ನಿಡ್ಪಳ್ಳಿ ಶಾಲಾ ಸಹಶಿಕ್ಷಕ ಲಿಂಗಪ್ಪ ನಾಯ್ಕರಿಗೆ ವಿದಾಯ ಕೂಟ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಲಿಂಗಪ್ಪ ನಾಯ್ಕರವರು ಕಳೆದ ಏಪ್ರಿಲ್ ತಿಂಗಳಲ್ಲಿ ಸೇವಾ ನಿವೃತ್ತಿ ಹೊಂದಿದ್ದು ಅವರಿಗೆ ಅ.15 ರಂದು ನಡೆದ 73 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪತ್ನಿ ಅಂಗನವಾಡಿ ಕಾರ್ಯಕರ್ತೆ ವಸಂತಿಯವರೊಂದಿಗೆ ಸನ್ಮಾನಿಸುವ ಮೂಲಕ ಬೀಳ್ಕೊಡಲಾಯಿತು. ಶಾಲಾ ಎಸ್.ಡಿ.ಎಂ.ಸಿ , ಶಾಲಾ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿಗಳ ವತಿಯಿಂದ ಶಾಲು ಹೊದಿಸಿ, ಹಾರ, ಸ್ಮರಣಿಕೆ, ಫಲಪುಷ್ಪ ಹಾಗೂ ಚಿನ್ನದ ಉಂಗುರ ತೊಡಿಸಿ ಗೌರವಿಸಲಾಯಿತು.

ನಂತರ ಮಾತನಾಡಿದ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ ರೈ ಲಿಂಗಪ್ಪ ನಾಯ್ಕರವರು ಶಾಂತ ಸ್ವಭಾವದವರಾಗಿದ್ದು ತನ್ನ ಸೇವೆಯಲ್ಲಿ ಆನಂದ ಕಂಡವರು. ಯಾವುದೇ ಸಮಯದಲ್ಲೂ ಕೋಪಿಸದೆ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಿ ವಿದ್ಯಾರ್ಥಿಗಳಿಗೆ ಮತ್ತು ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು ಎಂದು ತನ್ನೊಂದಿಗೆ 20 ವರ್ಷದ ಒಡನಾಟದ ಸಿಹಿ ನೆನಪುಗಳ ಬಗ್ಗೆ ತಿಳಿಸಿ ಮುಂದಿನ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಸಹಶಿಕ್ಷಕಿಯರಾದ ಸರಸ್ವತಿ, ಶಾರದಾರವರು ಲಿಂಗಪ್ಪ ನಾಯ್ಕರ ಸಹಕಾರ ಮನೋಭಾವ, ಕಾರ್ಯವೈಖರಿ ಮತ್ತು ಆದರ್ಶ ಸೇವೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಚಂದ್ರಶೇಖರ ಪ್ರಭು ಶುಭ ಹಾರೈಸಿದರು. ಶಾಲಾ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಲಿಂಗಪ್ಪ ನಾಯ್ಕರು ತನ್ನ ಶಿಕ್ಷಕ ವೃತ್ತಿಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿಡ್ಪಳ್ಳಿ ಒಕ್ಕೂಟದ ಅಧ್ಯಕ್ಷರೂ ಬೆಟ್ಟಂಪಾಡಿ ವಲಯಾಧ್ಯಕ್ಷರೂ ಆದ ನವೀನ್ ಕುಮಾರ್ ಎಂ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿದರು. ಶಾಂತದುರ್ಗಾ ಸ್ಪೊರ್ಟ್ಸ್ ಕ್ಲಬ್ ನಿಡ್ಪಳ್ಳಿ ಇದರ ಅಧ್ಯಕ್ಷ ಸತ್ಯನಾರಾಯಣ ಮಣಿಯಾಣಿ. ಬಿ, ಅಂಗನವಾಡಿ ಕಾರ್ಯಕರ್ತೆ ಜಯಂತಿ, ಲಿಂಗಪ್ಪ ನಾಯ್ಕರ ಪುತ್ರ ರಂಜಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗಾಧರ ಸಿ.ಎಚ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮಕ್ಕಳಿಗೆ ಐಡಿ, ಬೆಲ್ಟ್ ವಿತರಣೆ: ಮಲರಾಯ ಫ್ರೆಂಡ್ಸ್ ನಿಡ್ಪಳ್ಳಿ ಇದರ ಪ್ರಾಯೋಜಕತ್ವದಲ್ಲಿ ನೀಡಿದ ಐಡಿ ಮತ್ತು ಬೆಲ್ಟನ್ನು ಅಧ್ಯಕ್ಷ ರಾಮ ಆನಾಜೆ ಮತ್ತು ಪದಾಧಿಕಾರಿಗಳು ಮಕ್ಕಳಿಗೆ ವಿತರಿಸಿದರು.

ಶೂ ವಿತರಣೆ: ಸರಕಾರದಿಂದ ಶಾಲಾ ಮಕ್ಕಳಿಗೆ ನೀಡಿದ ಶೂ ಸಾಕ್ಸನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮಕ್ಕಳಿಗೆ ವಿತರಿಸಿದರು.

ಚಯರ್ ಕೊಡುಗೆ: ನಿವೃತ್ತ ಶಿಕ್ಷಕ ತನ್ನ ಸವಿ ನೆನಪಿಗಾಗಿ ಶಾಲೆಗೆ 5 ಪ್ಲಾಸ್ಟಿಕ್ ಚಯರನ್ನು ಕೊಡುಗೆಯಾಗಿ ನೀಡಿ ಎಸ್.ಡಿ.ಎಂ.ಸಿ ಅಧ್ಯಕ್ಷರಿಗೆ ಅದನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.

ಶಾಲಾ ಮುಖ್ಯ ಗುರು ತೋಪಯ್ಯ. ಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಶಿಕ್ಷಕಿ ಸುಮ.ಡಿ ಸನ್ಮಾನಿತರ ಪರಿಚಯ ವಾಚಿಸಿ ವಂದಿಸಿದರು. ಅತಿಥಿ ಶಿಕ್ಷಕಿ ಚಂದ್ರಕಲಾ. ಡಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು,ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.