Breaking News

ಕಡಬ ತಾಲೂಕಿನದ್ಯಾಂತ 73ನೇ ಸ್ವಾತಂತ್ರ್ಯೋತ್ಸವ ಅಚರಣೆ

Puttur_Advt_NewsUnder_1
Puttur_Advt_NewsUnder_1

ಕಡಬ: ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಆಗಸ್ಟ್ 15 ಅತ್ಯಂತ ಭಾವನಾತ್ಮಕ ಪ್ರೇರಣೆ ನೀಡುವ ದಿನ. ದಾಸ್ಯದ ಶೃಂಖಲೆಯಿಂದ ಹೊರಬಂದ ಭಾರತೀಯರ ಲವಲವಿಕೆ, ಹುರುಪು ಹುಮ್ಮನಸ್ಸು ಇಂದಿಗೂ ಮಾಸಿಲ್ಲ. ಇತಿಹಾಸದ ನೆರವಿನಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಥೆ ತಿಳಿದ ಎಲ್ಲರೂ ದೇಶಪ್ರೇಮದ ಕಟ್ಟೆಯೊಡೆದು ಇಂದಿನ ದಿನ ತ್ರಿವರ್ಣ ಧ್ವಜಕ್ಕೆ ದಕ್ಷತೆಯಿಂದ ನಿಂತು ಒಂದು ಸೆಲ್ಯೂಟ್ ಹೊಡೆಯದಿರಲಾರರು.. ಬನ್ನಿ  ಕಡಬ ತಾಲೂಕಿನೆಲ್ಲೆಡೆ ನಡೆದ ಧ್ವಜಾರೋಹಣ, ಸ್ವಾತಂತ್ರ್ಯ ದಿನಾಚರಣೆಯ ಝಲಕ್ ನೋಡಿಕೊಂಡು ಬರೋಣ…

ದ.ಕ.ಜಿ.ಪ.ಉ.ಹಿ.ಪ್ರಾಥಮಿಕ ಶಾಲೆ ಕಡ್ಯ-ಕೊಣಾಜೆಯಲ್ಲಿ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.. ಸಂಭ್ರಮದಿಂದ ಆಚರಿಸಲಾಯಿತು. ಎಸ್.ಡಿ.ಎಮ್.ಸಿ. ಅಧ್ಯಕ್ಷ ಶಿವಪ್ಪ.ಗೌಡ ಹಾಕೋಟೆಕಾನ ಧ್ವಜಾರೋಹಣ ನೆರವೇರಿಸಿ ನಮ್ಮ ರಾಷ್ಟ್ರಇನ್ನು ಮುಂದಿನ ದಿನಗಳಲ್ಲಿ ಅಖಂಡವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಂತೋಷ ವ್ಯಕ್ತಪಡಿಸಿದರು ಶುಭಹಾರೈಸಿದರು. 

ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ 73ನೇ ವರ್ಷದ ಸ್ವಾತಂತ್ರ್ಯೋತ್ಸವ ಅಚರಣೆ…. ಸ್ವಾತಂತ್ರ್ಯೋತ್ಸವದ ದ್ವಜರೋಹಣವನ್ನು ಸಂಘದ ಅಧ್ಯಕ್ಷರಾದ ರಮೇಶ್ ಭಟ್ ಕಲ್ಪುರೆ ನೆರವೇರಿಸಿ ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಸುಂದರ ಗೌಡ ಮಂಡೆಕರ, ನಿರ್ದೇಶಕರಾದ ರಾಜೀವಿ, ಮುಖ್ಯಕಾರ್ಯನಿವೃಹಣಾಧಿಕಾರಿ ಚಾಕೋ ಕೆ.ಎಂ, ಸಹಾಯಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಾಲಕೃಷ್ಣ ಜಿ, ಸಿಬ್ಬಂದಿಗಳಾದ ಅಶ್ವಿತಾ,ಮೇದಪ್ಪ ಗೌಡ,ಮಮತಾ,ರಾದೇಶ್ ಮತ್ತಿತರರು ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಸುದೀರ್ ಪಿ., ವಿಜಯ್ ಕುಮಾರ್ ಉಪಸ್ಥಿತರಿದ್ದರು .

