ಆ.20: ವಿ.ವಿ ಮಟ್ಟದ ಅಂತರ್‌ಕಾಲೇಜು ಗುಡ್ಡಗಾಡು ಓಟ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಗುಡ್ಡಗಾಡು ಓಟ(ಕ್ರಾಸ್ ಕಂಟ್ರಿ) ಸ್ಪರ್ಧೆಯು ಆ.20ರಂದು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಕ್ಸೇವಿಯರ್ ಡಿ ಸೋಜ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯ ಎರಡನೇ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು 2014ರಲ್ಲಿ ಪ್ರಾರಂಭಗೊಂಡಿದೆ. ಪ್ರಾರಂಭದಲ್ಲಿ ನೆಲ್ಲಿಕಟ್ಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡ ಕಾಲೇಜು ಪ್ರಸ್ತುತ ಜಿಲ್ಲಾಡಳಿತ ಕೊಡಮಾಡಿರುವ ಹಳೆಯ ತಹಶೀಲ್ದಾರರ ಕಛೇರಿಯಲ್ಲಿ ಕಾರ್ಯಾಚರಿಸುತ್ತಾ ಇದ್ದು, ಕಾಲೇಜಿನಲ್ಲಿ ಒಟ್ಟು 716 ವಿದ್ಯಾರ್ಥಿನಿಯರು ವ್ಯಾಸಂಗ ನಡೆಸುತ್ತಿದ್ದಾರೆ. ಕಾಲೇಜಿಗೆ ಸ್ವಂತ ಸ್ಥಳದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಆನೆಮಜಲು ಎಂಬಲ್ಲಿ ನಿವೇಶನ ಮಂಜೂರಾಗಿದ್ದು ಶೀಘ್ರದಲ್ಲೇ ಸ್ಥಳಾಂತರಗೊಳ್ಳಲಿದೆ. ಕಾಲೇಜಿನ ವತಿಯಿಂದ 2017-18ರ ಸಾಲಿನಲ್ಲಿ ವಿ.ವಿ ಮಟ್ಟದ ಈಜು ಸ್ಪರ್ಧೆ ಹಾಗೂ 2018-19ರ ಸಾಲಿನಲ್ಲಿ ವಿ.ವಿ ಮಟ್ಟದ ಮಹಿಳಾ ಕೊಕೊ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿರುತ್ತೇವೆ.

450 ಮಂದಿ ಸ್ಪರ್ಧಿಗಳು
ಪುರುಷರಿಗೆ 10 ಕಿ.ಮೀ, ಮಹಿಳೆಯರಿಗೆ 6 ಕಿ.ಮೀ ಓಟ
ಮಂಗಳೂರು ವಿಶ್ವವಿದ್ಯಾಲಯವು ಪುರುಷರಿಗಾಗಿ ಕುರುಂಜಿ ವಿಶ್ವನಾಥ ಗೌಡ ರೋಲಿಂಗ್ ಟ್ರೋಫಿ ಹಾಗೂ ಮಹಿಳೆಯರಿಗಾಗಿ ಕೈಕುರೆ ರಾಮಣ್ಣಗೌಡ ಮೆಮೋರಿಯಲ್ ರೋಲಿಂಗ್ ಟ್ರೋಫಿಗಾಗಿ ಗುಡ್ಡಗಾಡು ಓಟವನ್ನು ಪ್ರತಿವರ್ಷ ನಡೆಸುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಮಂಗಳೂರು, ಉಡುಪಿ, ಕೊಡಗು ಜಿಲ್ಲೆಗಳ ಪದವಿ ಕಾಲೇಜುಗಳ ಸುಮಾರು 300 ಪುರುಷ ಮತ್ತು 150ಮಹಿಳಾ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಈ ಭಾರಿಯ ಸ್ಪರ್ಧೆಯಲ್ಲಿ ಟ್ರೋಫಿಗಾಗಿ ಪುರುಷರು ಸುಮಾರು 10 ಕಿ.ಮೀ. ಹಾಗೂ ಮಹಿಳಾ ಸ್ಪರ್ಧಿಗಳು 6 ಕಿ.ಮೀ. ಓಟ ನಡೆಸಲಿದ್ದು, ವೈಯಕ್ತಿಕ ಹಾಗೂ ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ.

ಬೆಳಿಗ್ಗೆ 5.30 ಕ್ಕೆ ಪ್ರಾರಂಭ:
ಗುಡ್ಡಗಾಡು ಓಟವು ಬೆಳಿಗ್ಗೆ 6ಗಂಟೆಗೆ ನಡೆಯಲಿದ್ದು ಆ.19ರಂದು ವಿವಿಧ ಕಾಲೇಜಿನ ಸ್ಪರ್ಧಾಳುಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ವರದಿ ಮಾಡಿಕೊಳ್ಳಲಿದ್ದಾರೆ. ಸ್ಪರ್ಧಾಳುಗಳು ಹಾಗೂ ಶಿಕ್ಷಕರಿಗೆ ಮಹಿಳಾ ಕಾಲೇಜಿನ ವತಿಯಿಂದ ವಸತಿ ಸೌಲಭ್ಯವನ್ನು ಒದಗಿಸಲಾಗುವುದು. ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಬಳಿಯಿಂದ ಪ್ರಾರಂಭವಾಗಲಿದ್ದು ಹುಡುಗರ ವಿಭಾಗದ ಸ್ಪರ್ಧೆಗೆ ಸಹಾಯಕ ಕಮಿಷನರ್ ಎಚ್.ಕೆ.ಕೃಷ್ಣಮೂರ್ತಿಯವರು ಚಾಲನೆ ನೀಡಲಿದ್ದಾರೆ. ಮಹಿಳಾ ವಿಭಾಗದ ಸ್ಪರ್ಧೆಗೆ ಪ್ರಸಿದ್ಧ ಮಹಿಳಾ ಉದ್ಯಮಿ ರಂಜಿತಾ ಶಂಕರ್ ಚಾಲನೆ ನೀಡಲಿದ್ದಾರೆ.

