ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸ್ನೇಹಾಲಯಕ್ಕೆ ದಾಖಲಿಸಿ ಮಾನವೀಯತೆ ಮೆರೆದ ಪುಣಚ ಗ್ರಾಮಸ್ಥರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಹಲವು ದಿನಗಳಿಂದ ಪುಣಚ ಪರಿಸರದಲ್ಲಿ ಸುತ್ತಾಡುತ್ತಿದ್ದ ಮಾನಸಿ ಅಸ್ವಸ್ಥ ಮಹಿಳೆಯೋರ್ವರನ್ನು ಇಲ್ಲಿನ ಗ್ರಾಮಸ್ಥರು ಉಪ್ಪಳದ ಸ್ನೇಹಾಲಯಕ್ಕೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಾನಸಿಕ ಸ್ಥಿತಿ ಕಳೆದುಕೊಂಡ ಈ ಮಹಿಳೆಯು ಯಾರಿಗೂ ತೊಂದರೆ ಕೊಡದೆ ಪೇಟೆಯಲ್ಲಿ ಸುತ್ತಾಡುತ್ತಿರುವುದನ್ನು ಕಂಡ ಪುಣಚ ನಾಗರಿಕ ಹಿತ ರಕ್ಷಣ ವೇದಿಕೆ ಅಧ್ಯಕ್ಷ ವೆಂಕಟರಮಣ ಪುಣಚರವರು ಉಪ್ಪಳದ ಸ್ನೇಹಾಲಯವನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು. ಇದಕ್ಕೆ ತಕ್ಷಣ ಸ್ಪಂಧಿಸಿದ ಸ್ನೇಹಾಲಯದವರು ಮಹಿಳೆಯನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದರು. ಈ ಬಗ್ಗೆ ಮಂಗಳೂರು ಎಸ್‌ಪಿ ಕಛೇರಿಗೆ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಗೂ ಮಾಹಿತಿ ನೀಡಿದ್ದರು. ಅದರಂತೆ ಮಹಿಳೆಯನ್ನು ಸ್ನೇಹಾಲಯದ ಮೇಲ್ವಿಚಾರಕ ಜೋಸೆಫ್‌ರವರು ದಾಖಲು ಮಾಡಿಕೊಂಡು ಮಾನವೀಯತೆ ಮೆರೆದಿದ್ದಾರೆ.

ಈ ಮಾನವೀಯ ಕಾರ್ಯದಲ್ಲಿ ಶಾಫಿ ಮಾಳಿಗೆ, ಸಿರಾಜ್ ಮಣಿಲ, ವೆಂಕಟ್ರಮಣ ಪುಣಚ, ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ, ಮಂಗಳೂರು ಸೂಪರಿಡೆಂಡೆಂಟ್ ಆಫ್ ಪೊಲೀಸ್ ಮತ್ತು ಸಿಬ್ಬಂದಿ ವರ್ಗ, ಪುಣಚ ಫ್ರೆಂಡ್ಸ್ ಸೇರಿದಂತೆ ಗ್ರಾಮಸ್ಥರು ಸಹಕರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.