ಕಡಬದ ಶ್ರೀ ಗಣೇಶ್ ಬಿಲ್ಡಿಂಗ್‌ನಲ್ಲಿ 73ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ… ಬಿಲ್ಡಿಂಗ್ ಮಾಲಕರಾದ ಸುಂದರ ಮಂಡೆಕರ ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಮೋಹನ್ ಕೊಯಿಲ , ಕಿಶೋರ್ ಬರಮೇಲು  ಉಪಸ್ಥಿತರಿದ್ದರು.

ಕಡ್ಯ-ಕೊಣಾಜೆ ಗ್ರಾಮ ಪಂಚಾಯತ್ ನಲ್ಲಿ 73ನೇ ವರ್ಷ ದ ಸ್ವಾತಂತ್ರ್ಯೊತ್ವವ ದಿನಾಚರಣೆ…. ದ್ವಜಾರೋಹಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ನೆರವೇರಿಸಿ ಶುಭಹಾರೈಸಿದರು. ಕಡ್ಯಕೊಣಾಜೆ ಗ್ರಾಮಪಂಚಾಯತ್ ಉಪಾಧ್ಯಕ್ಷ ಯಶೋಧರ ಗೌಡ , ಸದಸ್ಯರಾದ ಪೊಡಿಯ ಗೌಡ,ಆನಂದ ಬಿ ಎಸ್. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಘಚಂದ್ರ ಗೌಡ ಮನೆಜಾಲು.ಕಡ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಣಾಜೆ ಒಕ್ಕೂಟದ ಅಧ್ಯಕ್ಷ ಪುಂಡರೀಕಾಕ್ಷ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಶಿವಣ್ಣ ಗೌಡ,ಪ್ರಮುಖರಾದ ವಿಠಲ ಭಟ್,ವಿಶ್ವನಾಥ ಗೌಡ,ವಾಸುದೇವ ಭಟ್, ವಾಸುದೇವ ಗೌಡ,,ಕೊಣಾಜೆ ಶಾಲಾ ಮುಖ್ಯ ಶಿಕ್ಷಕರಾದ ರಾಮಕೃಷ್ಣ , ಉಮೇಶ್, ಗಣೇಶ, ಸುಂದರ ಗೌಡ,ತಿಮ್ಮಪ್ಪ, ಮೊದಲಾದವರು ಉಪಸ್ಥಿತರಿದ್ದರು.

ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ 73ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ… ಸ್ವಾತಂತ್ರ್ಯೋತ್ಸವದ ದ್ವಜರೋಹಣವನ್ನು ಸಂಘದ ಅಧ್ಯಕ್ಷರಾದ ರಮೇಶ್ ಭಟ್ ಕಲ್ಪುರೆ ನೆರವೇರಿಸಿ ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಸುಂದರ ಗೌಡ ಮಂಡೆಕರ, ನಿರ್ದೇಶಕರಾದ ರಾಜೀವಿ, ಮುಖ್ಯಕಾರ್ಯನಿವೃಹಣಾಧಿಕಾರಿ ಚಾಕೋ ಕೆ.ಎಂ, ಸಹಾಯಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಾಲಕೃಷ್ಣ ಜಿ, ಸಿಬ್ಬಂದಿಗಳಾದ ಅಶ್ವಿತಾ,ಮೇದಪ್ಪ ಗೌಡ,ಮಮತಾ,ರಾದೇಶ್ ಮತ್ತಿತರರು ಉಪಸ್ಥಿತರಿದ್ದರು. 

