವೃತ್ತ ಸೇನಾನಿ ಬಾಲಕೃಷ್ಣ ಎನ್‌ರವರಿಗೆ ಪ್ರಧಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿದ ಬಾಲಕೃಷ್ಣ ಎನ್ ರವರು ಮಾತನಾಡಿ ಶೀಂಟೂರು ನಾರಾಯಣ ರೈ ಹೆಸರಿನ ಸನ್ಮಾನವನ್ನು ಸ್ವೀಕರಿಸಿದ ನನ್ನ ಬದುಕು ಪಾವನವಾಗಿದೆ ಎಂದು ಹೇಳಿ, ಸೇನೆಯಲ್ಲಿನ ತಮ್ಮ ಅನುಭವವನ್ನು ವಿವರಿಸಿದರು

ಸ್ಥಾಪಕರ ಪ್ರತಿಮೆಗೆ ಹಾರಾರ್ಪಣೆ
ಶೀಂಟೂರು ನಾರಾಯಣ ರೈರವರ ಪ್ರತಿಮೆಗೆ ಹಾರಾರ್ಪಣೆಗೈದ ಅಬುದಾಬಿಯ ಉದ್ಯಮಿ ಜಯರಾಮ ರೈ ಮಿತ್ರಂಪಾಡಿರವರು ಮಾತನಾಡಿ ೨೫ ಎಕ್ರೆ ವಿಸ್ತೀಣದಲ್ಲಿ ಸುಂದರವಾದ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಸವಣೂರು ಕೆ.ಸೀತಾರಾಮ ರೈರವರು, ತಮ್ಮ ತಂದೆ ಶೀಂಟೂರು ನಾರಾಯಣ ರೈಯವರ ಪ್ರತಿಷ್ಠಾನವನ್ನು ಸ್ಥಾಪಿಸುವ ಮೂಲಕ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿ, ವಿದ್ಯೆ ಎಂಬುದು ಸರಸ್ವತಿ ದೇವರ ವರವಾಗಿದ್ದು, ನಮ್ಮ ಮಿತ್ರಂಪಾಡಿ ಮನೆಯವರ ವತಿಯಿಂದ ಶೀಂಟೂರು ನಾರಾಯಣ ರೈ ಪ್ರತಿಷ್ಠಾನಕ್ಕೆ ಒಂದು ಲಕ್ಷ ನೀಡುವುದಾಗಿ ಹೇಳಿದರು.

ಆದರ್ಶ ವ್ಯಕ್ತಿತ್ವ- ಅಶ್ವಿನ್ ಎಲ್ ಶೆಟ್ಟಿ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಆಶ್ವಿನ್ ಎಲ್.ಶೆಟ್ಟಿರವರು ಮಾತನಾಡಿ ಸೇನೆಯಲ್ಲಿ ಮತ್ತು ಶಿಕ್ಷಣದಲ್ಲಿ ಸೇವೆಸಲ್ಲಿಸಿ, ಅದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಂಡ ಶೀಂಟೂರು ನಾರಾಯಣ ರೈ ಜೀವನ ವಿದ್ಯಾರ್ಥಿ ಸಮುದಾಯಕ್ಕೆ ಅನುಕರಣೀಯ ಎಂದು ಹೇಳಿದರು. ಉಪನ್ಯಾಸಕಿ ರಶ್ಮಿ ಕೆ ಕಾರ್‍ಯಕ್ರಮ ನಿರೂಪಿಸಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿ ರೈ ವಂದಿಸಿದರು. ವೇದಿಕೆಯಲ್ಲಿ ಎಸ್ ಎನ್ ಆರ್ ರೂರಲ್ ಎಜ್ಯುಕೇಶನಲ್ ಟ್ರಸ್ಟ್‌ನ ಟ್ರಸ್ಟಿ ಎನ್ ಸುಂದರ ರೈ ಸವಣೂರು, ಕಸ್ತೂರಿಕಲಾ ಎಸ್ ರೈ ಸವಣೂರುರವರುಗಳು ಉಪಸ್ಥಿತರಿದ್ದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳರವರು ಸನ್ಮಾನ ಪತ್ರ ವಾಚಿಸಿದರು. ಸೀತಾರಾಮ ಕೇವಳರವರು ರಚಿಸಿದ ಶೀಂಟೂರು ನಾರಾಯಣ ರೈರವರ ಕುರಿತಾದ ಗೀತೆಯನ್ನು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ಹಾಡಿದರು. ಸಮಾರಂಭದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು,ಪೋಷಕರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.