ಸ್ಪರ್ಧೆಯು ಅದೇ ದಿನ ಬೆಳಿಗ್ಗೆ 9.00ಕ್ಕೆ ಕೊನೆಗೊಳ್ಳಲಿದೆ. ಹಲವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ತೀರ್ಪುಗಾರರಾಗಿ ಹಾಗೂ ಮಾರ್ಗದರ್ಶಕರಾಗಿ ಆಗಮಿಸಿ ಸ್ಪರ್ಧೆಯನ್ನು ನಡೆಸಲು ಸಹಕರಿಸಲಿದ್ದಾರೆ. ಸ್ಪರ್ಧಿಗಳಿಗೆ ಓಟದ ವೇಳೆ ತುರ್ತು ಚಿಕಿತ್ಸಾ ವಾಹನ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯ ಜೊತೆಗೆ ಪೈಲೆಟ್‌ಗಳನ್ನು ಹಾಗೂ ಸ್ವಯಂ ಸೇವಕರನ್ನು ಕಲ್ಪಿಸಲಾಗುತ್ತದೆ. ಓಟದ ಸಮಯದಲ್ಲಿ ಯಾವುದೇ ತೊಂದರೆಯಾಗದಂತೆ ಪೋಲಿಸ್ ಇಲಾಖೆಯ ಸಹಾಯ ಪಡೆದುಕೊಳ್ಳಲಾಗಿದೆ. ಅದೇ ರೀತಿ ಸ್ಪರ್ಧಿಗಳ ಯೋಗಕ್ಷೇಮಕ್ಕಾಗಿ ಪುತ್ತೂರು ಆರೋಗ್ಯ ಇಲಾಖೆಯ ಸಹಕಾರ ಹಾಗೂ ಅಂಬ್ಯುಲೆನ್ಸ್‌ನ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದರು.

ಓಟ ಹೀಗೆ ಸಾಗಲಿದೆ:
ಪುರುಷರ ವಿಭಾಗದ ಗುಡ್ಡಗಾಡು ಸ್ಪರ್ಧೆಯು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಂಭಾಗದಿಂದ ಆರಂಭಗೊಂಡು ಬೈಪಾಸ್-ನೆಹರು ನಗರ ಮಾರ್ಗವಾಗಿ ಸಾಗಿ ಬನ್ನೂರು ಬಲಮುರಿ ವಿದ್ಯಾಗಣಪತಿ ದೇವಸ್ಥಾನದ ತನಕ ಸಾಗಿ ಬಳಿಕ ಅಲ್ಲಿಂದ ತಿರುವು ಪಡೆದು ಪ್ರಾರಂಭಿಕ ಸ್ಥಳವಾದ ತೆಂಕಿಲದ ವಿವೇಕಾನಂದ ಶಾಲಾ ಮೈದಾನದಲ್ಲಿ ಕೊನೆಗೊಳ್ಳಲಿದೆ. ಮಹಿಳೆ ವಿಭಾಗದ ಓಟವು ಬನ್ನೂರಿನ ಆರ್.ಟಿ.ಓ ಜಂಕ್ಷನ್ ಬಳಿಯಿಂದ ಆರಂಭಗೊಂಡು ನೆಹರು ನಗರ-ಬೈಪಾಸ್ ಮಾರ್ಗದ ಮೂಲಕ ಸಾಗಿ ತೆಂಕಿಲದ ವಿವೇಕಾನಂದ ಶಾಲಾ ಮೈದಾನದಲ್ಲಿ ಕೊನೆಗೊಳ್ಳಲಿದೆ.

ಬಹುಮಾನ ವಿತರಣೆ
ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಬಪ್ಪಳಿಗೆಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಲಿದೆ. ಶಾಸಕರು, ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷರೂ ಆಗಿರುವ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಎಚ್.ಕೆ.ಕೃಷ್ಣಮೂರ್ತಿ, ಡಿ.ವೈ.ಎಸ್.ಪಿ ದಿನಕರ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಕಿಶೋರ್ ಕುಮಾರ್ ಸಿ.ಕೆ, ಉದ್ಯಮಿ ರಂಜಿತಾ ಶಂಕರ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ಪ್ರೊ.ಝೇವಿಯರ್ ಡಿ’ಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ. ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಅಬ್ದುಲ್ ಕುಂಞ ಕೆ. ಕಾರ್ಯಕ್ರಮದ ಸಂಯೋಜಕರಾಗಿರುತ್ತಾರೆ ಎಂದು ಅವರು ಹೇಳಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಸ್ಟೀವನ್ ಕ್ವಾಡ್ರಸ್, ರಾಜ್ಯಶಾಸ್ತ್ರ ಉಪನ್ಯಾಸಕ ಲಕ್ಷ್ಮೀಕಾಂತ್ ರೈ ಅನಿಕೂಟೇಲು, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಅಬ್ದುಲ್ ಕುಂಞ ಕೆ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.