ಕುಂಡಾಜೆ ಸರಕಾರಿ ಕಿ.ಪ್ರಾ.ಶಾಲೆಯಲ್ಲಿ 73ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ… ಎಸ್‌ಡಿಎಂಸಿ ಅಧ್ಯಕ್ಷ ಮುತ್ತಪ್ಪ ಗೌಡ ದ್ವಜರೋಹಣ ನೆರವೇರಿಸಿದರು. ಬಳಿಕ ಎಸ್‌ಡಿಎಂಸಿ ಅಧ್ಯಕ್ಷ ಮುತ್ತಪ್ಪ ಗೌಡರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ರಾಮಕುಂಜ ಗ್ರಾ.ಪಂ.ಸದಸ್ಯೆ ವಾರಿಜ, ಆಶಾ ಕಾರ್ಯಕರ್ತೆ ಪದ್ಮಾವತಿ, ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ, ಸ್ಥಳೀಯ ಮುಖಂಡರಾದ ಕರಿಯ ಗಾಣಂತಿ, ಇಬ್ರಾಹಿಂ ಕುಂಡಾಜೆ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಪಿ.ಎಸ್.ನಾರಾಯಣ ಭಟ್‌ರವರು ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಮಾತನಾಡಿದರು. ಗೌರವ ಶಿಕ್ಷಕಿ ಗೀತಾ ಎನ್.,ವಂದಿಸಿದರು. ಅತಿಥಿ ಶಿಕ್ಷಕಿ ಚಿತ್ರಾವತಿ ಬಿ., ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರು, ಪೋಷಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೊಲ್ಯ ಗ್ರಾಮದ ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ ಗೌಡ ಕೊಲ್ಯ ಧ್ವಜಾರೋಹಣ ಮಾಡಿದರು. ಕೊಲ ಗ್ರಾ.ಪಂ.ಸದಸ್ಯರಾದ ತಿಮ್ಮಪ್ಪ ಸಂಕೇಶ, ಹರಿಣಿ , ಮೀನಾಕ್ಷಿ ಬುಡಲೂರು, ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ಅದ್ಯಕ್ಷ ಗಣೇಶ್ ಗೌಡ ಎರ್ಮಡ್ಕ , ಸಬಳೂರು ಶ್ರೀ ರಾಮ ಭಜನಾ ಮಂಡಳಿ ಅಧಕ್ಷ ರಾಮಚಂದ್ರ ನಾಯ್ಕ ಏಣಿತ್ತಡ್ಕ , ಸಬಳೂರು ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷ ಗುರುಪ್ರಸಾದ್ ಸಬಳೂರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಗೋಳಿತ್ತಡಿ-ಏಣಿತಡ್ಕ ರಸ್ತೆಯಲ್ಲಿ ಮೆರವಣಿಗೆ ನಡೆಯಿತು.

ಕೊಲ್ಯ ಗ್ರಾಮದ ಏಣಿತ್ತಡ್ಕ (1) ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ಅದ್ಯಕ್ಷೆ ತೃಪ್ತಿ ಕಡೆಂಬ್ಯಾಲು ಧ್ವಜಾರೋಹಣಗೈದರು. ಸಬಳೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶೇಖರ ಗೌಡ ಕೊಲ್ಯ ಶುಭಹಾರೈಸಿದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಬಳೂರು ಒಕ್ಕೂಟದ ಗಣೇಶ್ ಗೌಡ ಎರ್ಮಡ್ಕ, ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷ ಗುರುಪ್ರಸಾದ್ ಸಬಳೂರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್‍ಯಕರ್ತೆ ವೇದಾವತಿ ಸ್ವಾಗತಿಸಿ ವಂದಿಸಿದರು. ಸಹಾಯಕಿ ಮೀನಾಕ್ಷಿ ಸಹಕರಿಸಿದರು.

ಕುಂಡಾಜೆ ಸರಕಾರಿ ಕಿ.ಪ್ರಾ.ಶಾಲೆಯಲ್ಲಿ 73ನೇ ವರ್ಷದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಎಸ್‌ಡಿಎಂಸಿ ಅಧ್ಯಕ್ಷ ಮುತ್ತಪ್ಪ ಗೌಡ ನೆರವೇರಿಸಿದರು. ಬಳಿಕ ಎಸ್‌ಡಿಎಂಸಿ ಅಧ್ಯಕ್ಷ ಮುತ್ತಪ್ಪ ಗೌಡರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ರಾಮಕುಂಜ ಗ್ರಾ.ಪಂ.ಸದಸ್ಯೆ ವಾರಿಜ, ಆಶಾ ಕಾರ್ಯಕರ್ತೆ ಪದ್ಮಾವತಿ, ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ, ಸ್ಥಳೀಯ ಮುಖಂಡರಾದ ಕರಿಯ ಗಾಣಂತಿ, ಇಬ್ರಾಹಿಂ ಕುಂಡಾಜೆ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಪಿ.ಎಸ್.ನಾರಾಯಣ ಭಟ್‌ರವರು ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಮಾತನಾಡಿದರು.

ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘದಿಂದ ನೆಲ್ಯಾಡಿಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ…. ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್‌ರವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ರಫೀಕ್ ಸೀಗಲ್‌ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಜ್ಯೋತಿಷಿ ಶ್ರೀಧರ ಗೋರೆ, ವರ್ತಕ ಸಂಘದ ಗೌರವಾಧ್ಯಕ್ಷರೂ ಆದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ವರ್ತಕ ಸಂಘದ ಕೋಶಾಧಿಕಾರಿ ಯು.ಪಿ.ವರ್ಗೀಸ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ನ್ಯಾಯವಾದಿ ಎನ್.ಇಸ್ಮಾಯಿಲ್ ನೆಲ್ಯಾಡಿ, ನೆಲ್ಯಾಡಿ ಜೆಸಿಐ ಅಧ್ಯಕ್‌ಷ ಇಸ್ಮಾಯಿಲ್, ವರ್ತಕರಾದ ಅಬ್ದುಲ್ ರಹಿಮಾನ್ ಅಲಂಪಾಡಿ, ಎನ್.ಎಸ್.ಸುಲೈಮಾನ್, ನೆಲ್ಯಾಡಿ ಗ್ರಾ.ಪಂ.ಕಾರ್ಯದರ್ಶಿ ದೇವರಾಜ್, ಸದಸ್ಯರಾದ ಹಮೀದ್ ಪೈಂಟರ್, ಅಬ್ರಹಾಂ ಕೆ.ಪಿ., ಜಯಕರ್ನಾಟಕ ಪುತ್ತೂರು ತಾಲೂಕು ಘಟಕದ ಉಪಾಧ್ಯಕ್ಷ ನಾಝೀಂ ಸಾಹೇಬ್, ಸತೀಶ್ ಭಟ್, ಜೋನ್ ಸ್ಟಾರ್, ನಾಸೀರ್ ಸೀಗಲ್, ಜುನೈದ್ ಎಬಿಸಿ ಬೇಕರಿ ಸೇರಿದಂತೆ ವರ್ತಕರು, ಗ್ರಾಮಸ್ಥರು ಉಪಸ್ಥಿತರಿದ್ದರು

 ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯಶಿಕ್ಷಕ ಟಿ.ನಾರಾಯಣ ಭಟ್‌ರವರು ಧ್ವಜಾರೋಹಣ ನೆರವೇರಿಸಿದರು. ಆಸ್ಪತ್ರೆಯ ವೈದ್ಯರಾದ ಡಾ. ಮುರಳೀಧರ, ಡಾ.ಸುಧಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೊಣಾಲು ನೀತಿ ಟ್ರಸ್ಟ್ ವತಿಯಿಂದ ಕೊಣಾಲುನಲ್ಲಿ ನಡೆದ 73 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ…. ಧ್ವಜಾರೋಹಣವನ್ನು ಅರುಣಾಚಲ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧ ರೋಯ್ ಎನ್.ಎಸ್.ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೊಣಾಲು ಗ್ರಾ.ಪಂ.ಸದಸ್ಯ ನೇಮಿರಾಜ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಯ ಕೊಣಾಲು ಒಕ್ಕೂಟದ ಅಧ್ಯಕ್ಷ ಶಾಜು, ನೀತಿ ಟ್ರಸ್ಟ್ ನೆಲ್ಯಾಡಿ ವಲಯಾಧ್ಯಕ್ಷ ಅಬ್ರಹಾಂ, ಕಾರ್ಯದರ್ಶಿ ಲಿತಿನ್, ಸದಸ್ಯರಾದ ವಿಶ್ವನಾಥ, ಶಶಿಧರ್, ತಂಗಚ್ಚನ್, ಬಾಬು, ಬಿನ್ಸಿ ಅಬ್ರಹಾಂ, ರೀನಾ, ಉಮೇಶ್, ಕೇಶವ, ಹಿರಿಯರಾದ ಚಾರ್ಜ್‌ರವರು ಉಪಸ್ಥಿತರಿದ್ದರು

ಕೊಣಾಲು ನೀತಿ ಟ್ರಸ್ಟ್ ವತಿಯಿಂದ ಕೊಣಾಲುನಲ್ಲಿ ನಡೆದ 73 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ… ಕಾರ್ಯಾಧ್ಯಕ್ಷ ನೇಮಿರಾಜ ಕಲಾಯಿ ಧ್ವಜಾರೋಹಣ ನೆರವೇರಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ಚಂದ್ರ, ಪ.ಪೂ,ಕಾಲೇಜು ಪ್ರಾಂಶುಪಾಲ ದಿನೇಶ್ ಕುಮಾರ್, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಶಾಂತರಾಮ ಓಡ್ಲ ನಿರೂಪಿಸಿದರು.

ಮರ್ಧಾಳ ಗ್ರಾ.ಪಂನಲ್ಲಿ 73ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು. ಧ್ವಜರೋಹಣವನ್ನು ಪಂಚಾಯತ್ ಅಧ್ಯಕ್ಷ ಲತಾ.ಕೆ.ಎಸ್‌ರವರು ನೆರವೇರಿಸಿ ಶುಭಹಾರೈಸಿದರು. ಗ್ರಾ.ಪಂ ಸದಸ್ಯ ಸುಲೈಮಾನ್.ಪಿ ,ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿಗ್ರಾ.ಪಂ ಉಪಾಧ್ಯಕ್ಷೆ ಗಿರಿಜ, ಸದಸ್ಯರಾದ ಲಲಿತಾ.ಎಂ, ಮೀನಾಕ್ಷಿ, ಹರೀಶ.ಕೆ, ಗ್ರಾ.ಪಂ ಮಾಜಿ ಅಧ್ಯಕ್ಷ ಜನಾರ್ಧನ ಗೌಡ ಪುತ್ತಿಲ, ಹಾ.ಉ.ಸ.ಸಂ.ಅಧ್ಯಕ್ಷ ಮನೋಹರ ರೈ, ಎ.ಪಿ.ಎಂ.ಸಿ ಸದಸ್ಯ ಮೇದಪ್ಪ ಗೌಡ, ಸಾರ್ವಜನಿಕರು ಉಪಸ್ಥಿತರಿದ್ದರು.

ನೂಜಿಬಾಳ್ತಿಲ ಗ್ರಾಮ ಪಂಚಾಯತ್‌ನಲ್ಲಿ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು. ಗ್ರಾ.ಪಂ. ಸದಸ್ಯರಾದ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಎ., ಸ್ವಾಗತಿಸಿದರು.

ನೂಜಿಬಾಳ್ತಿಲ ಕಲ್ಲುಗುಡ್ಡೆ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ 73ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು. ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಮಕ್ಕಳ ಪೋಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಶ್ರೆಯಾಂಸ್ ಸ್ವಾಗತಿಸಿ, ಪಂ.ಅಬಿವೃದ್ಧಿ ಅಧಿಕಾರಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಧ್ವಜಗೀತೆ ಹಾಡಿದರು.

ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ 73ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ತಾ.ಪಂ. ಸದಸ್ಯ ಗಣೇಶ್ ಕೈಕುರೆ ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು.

ಮೀನಾಡಿ ಸ.ಹಿ.ಪ್ರಾ.ಶಾಲೆಯಲ್ಲಿ 73ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ನೂಜಿಬಾಳ್ತಿಲ ಗ್ರಾ.ಪಂಸದಸ್ಯ ಕೆ.ಜೆ ತೋಮಸ್ ಧ್ವಜಾರೊಹಣ ನೇರವೇರಿಸಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕೋಸ್ಕರ ತ್ಯಾಗ-ಬಲಿದಾನದೊಂದಿಗೆ ಹೋರಾಡಿದ ನೇತಾರರನ್ನು ಸ್ಮರಿಸಿಕೊಂಡು ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಪ್ರಾರ್ಥಿಸಿದಲ್ಲದೆ ಅವರು ತಂದು ಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಿಕೊಂಡು ಮುನ್ನಡೆಯೋಣ ಎಂದರು.

ನೂರುಲ್ ಹುದಾ ಅರೇಬಿಕ್ ಮದ್ರಸ ಕೋಚಕಟ್ಟೆಯಲ್ಲಿ ಮದರಸ ಅಧ್ಯಕ್ಷ ಇಸ್ಮಾಯಿಲ್ ಅಲ್‌ಅಮೀನ್ ಧ್ವಜಾರೋಹಣ ನೆರವೇರಿಸಿದರು. ಮದರಸದ ಪ್ರಧಾನ ಅಧ್ಯಾಪಕ ಎಂ.ಕೆ.ಅಶ್ರಫ್ ಮುಸ್ಲಿಯಾರ್ ಸ್ವಾತಂತ್ರ್ಯ ದಿನದ ಮಹತ್ವ ತಿಳಿಸಿದರು. ಎಸ್‌ಕೆಎಸ್‌ಎಸ್‌ಎಫ್ ಕುಂತೂರು ಶಾಖೆ ಪ್ರಧಾನ ಕಾರ್ಯದರ್ಶಿ ನಯಾಝ್, ಅಬ್ಬಾಸ್ ಮಕ್ಬೂಲ್, ಅಶ್ರಫ್ ಎಂ., ಲತೀಫ್ ಮರುವಂತಿಲ, ಅಬ್ದುಲ್ಲಾ ಪಿ.ಎ., ಜಮಾಅತ್ ಕಾರ್ಯದರ್ಶಿ ಸಿದ್ದೀಕ್ ಅಲ್‌ಅಮೀನ್, ಅಬ್ಬಾಸ್ ಕಟ್ಲೇರಿ, ರಮ್ಲ ಎ., ಯುಸೂಫ್ ಚಾಮೆತ್ತಡ್ಕ, ಅಬೂಬಕ್ಕರ್ ಡಿ.ಎಸ್., ಮುಹಮ್ಮದ್ ಅಲಿ ಕೋಚಕಟ್ಟೆ, ಹಂಝ ಹೊಸಮನೆ, ಉಮ್ಮರ್ ಪೊಸಳಿಗೆ ಹಾಗೂ ನೂರುಲ್ ಹುದಾ ಯಂಗ್‌ಮೆನ್ಸ್ ಸದಸ್ಯರುಗಳು, ಮದರಸದ ವಿದ್ಯಾರ್ಥಿಗಳು ಹಾಜರಿದ್ದರು. ಆಲಂಕಾರು ಪೂಜಾ ಸ್ಟುಡಿಯೋ ಮಾಲಕ ಉಮೇಶ್ ನಾಯಕ್‌ರವರು ಸಿಹಿ ತಿಂಡಿ ನೀಡಿ ಸಹಕರಿಸಿದರು.

 ಕುಂತೂರು ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಅನೀಸ್ ನೂಜಿಲ ಧ್ವಜಾರೋಹಣ ನೆರವೇರಿಸಿದರು. ಖತೀಬ್ ಮಜೀದ್ ದಾರಿಮಿ ಕುಂಬ್ರ ಮಾತನಾಡಿ, ಮುಸ್ಲಿಮರಿಗೆ ಸ್ವಾತಂತ್ರ್ಯ ಸಂಗ್ರಾಮವೆಂಬುದು ಧಾರ್ಮಿಕ ಬಾಧ್ಯತೆಯೂ ಆಗಿತ್ತು. ಆ ನಿಟ್ಟಿನಲ್ಲಿ ಇತರ ನೇತಾರರಂತೆ ಧಾರ್ಮಿಕ ಉಲಮಾಗಳು ಬ್ರಿಟಿಷ್ ವಸಾಹತು ಶಾಹಿಯ ವಿರುದ್ಧ ಹೋರಾಡಿದರು.

 ಬೆಥನಿ ಕಾಲೇಜಿನಲ್ಲಿ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ನಿವೃತ್ತ ಸೇನಾನಿ ಐಸಕ್ ಎಮ್.ಜೆಯವರು ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ನಿರ್ದೇಶಕರಾದ ರೆ|ಫಾ|ಸಕರಿಯಾಸ್ ನಂದಿಯಾಟ್ ಶುಭಹಾರೈಸಿದರು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬೆಥನಿ ವಿದ್ಯಾಸಂಸ್ಥೆಯಿಂದ ಗೋಳಿಯಡ್ಕ ಜಂಕ್ಷನ್‌ವರೆಗೆ ಮೆರವಣಿಗೆ ನಡೆದು ಬಳಿಕ ವಿದ್ಯಾಸಂಸ್ಥೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯರಾದ ಜಾರ್ಜ್ ಟಿ.ಎಸ್ ಸ್ವಾಗತಿಸಿ, ಪ್ರೌಢವಿಭಾಗದ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ವಂದಿಸಿದರು. ಉಪನ್ಯಾಸಕರು, ಶಿಕ್ಷಕರು-ಶಿಕ್ಷಕೇತರರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.

ಕೊಂಬಾರು ಗ್ರಾ.ಪಂನಲ್ಲಿ 73ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು. ಗ್ರಾ.ಪಂ ಅಧ್ಯಕ್ಷ ಅಜೀತ್ ಎಸ್ ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಉಪಾಧ್ಯಕ್ಷೆ ಜಯಶ್ರೀರಾಮಚಂದ್ರ, ಸದಸ್ಯರಾದ ಮಧುಸೂದನ್ , ದೇವಕಿ , ಲಲಿತ, ಪುರುಷೋತ್ತಮ, ರಮೇಶ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಅಂಗನವಾಡಿ ಪುಟಾಣಿ ಮಕ್ಕಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಡಬ ಗ್ರಾ.ಪಂನಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಗ್ರಾ.ಪಂ ಅಧ್ಯಕ್ಷ ಬಾಬುಮುಗೇರ ಧ್ವಜಾರೋಹಣ ನೆರವೇರಿಸಿದರು. ತಾ.ಪಂ ಸದಸ್ಯ ಫಝಲ್ ಕೋಡಿಂಬಾಳ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು, ಗ್ರಾ.ಪಂ ಉಪಾಧ್ಯಕ್ಷೆ ಜ್ಯೋತಿ.ಡಿ ಕೋಲ್ಪೆ, ಸದಸ್ಯರಾದ ನೀಲಾವತಿಶಿವರಾಂ,ಸರೋಜಿನಿ ಆಚಾರ್ಯ, ಜಯಂತಿಗಣಪಯ್ಯ, ಕೆ.ಎಂ ಹನೀಫ್, ಆದಂ ಕುಂಡೋಳಿ, ಹರ್ಷ ಕೋಡಿ, ಸುಶೀಲ, ರೇವತಿ, ಯಶೋಧ, ಸಂಧ್ಯಾಮೋಹನ್, ಉಪಸ್ಥಿತರಿದ್ದರು. ಗ್ರಾ.ಪಂ ಅಬಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ್ ಕುಮಾರ್ ವಂದಿಸಿದರು. ಗ್ರಾ.ಪಂ ಸಿಬ್ಬಂದಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ ಸಿಬ್ಬಂದಿಗಳು ಸಹಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.